ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ 219 ಕೆಜಿ ಬೆಳ್ಳಿ, 11 ಲಕ್ಷ ಹಣ ವಶ

|
Google Oneindia Kannada News

ಬೆಳಗಾವಿ, ಆಗಸ್ಟ್ 26 : ದಾಖಲೆ ಇಲ್ಲದೇ ಸಾಗಣೆ ಮಾಡುತ್ತಿದ್ದ ಹಣ ಮತ್ತು ಬೆಳ್ಳಿಯನ್ನು ಬೆಳಗಾವಿಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದು ಮೂವರನ್ನು ಬಂಧಿಸಿದ್ದಾರೆ. 11 ಲಕ್ಷ ಹಣ ಮತ್ತು 219 ಕೆಜಿ ಬೆಳ್ಳಿಯನ್ನು ಕಾರಿನಲ್ಲಿ ಸಾಗಣೆ ಮಾಡಲಾಗುತ್ತಿತ್ತು.

ಬುಧವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಾರಿನ ತಪಾಸಣೆ ನಡೆಸಿದ ಹಿರೇಬಾಗೇವಾಡಿ ಪೊಲೀಸರು ಬೆಳ್ಳಿ ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದಿಂದ ತಮಿಳುನಾಡಿಗೆ ಈ ಹಣ ಮತ್ತು ಬೆಳ್ಳಿ ಸಾಗಣೆ ಮಾಡಲಾಗುತ್ತಿತ್ತು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. [ಸರ್ಕಾರಿ ವಾಹನದಲ್ಲಿ ಹಣ ಸಾಗಟ]

money

219 ಕೆಜಿ ಬೆಳ್ಳಿಯ ಬಿಸ್ಕತ್‌ಗಳನ್ನು ಕಾರಿನ ಸೀಟಿನ ಕೆಳಗಡೆ ಜೋಡಿಸಲಾಗಿತ್ತು, ಹಣವನ್ನು ಬ್ಯಾಗ್‌ನಲ್ಲಿ ಸಾಗಣೆ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಕಾರಿನಲ್ಲಿದ್ದ ಮೂವರು ಬೆಳ್ಳಿಯನ್ನು ನಾವು ಖರೀದಿ ಮಾಡಿದ್ದೆವು ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ದೊರಕಿಲ್ಲ.

ಕಾರಿನಲ್ಲಿದ್ದವರು ಮಹಾರಾಷ್ಟ್ರದ ಸಾಂಗ್ಲಿಯ ನಿವಾಸಿಗಳು ಎಂದು ತಿಳಿದುಬಂದಿದೆ. ಬಂಧಿತರನ್ನು ಸತೀಶ್ ಭಗವಾನ್ ಸುರ್ಯವಂಶಿ, ದಿಲೀಪ್ ಆನಂದ್ ಮತ್ತು ಕಾರಿನ ಚಾಲಕ ಖಂಡೇರಾವ್ ಎಂದು ಗುರುತಿಸಲಾಗಿದೆ.

ಹಣ ಮತ್ತು ಬೆಳ್ಳಿ ಸಾಗಣೆ ಕುರಿತು ಹೆಚ್ಚಿನ ತನಿಖೆ ನಡೆಸಲು ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಬಂಧಿತರ ವಿಚಾರಣೆ ನಡೆಯುತ್ತಿದೆ.

English summary
Unaccounted 11 lakh cash and 219 Kg silver bars seized by Hirebagewadi police in Belagavi on Wednesday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X