ಬಿಬಿಎಂಪಿ, ಸಂಚಾರಿ ಪೊಲೀಸ್, ಅಗ್ನಿಶಾಮಕ ದಳಕ್ಕೆ BIG THANKS !

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 9: ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಧಾರಾಕಾರವಾಗಿ ಸುರಿದ ಭೀಕರ ಮಳೆಯಿಂದಾಗಿ, ಹಲವಾರು ಕಡೆ ಮರ ಉರುಳಿ, ನೀರು ನುಗ್ಗಿದ್ದರಿಂದ ಆಗಿರುವ ಅಗಾಧ ಪ್ರಮಾಣದ ಅಸ್ತವ್ಯಸ್ತತೆ ಇನ್ನೂ ಸಂಪೂರ್ಣವಾಗಿ ಪರಿಹಾರವಾಗಿಲ್ಲ.

ಆದರೂ, ಶುಕ್ರವಾರ ರಾತ್ರಿ ನಾಗರಿಕರು ಮಳೆಯಿಂದ ಪಾರಾಗಿ ಬೇಗಬೇಗ ಮನೆ ಸೇರಿಕೊಳ್ಳಲು ಹವಣಿಸುತ್ತಿದ್ದರೆ, ಅತ್ತ, ಬಿಬಿಎಂಪಿ ಸಿಬ್ಬಂದಿ, ಬೆಂಗಳೂರು ಟ್ರಾಫಿಕ್ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ನಾಗರಿಕರ ಸುರಕ್ಷತೆಗಾಗಿ ಶ್ರಮಿಸಿದ್ದಾರೆ. ಬಿಬಿಎಂಪಿ ಹಾಗೂ ಟ್ರಾಫಿಕ್ ಸಿಬ್ಬಂದಿಯಂತೂ ರಾತ್ರಿಯಿಡೀ ಕೆಲಸಕ್ಕಿಳಿದು ಹಲವಾರು ರಸ್ತೆಗಳಲ್ಲಿ ಉರುಳಿಬಿದ್ದಿದ್ದ ಮರಗಳನ್ನು ಕತ್ತರಿಸಿ ತೆರವುಗೊಳಿಸಿದ್ದಾರೆ.

ಇನ್ನೆರಡು ದಿನ ಬೆಂಗಳೂರಿಗರಿಗೆ ಮಳೆಕಾಟ ತಪ್ಪಿದ್ದಲ್ಲ!

ಇನ್ನೂ ಹಲವಾರು ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದೆ. ರಾತ್ರಿ ಲೇಟಾಗೆ ಮನೆಗೆ ಹೋಗಿದ್ದರೂ, ಬೆಳಗ್ಗೆಯೇ ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವ ಅದೆಷ್ಟೋ ಪೊಲೀಸ್ ಸಿಬ್ಬಂದಿ ಜನಸೇವೆಗೆ ಸಿದ್ಧರಾಗಿದ್ದಾರೆ.

ಆದರೆ, ಆ ಕತ್ತಲಲ್ಲಿ ಅವರಾದರೂ ಇಷ್ಟು ಮಾಡಲು ಸಾಧ್ಯವೋ ಅಷ್ಟು ಮಾತ್ರ ಕೆಲಸವಾಗಿದೆ. ಹಾಗಾಗಿ, ಬೆಂಗಳೂರಿನ ಹಲವಾರು ಬಡಾವಣೆಗಳಲ್ಲಿ ರಸ್ತೆಗಳಲ್ಲಿ ಬಿದ್ದ ಮರಗಳನ್ನು ತೆರವು ಮಾಡುತ್ತಿರುವ ಕೆಲಸ ಭರದಿಂದ ಮುಂದುವರಿದಿದೆ. ಅವರ ಕೆಲಸಕ್ಕೆ ಥ್ಯಾಂಕ್ಸ್ ಹೇಳಬೇಕಿರುವುದು ನಾಗರಿಕರಾದ ನಮ್ಮೆಲ್ಲರ ಕರ್ತವ್ಯ.

ಸುಗಮ ಸಂಚಾರಕ್ಕೆ ಪ್ರಯತ್ನ

ಸುಗಮ ಸಂಚಾರಕ್ಕೆ ಪ್ರಯತ್ನ

ಇದು ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ ಮೂಲಕ ಆರ್ಮುಗಂ ಸರ್ಕಲ್ ವರೆಗೆ ಸಾಗುವ ಮಾರ್ಗದ ದೃಶ್ಯ. ಇಲ್ಲಿ ರಾತ್ರಿ ಬಿದ್ದ ಮರವನ್ನು ತೆರವುಗೊಳಿಸುವ ಕಾರ್ಯವು ಬೆಳಗಿನಜಾವ ಆರಂಭವಾಗಿ ಬೆಳಗ್ಗೆ 10 ಗಂಟೆಯಾದರೂ ಮುಂದುವರಿದೇ ಇದ್ದಿದ್ದರಿಂದ ಆ ರಸ್ತೆಯನ್ನು ಬಂದ್ ಮಾಡಲಾಗಿತ್ತು.

ಸರ್ಕಲ್ ಪಕ್ಕದ ರಸ್ತೆ ಹಸಿರುಮಯ

ಸರ್ಕಲ್ ಪಕ್ಕದ ರಸ್ತೆ ಹಸಿರುಮಯ

ನೆಟ್ಟಕಲ್ಲಪ್ಪ ಸರ್ಕಲ್ ನಲ್ಲಿ ರಸ್ತೆಗೆ ಅಡ್ಡ ಬಿದ್ದಿದ್ದ ಮರಗಳನ್ನು ಕಡಿದು ಮೂಲೆಯೊಂದರಲ್ಲಿ ಗುಡ್ಡೆ ಹಾಕಿರುವ ಬಿಬಿಎಂಪಿ ಸಿಬ್ಬಂದಿ. ಇದೇ ರಸ್ತೆಯಲ್ಲಿ ಸುಮಾರು 3-4 ಮರಗಳು ಬಿದ್ದ ಹಿನ್ನೆಲೆಯಲ್ಲಿ ಇಲ್ಲಿ ಕೆಲಸ ಶುಕ್ರವಾರ ಮದ್ಯರಾತ್ರಿಯಿಂದ ಅನವರತ ನಡೆಯುತ್ತಲೇ ಇದೆ.

ಗೇಟ್ ಗೇ ಅಡ್ಡಲಾಗಿ ಬಿದ್ದ ಮರ

ಗೇಟ್ ಗೇ ಅಡ್ಡಲಾಗಿ ಬಿದ್ದ ಮರ

ಜಯನಗರದ ಸೌತ್ ಎಂಡ್ ಸರ್ಕಲ್ ಬಳಿಯಿರುವ ಆರ್ಮುಗಂ ಸರ್ಕಲ್ ಬಳಿಯಿರುವ ಪ್ರಿಸ್ಟೇಜ್ ಅಪಾರ್ಟ್ ಮೆಂಟ್ ಗೇಟ್ ಗೆ ಸರಿಯಾಗಿ ಬೃಹತ್ ಗಾತ್ರದ ಮರವೊಂದು ಬಿದ್ದು ಈ ಅಪಾರ್ಟ್ ಮೆಂಟ್ ಒಳಗಿರುವ ನಿವಾಸಿಗಳಿಗೆ ಹೊರಬರಲು ಫಜೀತಿ ಉಂಟಾಗಿತ್ತು. ಅಪಾರ್ಟ್ ಮೆಂಟ್ ನ ನಿವಾಸಿಯೊಬ್ಬರು, ''ಶುಕ್ರವಾರ ಸಂಜೆ 7:30ಕ್ಕೆ ಈ ಮರ ಬಿದಿದ್ದು, 12 ತಾಸುಗಳು ಕಳೆದರೂ ಈ ಸಮಸ್ಯೆ ನಿವಾರಣೆಯಾಗಿಲ್ಲ'' ಎಂದು ಅಳಲು ತೋಡಿಕೊಂಡರು.

ಇಲ್ಲಿನ್ನೂ ಆಗಬೇಕಿದೆ ಪರಿಹಾರ ಕಾರ್ಯ

ಇಲ್ಲಿನ್ನೂ ಆಗಬೇಕಿದೆ ಪರಿಹಾರ ಕಾರ್ಯ

ಇದು ಜಯನಗರದ ಕನಕನ ಪಾಳ್ಯ ಮುಖ್ಯರಸ್ತೆಯಲ್ಲಿನ ಚಿತ್ರಣ. ಇಲ್ಲಿಗೆ ಇನ್ನೂ ಬಿಬಿಎಂಪಿ ಸಿಬ್ಬಂದಿ ಅಥವಾ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಬಂದು ಈ ದಾರಿಯಲ್ಲಿನ ಸಂಚಾರವನ್ನು ಸುಗಮಗೊಳಿಸಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
When everybody was looking the safe roads to reach their homes during heavy rains on Friday, BBMP and Bengaluru Traffic police staff worked hard entire night to make the roads clear and took rescue operations.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ