ಜಯನಗರದಿಂದ ಸ್ಪರ್ಧಿಸಲು ನನ್ನ ಮಗಳು ಸಿದ್ಧ: ರಾಮಲಿಂಗಾರೆಡ್ಡಿ

By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ನವೆಂಬರ್ 23: 'ನನ್ನ ಮಗಳು ನನ್ನ ಹಳೆ ಮತಕ್ಷೇತ್ರ ಜಯನಗರದಿಂದ ಟಿಕೆಟ್ ಕೇಳುತ್ತಿದ್ದಾಳೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಟ್ಟರೆ ನಿಲ್ಲುತ್ತಾಳೆ' ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಗುರುವಾರ ಹೇಳಿದರು.

ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಮತ್ತೆ ಸಿದ್ದರಾಮಯ್ಯ ಅವರೇ ಸಿಎಂ ಆಗ್ತಾರೆ ಎಂದರು.

Sowmya Reddy is ready to contest from Jayanagar Assembly : Ramalinga Reddy

ಬೆಳಗಾವಿಯಲ್ಲಿ ಮಾತನಾಡಿದ ಅವರು,ನಾಯಕತ್ವ ಗುಣವಿದ್ದವರು ರಾಜಕೀಯದಲ್ಲಿ ತುಂಬಾ ದಿನ ಇರ್ತಾರೆ‌. ಜಯನಗರ ಕ್ಷೇತ್ರದಲ್ಲಿ ನನ್ನ ಮಗಳಿಗೆ ಟಿಕೆಟ್ ನೀಡದೆ ಬೇರೆಯವರಿಗೆ ನೀಡಿದರೂ ನಾನು ಬೆಂಬಲಿಸುತ್ತೇನೆ.

ಆದರೆ, ನನ್ನ ಮಗಳು ಸೌಮ್ಯ ರೆಡ್ಡಿಗೆ ಟಿಕೆಟ್‌ ಕೊಟ್ಟರೆ ಜಯನಗರದಿಂದ ಚುನಾವಣೆಗೆ ನಿಲ್ಲುತ್ತಾಳೆ. ಮಗಳಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಒತ್ತಡ ಹಾಕುವುದಿಲ್, ಇದಕ್ಕಾಗಿ ನಾವು ಲಾಬಿ ಮಾಡುತ್ತಿಲ್ಲ ಎಂದರು.

ಜಯನಗರ ವಿಧಾನಸಭಾ ಕ್ಷೇತ್ರದ ಪರಿಚಯ

ರಾಜಕೀಯದಲ್ಲಿ ನಾಯಕತ್ವ ಗುಣ ಇರಬೇಕು‌. ನನ್ನ ಮಗಳಿಗೆ ಅರ್ಹತೆಯಿದ್ದರೆ ಟಿಕೆಟ್ ಕೊಡಬೇಕು. ಬಲವಂತವಾಗಿ ಟಿಕೆಟ್ ನೀಡಿದರೆ, ಒಂದೇ ಸಾರಿಗೆ ಹೋಗಿ ಬಿಡುತ್ತಾರೆ, ಅರ್ಹತೆ, ಪ್ರತಿಭೆ ಇದ್ದವರು ಇಲ್ಲಿ ಉಳಿಯುತ್ತಾರೆ ಎಂದು ಹೇಳಿದರು.

ಸೌಮ್ಯ ರೆಡ್ಡಿ ಅವರು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ(ಬೆಂಗಳೂರು ನಗರ)ಯ ಉಪಾಧ್ಯಕ್ಷೆಯಾಗಿದ್ದಾರೆ. ಉದ್ಯಮಿ, ಮಾನವ ಹಕ್ಕುಗಳು, ಪ್ರಾಣಿ ಹಾಗೂ ಪರಿಸರ ಸಂರಕ್ಷಣೆ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
My daughter Sowmya Reddy is ready to contest from Jayanagar Assembly constituency but we are lobbying for it, Party high command will decide on it said Karnataka Home Minister Ramalinga Reddy

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ