ಸ್ವಚ್ಛ ಭಾರತ: ಬೆಳಗಾವಿಯಲ್ಲಿ 27 ಸಾವಿರ ಶೌಚಾಲಯ ನಿರ್ಮಾಣ

Posted By:
Subscribe to Oneindia Kannada

ಬೆಳಗಾವಿ, ಆಗಸ್ಟ್ 24: ಸ್ವಚ್ಛ ಭಾರತ ಅಭಿಯಾನದಡಿ, ಕಳೆದ ಮೂರು ತಿಂಗಳಲ್ಲಿ ಬೆಳಗಾವಿ ಜಿಲ್ಲೆಯ 27,598 ಕುಟುಂಬಗಳಿಗೆ ಶೌಚಾಲಯ ವ್ಯವಸ್ಥೆ ನೀಡಲಾಗಿದೆ.

ಬೆಳಗಾವಿ: ಅಕ್ರಮ ಮರಳು ಗಣಿಗಾರಿಕೆ, ಲಾರಿ ಜಪ್ತಿ

ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸಲು ಜಿಲ್ಲಾ ಪಂಚಾಯ್ತಿಯು ಸ್ವ ಆಸಕ್ತಿಯಿಂದ ಮುಂದಾಗಿದ್ದ ಹಿನ್ನೆಲೆಯಲ್ಲಿ, ತ್ವರಿತವಾಗಿ, ಇಷ್ಟು ಪ್ರಮಾಣದಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಸಾಧ್ಯವಾಗಿದೆ.

Under Swachh Bharath Abhiyan over 27,000 toilets have built in Belagavi district

ಎಲ್ಲೆಡೆಯೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಮಕ್ಕಳಿಂದ ಪತ್ರ ಚಳುವಳಿ, ರಕ್ಷಾ ಬಂಧನ ದಿನದಂದು ಸಹೋದರಿಗೆ ಶೌಚಾಲಯ ಕಟ್ಟಿಕೊಡುವ ವಾಗ್ದಾನದಂಥ ಹೊಸ ಆಲೋಚನೆಗಳನ್ನು ಕಾರ್ಯಗತ ಮಾಡಲಾಗಿತ್ತು. ಇದರಿಂದಾಗಿ, ಜನರಲ್ಲಿ ಸ್ಪಷ್ಟ ಅರಿವು ಮೂಡಿಸಲು ಸಹಾಯಕವಾಗಿದೆ ಎಂದು ಹೇಳಲಾಗಿದೆ.

2012ರಲ್ಲಿ ನಡೆಸಲಾಗಿರುವ ಸಮೀಕ್ಷೆಯ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 5.65 ಲಕ್ಷ ಕುಟುಂಬಗಳಿವೆ. ಈ ಪೈಕಿ 2.30 ಲಕ್ಷ ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿದ್ದು, 3.35 ಲಕ್ಷ ಕುಟುಂಬಗಳಲ್ಲಿ ಈವರೆಗೆ 2.23 ಲಕ್ಷ ಕುಟುಂಬಗಳಿಗೆ ಈ ಶೌಚಾಲಯ ವ್ಯವಸ್ಥೆಯನ್ನು ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Under Swachh Bharat Abhiyan, in Belagavi district, over 27,000 toilets have been builted. About 2.23 lakh families got the toilet fecility.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ