ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು ಹುಲಿಗೆ ಬೆಳಗಾವಿಯಲ್ಲೂ ಮಹಿಳೆ ಬಲಿ

|
Google Oneindia Kannada News

ಬೆಳಗಾವಿ, ಡಿ. 25 : ಚಿಕ್ಕಮಗಳೂರಿನಲ್ಲಿ ಮಹಿಳೆ ಕೊಂದಿದ್ದ ಹುಲಿರಾಯನನ್ನು ಗಡಿಪಾರು ಮಾಡಿ ಬೆಳಗಾವಿಯ ಭೀಮಗಡದ ಕಾಡಿಗೆ ಬಿಡಲಾಗಿತ್ತು. ಬುಧವಾರ ಸಂಜೆ ಅಲ್ಲಿಯೂ ಅದು ಮಹಿಳೆಯನ್ನು ಕೊಂದು ತಿಂದಿದ್ದಾನೆ. ಅರಣ್ಯ ಇಲಾಖೆ ಸಿಬ್ಬಂದಿ ಹುಲಿಗಾಗಿ ಹುಡುಕಾಟ ನಡೆಸಿದ್ದು, ನರಭಕ್ಷಕನಿಗೆ ಗುಂಡಿಕ್ಕಿ ಕೊಲ್ಲಲು ಒಪ್ಪಿಗೆಯನ್ನು ಪಡೆದಿದ್ದಾರೆ.

ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಖಾನಾಪುರ ತಾಲೂಕಿನ ಜಾಂಬೋಟಿ ಗ್ರಾಮದ ಬಳಿ ಅಂಜನಾ (23) ಎಂಬ ಮಹಿಳೆಯನ್ನು ಹುಲಿ ಕೊಂದು ಹಾಕಿದೆ. ರಾತ್ರಿಪೂರ್ತಿ ಶವದ ಬಳಿ ಕುಳಿತಿದ್ದ ಹುಲಿರಾಯ ಗುರುವಾರ ಮುಂಜಾನೆ ವೇಳೆಗೆ ಕಾಡಿಗೆ ಓಡಿಹೋಗಿದ್ದಾನೆ. ಅರಣ್ಯ ಇಲಾಖೆ ಅಧಿಕಾರಿಗಳು ನರಭಕ್ಷಕನನ್ನು ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದಾರೆ. [ಹುಲಿ ಭೀಮಗಡದಿಂದ ಸ್ಥಳಾಂತರ?]

tiger

ಮುಡುಗೈ ಗ್ರಾಮದ ಅಂಜನಾ ಸೇರಿದಂತೆ 20 ಕ್ಕೂ ಅಧಿಕ ಜನರು ಬುಧವಾರ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ನೀರು ತರಲು ಹೋದ ಅಂಜನಾ ಅವರನ್ನು ನರಭಕ್ಷಕ ಹುಲಿ ಹೊತ್ತುಕೊಂಡು ಹೋಗಿದೆ. ಕೆಲವು ಹೊತ್ತಾದರೂ ಅಂಜನಾ ಮರಳದ ಹಿನ್ನಲೆಯಲ್ಲಿ ಹುಡುಕುತ್ತಾ ಹೊರಟ ಗ್ರಾಮಸ್ಥರಿಗೆ ಅರ್ಧ ಕಿ.ಮೀ.ದೂರದಲ್ಲಿ ಶವ ಪತ್ತೆಯಾಗಿದ್ದು, ಹುಲಿ ಅಲ್ಲಿಯೇ ಇತ್ತು. [ಚಿಕ್ಕಮಗಳೂರು : ಹುಲಿ ದಾಳಿಗೆ ಮಹಿಳೆ ಬಲಿ]

ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹುಲಿಯನ್ನು ಸೆರೆಹಿಡಿದು ನಂತರ ಗ್ರಾಮದಿಂದ ವಾಪಸ್ ಹೋಗುವಂತೆ ಅಧಿಕಾರಿಗಳಿಗೆ ದಿಗ್ಭಂಧನ ಹಾಕಿ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. [ಮಹಿಳೆ ಕೊಂದಿದ್ದ ಹುಲಿ ಸೆರೆ]

ಸ್ಥಳಕ್ಕೆ ಭೇಟಿ ನೀಡಿದ್ದ ಎಎಸ್ಪಿ ನ್ಯಾಮೇಗೌಡ ಅವರು, ಜೀವಂತವಾಗಿ ಹುಲಿಯನ್ನು ಸೆರೆಹಿಡಿಯಲು ಸಾಧ್ಯವಾಗದಿದ್ದರೆ, ಗುಂಡಿಟ್ಟು ಕೊಲ್ಲಲು ಆದೇಶ ಪಡೆದುಕೊಳ್ಳಲಾಗಿದೆ. ಬುಧವಾರ ರಾತ್ರಿಯಾದ್ದರಿಂದ ಕಾರ್ಯಾಚರಣೆ ನಿಲ್ಲಿಸಲಾಗಿದ್ದು, ಇಂದು ಹುಲಿಯನ್ನು ಸೆರೆ ಹಿಡಿಯುತ್ತೇವೆ ಎಂದು ಹೇಳಿದ್ದಾರೆ.

ನರಭಕ್ಷಕ ಹುಲಿಗೆ 2ನೇ ಬಲಿ : ನ.15ರಂದು ಚಿಕ್ಕಮಗಳೂರು ಜಿಲ್ಲೆಯ ಪಂಡರವಳ್ಳಿಯಲ್ಲಿ ಕಾಫಿ ತೋಟದ ಕೆಲಸಕ್ಕೆ ಹೋಗುತ್ತಿದ್ದ ಸುಮಿತ್ರಾ (25) ಎಂಬ ಮಹಿಳೆಯನ್ನು ಈ ಹುಲಿ ಕೊಂದು ಹಾಕಿತ್ತು. ನ.17ರಂದು ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಸೆರೆ ಹಿಡಿದಿದ್ದರು. ಆದರೆ, ಎಲ್ಲಿ ಬಿಡಬೇಕು ಎಂಬುದು ಸಮಸ್ಯೆಯಾಗಿತ್ತು.

ಹುಲಿಯನ್ನು ಉತ್ತರ ಕನ್ನಡ ಜಿಲ್ಲೆಯ ಡಾಂಡೇಲಿ ಸಮೀಪ ಬಿಡಲು ನಿರ್ಧರಿಸಲಾಗಿತ್ತು. ಆದರೆ, ಗ್ರಾಮಸ್ಥರು ಒಪ್ಪಿಗೆ ನೀಡಿದ ಕಾರಣ, ಬೆಳಗಾವಿಯ ಖಾನಾಪುರ ತಾಲೂಕಿನ ಭೀಮಗಡದಲ್ಲಿ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಹುಲಿಯನ್ನು ಕಾಡಿಗೆ ಬಿಡಲಾಗಿತ್ತು. ಭೀಮಗಡದಲ್ಲಿ ಹಸುಗಳನ್ನು ಕೊಂದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದ ಹುಲಿರಾಯ ಈಗ ಮಹಿಳೆಯನ್ನು ಕೊಂದು ಹಾಕಿದ್ದಾನೆ.

English summary
A tiger killed a 23-year-old woman while she was going to work in Jamboti village of Belagavi district Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X