ಬೆಳಗಾವಿಯಲ್ಲಿ ಧಗ ಧಗನೆ ಹೊತ್ತಿ ಉರಿದ ವಾಹನಗಳು

By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ನವೆಂಬರ್ 03 : ಕಸಕ್ಕೆ ಹಾಕಿದ್ದ ಬೆಂಕಿ ತಗುಲಿ 3 ವಾಹನಗಳು ಸುಟ್ಟು ಭಸ್ಮವಾದ ಘಟನೆ ಬೆಳಗಾವಿಯ ಹಳೆ ಗಾಂಧಿನಗರದಲ್ಲಿ ಇಂದು (ಶುಕ್ರವಾರ) ನಡೆದಿದೆ.

ಕಸದ ರಾಶಿಗೆ ಹಾಕಿದ ಬೆಂಕಿ ಹೊತ್ತಿ ಉರಿದಿದ್ದು, ಸಮೀಪದಲ್ಲೇ ನಿಲ್ಲಿಸಿದ್ದ ವಾಹನಗಳಿಗೆ ವ್ಯಾಪಿಸಿದೆ. ಘಟನೆಯಲ್ಲಿ 2 ಕಾರ್ ಹಾಗೂ 1 ಟಾಟಾ ಏಸ್ ವಾಹನ ಸುಟ್ಟು ಹೋಗಿವೆ.

Three vehicles burned due to fire broke out in Belagavi

ಸಮೀಪದಲ್ಲೇ ಪೆಟ್ರೋಲ್ ಬಂಕ್ ಇದ್ದು ಅದೃಷ್ಟವಶಾತ್ ಅಲ್ಲಿಗೆ ಬೆಂಕಿ ಆವರಿಸಿಲ್ಲ. ಇದನ್ನು ಗಮನಿಸಿದವರು ಬೆಂಕಿಯನ್ನು ನಂದಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three vehicles burned due to fire broke out in the old Gandhinagar, Belagavi district on Friday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ