ರಾಯಚೂರು- ಮಂತ್ರಾಲಯ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸರ್ಕಾರ ಪ್ರಸ್ತಾವನೆ

Posted By:
Subscribe to Oneindia Kannada

ಬೆಳಗಾವಿ, ನವೆಂಬರ್, 22: ರಾಯಚೂರಿನಿಂದ ಮಂತ್ರಾಲಯಕ್ಕೆ 441.81 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಿಸಲು, ಕೇಂದ್ರ ಭೂ ಸಾರಿಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಂದು ಲೋಕೋಪಯೋಗಿ ಸಚಿವ ಎಚ್.ಸಿ ಮಹದೇವಪ್ಪ ಅವರು ಅಧಿವೇಶನದಲ್ಲಿ ತಿಳಿಸಿದರು.

ಇದೇ ಹೆದ್ದಾರಿ ಮಾರ್ಗದಲ್ಲಿರುವ ಕೃಷ್ಣಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸಲು 160 ಕೋಟಿ ರೂ. ವೆಚ್ಚದ ಯೋಜನೆಯ ಪ್ರಸ್ತಾವನೆಯನ್ನೂ ಸಹ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು. [ಅಕ್ರಮ ವಲಸಿಗರ ಪತ್ತೆಗೆ ವಿಶೇಷ ಕಾರ್ಯಪಡೆ: ಪರಮೇಶ್ವರ್]

State government proposal to upgrade Raichur- Mantralayam highway

ರಸ್ತೆ ಸ್ಥಿತಿಗತಿ ತಿಳಿಯಲು ಸಾಪ್ಟ್ ವೇರ್

ರಾಜ್ಯದ ರಸ್ತೆ ಸ್ಥಿತಿಗತಿಗಳ ಮಾಹಿತಿ ಟೆಂಡರ್ ಪ್ರಕ್ರಿಯೆ ಯೋಜನೆ ಕುರಿತಂತೆ ಮಾಹಿತಿ
ಸಂಗ್ರಹಿಸಲು ಹಾಗೂ ತಿಳಿಸಲು ಲೋಕೋಪಯೋಗಿ ಇಲಾಖೆ ಹೊಸ ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸಿದೆ ಎಂದು ಅವರು ವಿಧಾನ ಪರಿಷತ್ತಿಗೆ ತಿಳಿಸಿದರು.[ಆಡಳಿತ ಪಕ್ಷದಿಂದಲೇ ವಿಧಾನಸಭೆಯಲ್ಲಿ ಧರಣಿ]

ಕಲಬುರಗಿ ವಿಮಾನ ನಿಲ್ದಾಣ ಶೀಘ್ರ ಪೂರ್ಣ

ಮುಂದಿನ ಮಾರ್ಚ್ ವೇಳೆಗೆ ಕಲಬುರಗಿಯಲ್ಲಿ ವಿಮಾನ ನಿಲ್ದಾಣದ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.ಖಾಸಗಿ ಸಂಸ್ಥೆಯಿಂದ ವಿಮಾನ ನಿಲ್ಧಾಣ ಕಾಮಗಾರಿಯನ್ನು ವಾಪಾಸ್ ಪಡೆಯಲಾಗಿದೆ ಇಲಾಖೆ ವತಿಯಿಂದ 109.47ಕೋಟಿ ವೆಚ್ಚದಲ್ಲಿ ಮುಂದಿನ ಮಾರ್ಚ್ 18ರ ಹೊತ್ತಿಗೆ ಪೂರ್ಣಗೊಳಿಸಲಾಗುವುದು ಎಂದು ಸದನಕ್ಕೆ ಅವರು ತಿಳಿಸಿದರು.

State government proposal to upgrade Raichur- Mantralayam highway

ಟೋಲ್ ಗೇಟ್ ಗಳಲ್ಲಿ ಅಂಬ್ಯುಲೆನ್ಸ್-ವಿಐಪಿಗಳಿಗೆ ಪ್ರತ್ಯೇಕ ದ್ವಾರ

ಅಂಬ್ಯುಲೆನ್ಸ್ ಮತ್ತು ವಿಐಪಿ ವಾಹನಗಳಿಗೆ ಟೋಲ್ ಗೇಟ್ ಗಳಲ್ಲಿ ಪ್ರತ್ಯೇಕ ದ್ವಾರ ವ್ಯವಸ್ಥೆ ಮಾಡಲಾಗಿದೆ. ಕೆಲ ಟೋಲ್ ಗೇಟ್ ಗಳಲ್ಲಿ ಸ್ಥಳದ ಅಭಾವದಿಂದ ಪ್ರತ್ಯೇಕ ದ್ವಾರ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಮಹದೇವಪ್ಪ ವಿಧಾನ ಪರಿಷತ್ ನಲ್ಲಿ ಇಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Minister for public works department, state government of karnataka H.c. Mahadevappa told to session, "state government send proposal to central government to upgrade Rayachur-Mantralaya highway as 4 line highway" in Belagavi on Tuesday
Please Wait while comments are loading...