ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ವಲಸಿಗರ ಪತ್ತೆಗೆ ವಿಶೇಷ ಕಾರ್ಯಪಡೆ: ಪರಮೇಶ್ವರ್

ರಾಜ್ಯದಲ್ಲಿ ನೆಲೆಯೂರಿರುವ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಶೀಘ್ರ ವಿಶೇಷ ಕಾರ್ಯಪಡೆಯನ್ನು ರಚಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸದನಕ್ಕೆ ತಿಳಿಸಿದ್ದಾರೆ.

By Prithviraj
|
Google Oneindia Kannada News

ಬೆಳಗಾವಿ, ನವೆಂಬರ್, 22: ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಜಿಲ್ಲಾ ಮಟ್ಟದಲ್ಲಿ ವಿಶೇಷ ಕಾರ್ಯಪಡೆ ರಚಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.

ಇಲ್ಲಿಯ ಸುವರ್ಣಸೌಧದ ವಿಧಾನಮಂಡಲ ಅಧಿವೇಶನದಲ್ಲಿ ಅವರು ಸದನಕ್ಕೆ ಈ ಮಾಹಿತಿ ನೀಡಿದರು. "ಬೇರೆ ದೇಶಗಳಿಂದ ವಲಸೆ ಬರುತ್ತಿರುವವ ಮೇಲೆ ನಿರಂತರವಾಗಿ ನಿಗಾ ವಹಿಸಲಾಗುತ್ತಿದೆ" ಎಂದು ಅವರು ಸದನಕ್ಕೆ ತಿಳಿಸಿದರು.[ಆಡಳಿತ ಪಕ್ಷದಿಂದಲೇ ವಿಧಾನಸಭೆಯಲ್ಲಿ ಧರಣಿ]

To find illegal migrants, forming a special task force: Parameshwar

ಮಾದಕ ವಸ್ತು ನಿಯಂತ್ರಣಕ್ಕೆ ಕ್ರಮ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಮಾದಕ ವಸ್ತುಗಳ ಮಾರಾಟ ಪ್ರಕರಣಗಳು ವರದಿಯಾಗುತ್ತಿವೆ. ಮದಾಕ ವಸ್ತುಗಳ ಮಾರಾಟ ಮತ್ತು ಬಳಕೆ ನಿಯಂತ್ರಣಕ್ಕೆ ಹೆಚ್ಚು ಗಮನ ಹರಿಸಲಾಗುತ್ತಿದೆ ಪರಮೇಶ್ವರ್ ತಿಳಿಸಿದರು.

ಕಾನೂನು ಮತ್ತು ಸುವ್ಯವಸ್ಥೆಗಾಗಿ ಬೆಂಗಳೂರು, ಮಂಗಳೂರು, ಬೆಳಗಾವಿ ಮಹಾನಗರಗಳಲ್ಲಿ ವಿಶೇಷ ಪೊಲೀಸ್ ಘಟಕಗಳನ್ನು ತೆರೆಯಲಾಗಿದೆ. ಅಷ್ಟೇ ಅಲ್ಲದೆ ರಾಜ್ಯದೆಲ್ಲೆಡೆ 45 ಪೊಲೀಸ್ ಠಾಣೆಗಳನ್ನು ಈ ಕಾರ್ಯಕ್ಕಾಗಿ ಗುರುತಿಸಲಾಗಿದೆ ಎಂದು ಅವರು ಸದನಕ್ಕೆ ತಿಳಿಸಿದರು.

English summary
Minister for Home affairs, Government of Karnataka, G.Parameshwar say's "The state government will soon farm a special task force to find out illegal migrants" in district level, in winter assembly session at Belagavi Suvarna Vidhansouda on Tuesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X