ಬೆಳಗಾವಿಯಲ್ಲಿ ಸಹನೆ ಕಳೆದುಕೊಂಡು ರೈತರನ್ನೇ ಎಳೆದಾಡಿದ ತಹಶೀಲ್ದಾರ್

Subscribe to Oneindia Kannada

ಬೆಳಗಾವಿ, ಆಗಸ್ಟ್ 10: ಸಹನೆ ಕಳೆದುಕೊಂಡ ತಹಶೀಲ್ದಾರ್ ರೈತರೊಬ್ಬರನ್ನು ಎಳೆದಾಡಿದ ಘಟನೆ ರಾಯಭಾಗದ ಮಿನಿ ವಿಧಾನಸೌಧದ ಎದುರು ನಡೆದಿದೆ.

ವಿಧಾನಸೌಧದ ಬಳಿ ಬಂದಿದ್ದ ತಹಶೀಲ್ದಾರ್ ಇನ್ನೇನು ಕಾರಿನಲ್ಲಿ ಹೊರಡಲು ಸಿದ್ದವಾದಾಗ ಇಲ್ಲಿನ ನಾಲೆಗಳಿಗೆ ನೀರು ಬಿಡುವಂತೆ ಪ್ರತಿಭಟನೆ ನಡೆಸುತ್ತಿದ್ದ ರೈತರು ಕಾರು ಅಡ್ಡಕಟ್ಟಿದರು. ನೀರಿಗಾಗಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ನಾಲೆಗಳಿಗೆ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

Tahsildar lost his patience, pulled up farmers in Belagavi

ಇಷ್ಟಕ್ಕೇ ಸಿಟ್ಟಾದ ತಹಶೀಲ್ದಾರ್ ರೈತರ ಮೇಲೆ ಏರಿ ಹೋಗಿದ್ದಾರೆ. ಅಲ್ಲದೆ ನಿಂದಿಸಿದ್ದಾರೆ.

ರೈತ ತಾನಾಜಿ ಹವಾಲ್ದಾರ್ ಎಂಬವರ ಮೇಲೆ ಸಿಟ್ಟಾದ ತಹಶೀಲ್ದಾರ್ ವಾಹನ ಹತ್ತುವಂತೆ ಕೂಗಾಡಿದ್ದಲ್ಲದೆ ಅವರನ್ನು ಹಿಡಿದು ಎಳೆದಾಡಿದ್ದಾರೆ. ತಾನಾಜಿ ವಾಹನ ಹತ್ತಲು ಒಲ್ಲದಾದಾಗ ಻ಅವರನ್ನು ನಿಂದಿಸಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Tahsildar lost his patience and pulled up a farmer in front of the mini Vidhan Souda in Rayabaga, Belagavi.
Please Wait while comments are loading...