ಹಿರಿಯ ರಂಗಕರ್ಮಿ ನಾಡೋಜ ಏಣಗಿ ಬಾಳಪ್ಪ ವಿಧಿವಶ

Posted By:
Subscribe to Oneindia Kannada

ಬೆಳಗಾವಿ, ಆಗಸ್ಟ್ 18 : ಡಾ. ಶಿವರಾಜ್ ಕುಮಾರ್ ಅವರ 'ಜನುಮದ ಜೋಡಿ' ಚಿತ್ರದಲ್ಲಿ ಸ್ವಾಮಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಹಿರಿಯ ರಂಗಕರ್ಮಿ ನಾಡೋಜ ಏಣಗಿ ಬಾಳಪ್ಪ (103) ಇಂದು (ಶುಕ್ರವಾರ) ಬೆಳಗ್ಗೆ ವಿಧಿವಶರಾಗಿದ್ದಾರೆ.

ಏಣಗಿ ಬಾಳಪ್ಪನವರಿಗೆ ಧಾರವಾಡದಲ್ಲಿ ಅಕ್ಕರೆಯ ಸನ್ಮಾನ

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶತಾಯುಷಿ ಏಣಗಿ ಬಾಳಪ್ಪ ಇಂದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ಗ್ರಾಮದ ನಿವಾಸದಲ್ಲಿ ನಿಧನರಾಗಿದ್ದಾರೆ.

Theater artist nadoja Enagi Balappa passed away in Enagi village

ಬೆಳಗಾವಿ ಜಿಲ್ಲೆಯ 'ಸವದತ್ತಿ' ತಾಲ್ಲೂಕಿನ 'ಏಣಗಿ' ಗ್ರಾಮದ ಒಕ್ಕಲುತನದ ಕುಟುಂಬದಲ್ಲಿ 1914ರಲ್ಲಿ ಜನಿಸಿದ್ದ ಬಾಳಪ್ಪ ಅವರು ಹಲವು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಏಣಗಿ ಬಾಳಪ್ಪನವರ ರಂಗಸಾಧನೆಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ಬಿರುದು ಬಾವಲಿಗಳನ್ನಕೊಟ್ಟು ಗೌರವಿಸಿವೆ.

ಕರಾವಳಿ ರಂಗೋತ್ಸವದಲ್ಲಿ ಏಣಗಿ ಬಾಳಪ್ಪ ಬಗೆಗಿನ ಪುಸ್ತಕ

*1973ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ,
* 1976ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ,
* 1978ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಪ್ರಶಸ್ತಿ,
* 1995 ರಲ್ಲಿ ಕೇಂದ್ರ ಸರಕಾರದ 'ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ',
* 1995 ರಲ್ಲಿ ಕರ್ನಾಟಕ ರಾಜ್ಯ ಸರಕಾರದ ಅತ್ಯಂತ ಪ್ರತಿಷ್ಠಿತವಾದ 'ಗುಬ್ಬಿ ವೀರಣ್ಣ' ಪ್ರಶಸ್ತಿ,
* 2005ರಲ್ಲಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಹೀಗೆ ಲೆಕ್ಕವಿಲ್ಲದಷ್ಟು ಪ್ರತಿಷ್ಟಿತ ಪ್ರಶಸ್ತಿಗಳು ಏಣಗಿ ಬಾಳಪ್ಪನವರ ಸಾಧನೆಗೆ ಸಂದಿವೆ.

ಬಾಳಪ್ಪನವರ ರಂಗಕೈಂಕರ್ಯವನ್ನು ಮೆಚ್ಚಿ ಕರ್ನಾಟಕ ವಿಶ್ವವಿದ್ಯಾಲಯವು 2006ರಲ್ಲಿ ಗೌರವ ಡಾಕ್ಟರೇಟ್ ಪದವಿ ಕೊಟ್ಟು ಗೌರವಿಸಿದೆ. ನಾಟ್ಯಭೂಷಣ, ನಾಟ್ಯಗಂಧರ್ವ ಹೀಗೆ ಹಲವಾರು ಬಿರುದುಗಳನ್ನು ಸಹೃದಯ ಪ್ರೇಕ್ಷಕರು ಕೊಟ್ಟು ಬಾಳಪ್ಪನವರ ಕೀರ್ತಿಯನ್ನು ಹೆಚ್ಚಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
One of the famous theater artist Enagi Balappa(103) passed away in Enagi village, Belagavi district on August 18th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ