• search

ಫ್ರೆಂಚ್ ಸೇವಕನಾಗಿ ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಟ: ಸ್ವಾಮಿ

By ನಮ್ಮ ಪ್ರತಿನಿಧಿ
Subscribe to Oneindia Kannada
For belagavi Updates
Allow Notification
For Daily Alerts
Keep youself updated with latest
belagavi News

  ಬೆಳಗಾವಿ, ನವೆಂಬರ್ 06: ಟಿಪ್ಪು ಸುಲ್ತಾನ ತನ್ನ ಸಾಮ್ರಾಜ್ಯ ಉಳಿವಿಗಾಗಿ ಫ್ರೆಂಚರಿಂದ ಹಣ ಪಡೆದು ಬ್ರಿಟಿಷರ ವಿರುದ್ಧ ಹೋರಾಡಿದ್ದಾನೆ. ಅವನೊಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂಬುಂದು ಸುಳ್ಳು ಎಂದು ರಾಜ್ಯಸಭಾ ಸದಸ್ಯ ಡಾ. ಸುಬ್ರಹ್ಮಣ್ಯಂ ಸ್ವಾಮಿ ಹೇಳಿದರು.

  ನಗರದ ಕೆಎಲ್ಇ ಸಂಸ್ಥೆಯ ಜಿರಗೆ ಸಭಾ ಭವನದಲ್ಲಿ ಪ್ರಬುದ್ಧ ಭಾರತ ಸಂಘಟನೆ ಏರ್ಪಡಿಸಿದ್ದ ಬೌದ್ಧಿಕ ಭಯೋತ್ಪಾದನೆವಿಷಯ ಕುರಿತು ಮಾತನಾಡಿದ ಅವರು, ಇತಿಹಾಸದಲ್ಲಿ ಹಿಂದು ಧರ್ಮಕ್ಕಾಗಿ ಹೋರಾಡಿದ ಛತ್ರಪತಿ ಶುವಾಜಿ, ರಾಣಾ ಪ್ರತಾಪ್‌ಸಿಂಹ, ವಿಜಯನಗರ ಅರಸರ ಬಗ್ಗೆ ಪ್ರಸ್ತಾಪವಿಲ್ಲದೆ ದೇಶವನ್ನಾಳಿದ ಪರಕೀಯರ ಇತಿಹಾಸ ಸೃಷ್ಟಿಸಿದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

  ನ್ಯಾಶನಲ್ ಹೆರಾಲ್ಡ್ ಹಗರಣದಲ್ಲಿ ಅಮ್ಮ ಮಗನಾದ ಸೋನಿಯಾ ಹಾಗೂ ರಾಹುಲ್ ಗಾಂಧಿ ತಿಹಾರ ಜೈಲು ಸೇರುವುದು ಖಚಿತವಾಗಿದೆ ಎಂದ ಅವರು, 2 ಜಿ ಸೇಕ್ಟ್ರಂ ಹಗರಣದಲ್ಲಿ ಪಿ.ಚಿದಂಬರಂ ಹಾಗೂ ಅವರ ಪುತ್ರ ತಿಹಾರ ಜೈಲಿನಲ್ಲಿ ಇಟಾಲಿಯನ್ ಕಾಂಗ್ರೆಸ್ ಪಕ್ಷದ ಅಮ್ಮ ಮಗನ ಜೊತೆಗೆ ಕಂಬಿ ಎಣಿಕೆ ಮಾಡಲ್ಲಿದ್ದಾರೆ ಎಂದರು.

  Tipu fought against British as servant of the French : Subramanian Swamy

  ಕೆಲವೊಂದು ಸಿನಿಮಾಗಳಲ್ಲಿ ನಟಿಸಿ ಅವಕಾಶ ಸಿಗದಿದ್ದಾಗ ಹಿಂದು ಭಯೋತ್ಪಾದನೆ, ಹಿಂದು ಭಯೋತ್ಪಾದಕರು ಎಂದೆಲ್ಲ ಹೇಳಿಕೆ ನೀಡುವರು ಮುಸ್ಲಿಂ ಭಯೋತ್ಪಾದಕರ ಬಗ್ಗೆ ಮಾತನಾಡದಿರುವುದು ಏಕೆ ಎಂದು ಪ್ರಶ್ನಿಸಿದರು. ದೇಶದಲ್ಲಿ ಸುಮಾರು 50-60 ವರ್ಷ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಹಿಂದು ಧರ್ಮದ ಜನರಲ್ಲಿ ಮೀಸಲಾತಿ ಹೆಸರಿನಲ್ಲಿ ಒಡಕು ಮೂಡಿಸಿ ಅಲ್ಪಸಂಖ್ಯಾತರ ತುಷ್ಟಿಕರಣ ಮಾಡುತ್ತಿದೆ ಎಂದರು.

  ಬಿಜೆಪಿ ಹಾಗೂ ಆರ್ ಎಸ್ ಎಸ್ ದೇಶದ ಜನರಲ್ಲಿ ನಾವೆಲ್ಲರೂ ಒಂದು ಎಂದು ಸಮಾನತೆ ಸಾರುತ್ತಿದೆ. ತ್ರಿವಳಿ ತಲಾಕ್ ವಿರುದ್ಧ ಮಾತನಾಡದ ಕಾಂಗ್ರೆಸ್ ಮುಸ್ಲಿಂ ಮಹಿಳೆಯರ ಮೇಲೆ ನಡೆಯುತ್ತಿದ್ದ ಅನ್ಯಾಯವನ್ನು ತಡೆಯಲು ಯಾವ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು


  ಉತ್ತರಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡದ ಬಿಜೆಪಿ ಸೋಲು ಖಚಿತ ಎಂದು ಮಾತನಾಡುತ್ತಿದ್ದ ಜನರಿಗೆ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದು ಸಾಕ್ಷಿಯಾಗಿದೆ ಎಂದರು.

  ಪ್ರಬುದ್ಧ ಭಾರತ ಸಂಘಟನೆಯ ಚೇತನ್ಯಾ ಕುಲಕರ್ಣಿ, ಸಚೀನ ಸಬನೀಸ್ ವೇದಿಕೆಯ ಮೇಲೆ ಇದ್ದರು.ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಸಂಸದ ಸುರೇಶ ಅಂಗಡಿ, ಶಾಸಕರಾದ ಮಹಾಂತೇಶ ಕವಟಗಿಮಠ, ಸಂಜಯ ಪಾಟೀಲ, ಮಾಜಿ ಶಾಸಕ ಅಭಯ ಪಾಟೀಲ ಸೇರಿದಂತೆ ಮುಂತಾದವರು ಸಂದರ್ಭದಲ್ಲಿ ಉಪಸ್ಥಿತರಿದ್ದರು.
  ಇನ್ನಷ್ಟು ಬೆಳಗಾವಿ ಸುದ್ದಿಗಳುView All

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  "Tipu Sultan fought the British as what I would say as the servant of the French" said BJP leader Subramanian Swamy at KLE, Belagavi. 18th-century ruler of Mysore Tipu Sultan's birth anniversary celebrations being organised by Karnataka government on November 10,2017.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more