ಪೋಷಕರೇ, ಮಕ್ಕಳನ್ನು ಫೆವಿಕಾಲ್, ಪೇಯಿಂಟ್ ನಿಂದ ದೂರವಿರಿಸಿ

Posted By:
Subscribe to Oneindia Kannada

ಬೆಳಗಾವಿ, ಫೆಬ್ರವರಿ,05: ಫೆವಿಕಾಲ್, ವೈಟ್ನರ್, ನೋವು ನಿವಾರಕ ಟ್ಯೂಬ್ ಗಳು, ಪೇಯಿಂಟ್, ವಾಸನೆಭರಿತ ರಬ್ಬರ್ ಹೀಗೆ ಹಲವಾರು ಪದಾರ್ಥಗಳಿಂದ ಹೊರಸೂಸುವ ವಾಸನೆ ತೆಗೆದುಕೊಳ್ಳುತ್ತಿದ್ದ ಮೂವರು ಮಕ್ಕಳನ್ನು ಬಂಧಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

10 ರಿಂದ 12 ವರ್ಷದ ಬೆಳಗಾವಿ ಶಾಲೆಯ ಮೂವರು ಮಕ್ಕಳ ವರ್ತನೆಯಲ್ಲಿ ಕಂಡು ಬಂದ ವ್ಯತ್ಯಾಸದಿಂದ ಅನುಮಾನಗೊಂಡ ಪಾದಚಾರಿ ಮಕ್ಕಳ ಬಳಿ ವಿಚಾರಿಸಿದ್ದಾರೆ. ಮಕ್ಕಳು ಸಿರಪ್, ಫೆವಿಕಲ್, ವೈಟ್ ನರ್, ನೋವು ನಿವಾರಕ ಟ್ಯೂಬ್ ಗಳು ಸಾಕಷ್ಟು ಮತ್ತೇರಿಸುತ್ತದೆ ಎಂದು ಹೇಳಿದ್ದಾರೆ. ಬಳಿಕ ಇವರನ್ನು ತಕ್ಷಣ ಪೊಲೀಸರಿಗೆ ಒಪ್ಪಿಸಿದ್ದಾರೆ.[ಮಂಡ್ಯ ಮೊರಾರ್ಜಿ ದೇಸಾಯಿ ಶಾಲೆಯ 3 ಮಕ್ಕಳನ್ನು ನೋಡಿದ್ದೀರಾ?]

Belagavi

ಹೇಗೆ ತಿಳಿಯಿತು?

ಒಬ್ಬ ವ್ಯಕ್ತಿ ಬೆಳಗಾವಿಯಲ್ಲಿ ಅಂಡರ್ ಪಾಸ್ ಬಳಿ ಹೋಗುತ್ತಿದ್ದಾಗ ಯಾರೋ ಸೀನಿದ ಶಬ್ದ ಕೇಳಿ ಬಂದಿದೆ. ಆಗ ಆತ ಕುತೂಹಲದಿಂದ ಅಂಡರ್ ಪಾಸ್ ಒಳಗೆ ಹೋಗಿದ್ದಾರೆ. ಅಲ್ಲಿ ನೋಡಿದರೆ ಮೂವರು ಶಾಲೆ ವಿದ್ಯಾರ್ಥಿಗಳು ಶಾಲೆಗೆ ಹೋಗದೆ ಶಾಲೆ ಬಳಿಯ ಅಂಗಡಿಗಳಲ್ಲಿ ಸಿಗುವ ಯಾವುದೋ ಸಿರಪ್, ನೋವು ನಿವಾರಕ, ಫೆವಿಕಲ್, ವೈಟ್ನರ್ ಇನ್ನಿತರ ಔಷಧಿಗಳ ವಾಸನೆ ನೋಡುತ್ತಾ ಮತ್ತಿನಲ್ಲಿ ಇರುವುದು ಕಂಡು ಬಂದಿದೆ.

ಆ ಪದಾರ್ಥಗಳನ್ನು ಮಕ್ಕಳ ಬಳಿಯಿಂದ ತೆಗೆದುಕೊಂಡು ಮತ್ತಿನಲ್ಲಿ ಇದ್ದ ಮೂವರು ಮಕ್ಕಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಪೊಲೀಸರು ಆ ಮೂವರು ಮಕ್ಕಳ ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.[ಮಕ್ಕಳ ಕೈಯಲ್ಲಿ ಮದ್ಯ ಸಿಕ್ಕರೆ ಬಾರ್ ಮಾಲೀಕರಿಗೆ ಜೈಲೂಟ]

ಈ ಪದಾರ್ಥಗಳು ಯಾವ ಚಟಕ್ಕೆ ಪ್ರೇರಣೆ ನೀಡುತ್ತದೆ?

ಗ್ಲೂ, ಫೆವಿಕಾಲ್, ವೈಟ್ ನರ್, ನೋವು ನಿವಾರಕ ಟ್ಯೂಬ್ ಗಳು, ಪೇಯಿಂಟ್, ವಾಸನೆಭರಿತ ರಬ್ಬರ್ ನಿಂದ ಹೊರಸೂಸುವ ವಾಸನೆಯಿಂದ ಮಕ್ಕಳು ಮುಂದೆ ಡ್ರಗ್ಸ್ ಸೇವನೆಗೆ ಮುಂದಾಗುವ ಅಪಾಯಗಳು ಹೆಚ್ಚಿವೆ ಎಂದು ತಿಳಿದು ಬಂದಿದೆ.

ಪೇಯಿಂಟ್, ಫೆವಿಕಾಲ್, ವೈಟ್ ನರ್ ಗಳಿಂದ ಮಕ್ಕಳಲ್ಲಿ ಏನಾಗುತ್ತದೆ?

ಈ ಮೇಲಿನ ಔಷಧಿಗಳಿಂದ ಮೆದುಳಿನ ಸಂಬಂಧಿ ರೋಗಗಳು, ಮಾಂಸಖಂಡಗಳಲ್ಲಿ ಶಕ್ತಿ ಕುಂದುವುದು, ಮಕ್ಕಳು ಒತ್ತಡಕ್ಕೆ ಒಳಗಾಗುವುದು, ಯಾವಾಗಲೂ ತಲೆನೋವು ಬರುವುದು, ಮೂಗಿನಲ್ಲಿ ರಕ್ತ ಒಸರುವುದು, ಗ್ರಹಣ ಶಕ್ತಿಯನ್ನು ಕಳೆದು ಕೊಳ್ಳುವುದು ಹೀಗೆ ನಾನಾ ತೆರನಾದ ತೊಂದರೆಗೆ ಒಳಗಾಗುತ್ತಾರೆ ಎಂದು ವೈದ್ಯರು ಹೇಳಿದ್ದಾರೆ.[ಖಿನ್ನತೆ,ಆತಂಕ, ಒತ್ತಡದಿಂದ ದೂರವಿರಬೇಕಾ? ಯೋಗ ಶಿಬಿರಕ್ಕೆ ಬನ್ನಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three children arrested, look for whiteners, Glue, Fevicol in Belagavi on Thursday, February 4th. This things put addicts at the risk of brain damage, muscle weakness, depression, headaches, nosebleeds etc.
Please Wait while comments are loading...