ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೃತೀಯ ಲಿಂಗಿಯ ಮದುವೆಯಾದ ಭುವನೇಶ್ವರದ ಬಸುದೇವ್

|
Google Oneindia Kannada News

ಭುವನೇಶ್ವರ, ಜನವರಿ 27: ತೃತೀಯ ಲಿಂಗಿಯೊಬ್ಬರು ಹಸೆಮಣೆ ಏರುವ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ. ಮೇಘನಾ ಮದುವೆಯಾಗಿರುವುದು ಬಸುದೇವ್ ಎಂಬಾತನನ್ನು. ಭುವನೇಶ್ವರ ನಗರ ಶುಕ್ರವಾರ ಈ ಮದುವೆಗೆ ಸಾಕ್ಷಿಯಾಯಿತು. "ಈ ದಿನ ನನಗೆ ಬಹಳ ಖುಷಿಯಾಗಿದೆ. ತೃತೀಯ ಲಿಂಗಿಯನ್ನು ಮದುವೆಯಾಗುವ ದಿಟ್ಟ ನಿರ್ಧಾರ ಮಾಡಿದ ಬಸುದೇವ್ ಗೆ ಧನ್ಯವಾದ" ಎಂದಿದ್ದಾರೆ ಮೇಘನಾ.

ತೃತೀಯ ಲಿಂಗಿಗಳು ಮದುವೆಯಾಗಲು, ಮಕ್ಕಳು ಹೆರಲು ಸಾಧ್ಯವಿಲ್ಲ ಎಂದು ಜನ ಯೋಚಿಸ್ತಾರೆ. ಆದರೆ ಅವರ ಆಲೋಚನೆ ತಪ್ಪು ಎಂಬುದನ್ನು ನಾನು ಸಾಬೀತು ಮಾಡ್ತಿದ್ದೀನಿ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಯಾವುದೇ ಮಹಿಳೆಯ ರೀತಿಯಲ್ಲಿ ಮದುವೆಯಾಗಲು ನನಗೂ ಹಕ್ಕಿದೆ ಎಂದು ಕೂಡ ಹೇಳಿದ್ದಾರೆ.[ಮೈಸೂರಿನಲ್ಲಿ ಕಂಡ ಮಂಗಳಮುಖಿ ಅಸಲಿಯೋ ನಕಲಿಯೋ?]

Transgender Woman Tying The Knot With Man In Bhubaneswar

ಇದು ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಆಗುತ್ತಿರುವ ಮದುವೆ. ಮೇಘನಾಗೆ ಮದುವೆ ಪ್ರಸ್ತಾವವನ್ನು ಇಟ್ಟವರೇ ಬಲದೇವ್ ಕುಟುಂಬದವರು. ಅಂದಹಾಗೆ ವಿವಾಹ ಹಿಂದೂ ಪದ್ಧತಿಯಂತೆಯೇ ಆಗಿದೆ. ಈ ಮದುವೆಗೆ ಸಾಕಷ್ಟು ಜನ ಸೇರಿದ್ದರು. ಮಾಧ್ಯಮಗ್ಳು ಸುದ್ದಿ ಮಾಡಿದವು. ಭುವನೇಶ್ವರದ ಮೇಯರ್ ಅನಂತ ನಾರಾಯಣ್ ಕೂಡ ಹಾಜರಿದ್ದರು.

ಇನ್ನು ವರ ಬಸುದೇವ್ ಗೆ ಈಗಾಗಲೇ ಮದುವೆಯಾಗಿ ನಾಲ್ಕು ಮಕ್ಕಳಿದ್ದವು. ಮೊದಲ ಪತ್ನಿಗೆ ವಿಚ್ಛೇದನ ನೀಡಿ, ಮೇಘನಾ ಕೈ ಹಿಡಿದರು. "ತೃತೀಯ ಲಿಂಗಿ ಕೂಡ ಮದುವೆಯಗಬಹುದು ಎಂಬ ಸಂದೇಶವೊಂದು ಸಮಾಜಕ್ಕೆ ಸಿಕ್ಕಂತಾಗಿದೆ" ಎಂದು ವರನ ಸಂಬಂಧಿಕರೊಬ್ಬರು ಹೇಳಿದ್ದಾರೆ.[ಮಂಡ್ಯದಲ್ಲಿ ಕಾವೇರಿಗಾಗಿ ಮಂಗಳಮುಖಿಯರ ಪ್ರತಿಭಟನೆ]

ಮೂರು ವರ್ಷದ ಹಿಂದೆ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಲ್ಲಿ, ತೃತೀಯ ಲಿಂಗಿಗಳಿಗೆ ಮತದಾನದ ಹಕ್ಕು, ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವುದಕ್ಕೆ, ಚಾಲನಾ ಪರವಾನಗಿಗೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಪ್ರತ್ಯೇಕ ಅವಕಾಶ ನೀಡಿದೆ.

English summary
A transgender woman named Meghna got married to a man named Basudev in Bhubaneswar on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X