ಬೆಳಗಾವಿ: ಬ್ಲಾಕ್ ಮೇಲೆ ದಂಧೆ, ನಕಲಿ ಪತ್ರಕರ್ತನ ಬಂಧನ

By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ಅಕ್ಟೋಬರ್ 19: ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತಿದ್ದ ನಕಲಿ ಪತ್ರಕರ್ತನನ್ನು ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ.

ಹುಷಾರ್... ಯುವತಿಯರ ಪೂರೈಸಿ ಬ್ಲಾಕ್ ಮೇಲ್ ಮಾಡ್ತಾರೆ

ಕೌಟುಂಬಿಕ ಕಲಹದ ಪ್ರಕರಣವೊಂದರಲ್ಲಿ ಪ್ರತಿಷ್ಠಿತ ಖಾಸಗಿ ಸುದ್ದಿ ಮಾಧ್ಯಮಗಳ ಹೆಸರು ಹೇಳಿ 30 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ವಿನಾಯಕ ಭೋಸಲೆನನ್ನು ಗುರುವಾರ ಬಂಧಿಸಿದ್ದು, ಮತ್ತೊಬ್ಬ ಆರೋಪಿ ಕುಮಾರ ಪಾಟೀಲ್ ತಲೆ ಮರಿಸಿಕೊಂಡಿದ್ದಾನೆ.

The fake journalist arrested in Belagavi for trying to blackmail

ವಿನಾಯಕ ಬೋಸಲೆ ಮತ್ತು ಕುಮಾರ ಪಾಟೀಲ್ ಎನ್ನುವರು ಪ್ರತಿಷ್ಠಿತ ಖಾಸಗಿ ಸುದ್ದಿ ಮಾಧ್ಯಮಗಳ ಹೆಸರು ಹೇಳಿ 30 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಭೀಮನಗೌಡ ಭೂಷಿ ಎಂಬುವರು ಈ ಇಬ್ಬರ ವಿರುದ್ಧ ಬ್ಲಾಕ್ ಮೇಲ್ ಕೇಸ್ ದಾಖಲಿಸಿದ್ದರು.

ಈ ದೂರಿನ ಮೇರೆಗೆ ಯಮಕನಮರಡಿ ಪೊಲೀಸರು ವಿನಾಯಕ ಭೋಸಲೆನನ್ನು ಬಂಧಿಸಿದ್ದು, ಕುಮಾರ ಪಾಟೀಲ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The fake journalist was arrested by Yamakanamaradi police, Belagavi district for alleged blackmail and demanding Rs 30 thousand. Accused identified as Vinayak Bhosale,

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ