ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಮೇಲೆ ವಾಮಾಚಾರ!?

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ಏಪ್ರಿಲ್ 20: ಉಪಚುನಾವಣೆಯ ಸಮಯದಲ್ಲಿ ಜನರಿಗೆ ದುಡ್ಡು ಹಂಚಿದ ಆರೋಪದಲ್ಲಿ ಸಿಕ್ಕಿಬಿದ್ದಿದ್ದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್, ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ತಮ್ಮ ಮೇಲೆ ವಿರೋಧಿಗಳ್ಯಾರೋ ವಾಮಾಚಾರ ಮಾಡಿಸುತ್ತಿದ್ದಾರೆ ಎಂಬ ಅನುಮಾನ ಅವರಿಗೆ ಶುರುವಾಗಿದೆಯಂತೆ!

ಹೌದು, ಅದಕ್ಕೆ ಪೂರಕವೆಂಬಂತೆ ಅವರ ಕಾರಿನ ಬಳಿ, ಮನೆಯ ಸುತ್ತ ಮುತ್ತ ನಿಂಬೆ ಹಣ್ಣು, ಮೊಟ್ಟೆ, ಮೆಣಸಿನಕಾಯಿ, ಬೂದಗುಂಬಳಕಾಯಿ, ಅರಿಶಿಣ, ಕುಂಕುಮ ಮುಂತಾದ ವಸ್ತುಗಳು ಪದೇ ಪದೇ ಕಾಣಿಸುತ್ತಿವೆ![ಉಪಚುನಾವಣೆಯಲ್ಲಿ 'ಲಕ್ಷ್ಮಿ' ಕಟಾಕ್ಷ: ವಿವಾದದಲ್ಲಿ ಕಾಂಗ್ರೆಸ್ ನಾಯಕಿ!]

Some on is doing black magic on me: Lakshmi Hebbalkar

'ನಾನೇನು ವಾಮಾಚಾರ, ಮೂಢನಂಬಿಕೆಯನ್ನೆಲ್ಲ ನಂಬೋದಿಲ್ಲ. ಆದರೆ ಪದೇ ಪದೇ ಸಂಭವಿಸುತ್ತಿರುವ ಕೆಲವು ಅಹಿತಕರ ಘಟನೆಗಳಿಂದಾಗಿ ನಾನು ಮಾನಸಿಕವಾಗಿ ನೊಂದಿದ್ದೇನೆ. ಇವೆಲ್ಲ ಯಾರೋ ಬೇಕೆಂದೇ ಮಾಡುತ್ತಿರುವ ಕೃತ್ಯ' ಎಂದು ಬೆಳಗಾವಿಯಲ್ಲಿಂದು ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Some on is doing black magic on me, Lakshmi Hebbalkar, chairman of KPCC women wing told today in Belgaum. She finds lemon, turmeric powder, egg and other things which are commonly using for black magic in her house premise frequently.
Please Wait while comments are loading...