ರೈತರ ಬಾಕಿ ಪಾವತಿಗಾಗಿ ಸಕ್ಕರೆ ಹರಾಜು

Posted By:
Subscribe to Oneindia Kannada

ಬೆಳಗಾವಿ,ನವೆಂಬರ್ 22:ರೈತರ ಕಬ್ಬಿನ ಹಣ ಪಾವತಿ ಸಂಬಂಧ 136 ಕೋಟಿ ಬಾಕಿಗಾಗಿ ಕಾರ್ಖಾನೆಗಳಲ್ಲಿ 80 ಕೋಟಿ ಮೌಲ್ಯದ ಸಕ್ಕರೆ ವಶಪಡಿಸಿಕೊಳ್ಳಲಾಗಿದೆ ಎಂದು ಸಕ್ಕರೆ ಸಚಿವ ಎಚ್.ಎಸ್ ಮಹದೇವಪ್ರಸಾದ್ ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ತಾರ ಅನುರಾಧ ಮತ್ತ ರಾಮಚಂದ್ರೇಗೌಡ ಅವರ ಪ್ರಶ್ನೆಗಳಿಗೆ ಉತ್ತರಿಸಿ, ಮೂರು ವರ್ಷಗಳಿಂದ ಅನೇಕ ಸಕ್ಕರೆ ಕಾರ್ಖಾನೆಗಳು ಕಬ್ಬು ಖರೀದಿಸಿ ಒಟ್ಟು 136 ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ಜಿಲ್ಲಾಡಳಿತದಿಂದ ಕಾರ್ಖಾನೆಗಳ ಮೇಲೆ ದಾಳಿ ನಡೆಸಿ ಒಟ್ಟು 80 ಕೋಟಿ ಮೌಲ್ಯದ ಸಕ್ಕರೆ ಜಪ್ತಿ ಮಾಡಿದ್ದೇವೆ. ಈಗ ಅದನ್ನು ಹರಾಜು ಕೂಗಿ ಯಾರು ಖರೀದಿಸುತ್ತಾರೋ ಅವರಿಂದ ಹಣ ಪಡೆದು ರೈತರಿಗೆ ಪಾವತಿಸಲಾಗುವುದು ಎಂದು ಹೇಳಿದರು.['ರೈತರನ್ನು ನಿರ್ಲಕ್ಷಿಸಿದರೆ ಸಿದ್ದರಾಮಯ್ಯಗೆ ಉಳಿಗಾಲ ಇಲ್ಲ']

sugarcane dues recover in sale Rs 80 crore sugar

ಆದರೆ ಕಾರ್ಖಾನೆ ಮಾಲೀಕರು ಸುಪ್ರೀಂ ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾರೆ ಹೀಗಾಗಿ ರೈತರಿಗೆ ಸಕಾಲದಲ್ಲಿ ಹಣ ಪಾವತಿಸಲು ಆಗಿಲ್ಲ ಎಂದು ಹೇಳಿದರು.

ಸಕ್ಕರೆ ಕಾರ್ಖಾನೆ ಮಾಲೀಕರು ಅರ್ಜಿ ವಿಚಾರಣೆ ವೇಳೆ ಸರ್ಕಾರದೊಂದಿಗೆ ರಾಜಿ ಸಂಧಾನದ ಮಾರ್ಗವನ್ನು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದರು.

ಕಳೆದ ಮೂರು ವರ್ಷಗಳಿಂದ ರೈತರಿಂದ ಕಬ್ಬು ಖರೀದಿಸಿ ಪೂರ್ಣ ಮೊತ್ತ ನೀಡಿರುವ ಕಾರ್ಖಾನೆಗಳಿಗೆ ತೆರಿಗೆ ವಿನಾಯಿತಿ, ಜತೆಗೆ ಎರಡು ವರ್ಷ ಕಾಲಾವಧಿ ವಿಸ್ತರಿಸುವುದಾಗಿ ಸಚಿವ ತಿಳಿಸಿದರು.

ಕಳೆದ ವರ್ಷ 76 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಕಬ್ಬು ಬೆಳೆಯಲಾಗಿತ್ತು. ಈ ಬಾರಿ ಬರಗಾಲದಿಂದ 40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಹೀಗಾಗಿ 30 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆ ಕಡಿಮೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Assembly winter session in Belagavi. In the questioner time Sugar Minister says 136 crore to sugarcane farmers in relation to the payment of dues worth Rs 80 crore sugar industry recovered,
Please Wait while comments are loading...