ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಹೆಚ್ಚು ಚರ್ಚೆಯಾಗಿಲ್ಲ

Posted By: Nayana
Subscribe to Oneindia Kannada

ಬೆಳಗಾವಿ, ನವೆಂಬರ್ 24 : ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಅಧಿವೇಶನ ಸಾಕ್ಷಿಯಾಗಬೇಕಾಗಿತ್ತು ಆದರೆ ಅಧಿವೇಶನ ನಮಗೆ ಸಮಾದಾನವನ್ನು ತಂದಿಲ್ಲ ಎಂದು ಮಾಜಿ ಸಚಿವ , ಶಾಸಕ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಗಮನ ಸೆಳೆದ 5 ಸ್ವಾರಸ್ಯಕರ ಘಟನೆ

ತೊಂದರೆಗಳ ಬಗ್ಗೆ ಚರ್ಚೆ ಮಾಡಲು ಶಾಸಕರ ಹಾಜರಾತಿ ಕೊರತೆ ಇತ್ತು. ಈ ಭಾಗದ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆಯಾಗಿಲ್ಲ, ಜನರ ಅಪೇಕ್ಷೆಯಂತೆ ಅಧಿವೇಶನ ನಡೆದಿಲ್ಲ. ಮಹಾದಾಯಿ, ಕಳಸಾ ಬಂಡೂರಿ ವಿಚಾರವಾಗಿ ಒಂದು ತಿಂಗಳಲ್ಲಿ ಸಿಹಿ ಸುದ್ದಿ ನೀಡುವುದಾಗಿ ರಾಜ್ಯಾಧ್ಯಕ್ಚರು ಭರವಸೆ ನೀಡಿದ್ದಾರೆ ಎಂದರು.

ಮಹಾದಾಯಿ ವಿವಾದದ ಚೆಂಡು ಬಿಜೆಪಿ ಅಂಗಳದಲ್ಲಿದೆ: ಸಿದ್ದರಾಮಯ್ಯ

Siddu's reply was unsatisfied: MLA Suresh kumar

ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಒಂದೆಡೆ ಸೇರಿ ಚರ್ಚಿಸುವ ಅಗತ್ಯವಿದೆ. ಮಾತುಕತೆ ನಡೆಸಿ ಯೋಜನೆ ಬಗ್ಗೆ ಒಳ್ಳೆಯ ನಿಲುವು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಅಧಿವೇಶನದ ಸುಮಾರು 10 ದಿನಗಳು ಸಂಪೂರ್ಣವಾಗಿ ವೈದ್ಯರ ಮುಷ್ಕರ, ವಿದೇಯಕ ಮಂಡನೆ ಹಾಗೂ ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತಹ ವಿಚಾರಗಳು ಮಾತ್ರ ಚರ್ಚೆಯಾಗಿದೆ. ಕೇವಲ ಒಂದು ದಿನ ಮಾತ್ರ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಚರ್ಚೆ ನಡೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP MLA Suresh kumar express his disappointment over chief minister Siddaramaiah's answer on discussion of North Karnataka issues.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ