ಮೋದಿ ಧಾಟಿಯಲ್ಲೇ ಸಿದ್ದರಾಮಯ್ಯ ಹಾಸ್ಯ, ವಿಡಿಯೋ ವೈರಲ್

Posted By:
Subscribe to Oneindia Kannada

ಚಿಕ್ಕೋಡಿ, ನವೆಂಬರ್ 23: "ಸಬ್ ಕಾ ಸಾಥ್ ಸಬ್ ಕಾ ವಿಕಾಸ್"- ಅಯ್ಯೋ ಇದು ಪ್ರಧಾನಿ ಮೋದಿ ಅವರ ಡೈಲಾಗ್ ಇದ್ದ ಹಾಗಿದೆಯಲ್ಲಾ ಅನ್ನಿಸುವಂತೆ, ಅಲ್ಲಲ್ಲ ಮೋದಿಯವರನ್ನೇ ಅನುಕರಿಸಿ ಹೇಳಿದರು ಮುಖ್ಯಮಂತ್ರಿ ಸಿದ್ದರಾಮಯ್ಯ. ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಅನುಕರಣೆ ಮಾಡಿದ ವಿಡಿಯೋ ಇಂಟರ್ ನೆಟ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ನಗು ಜಗಳಗಳ ನಡುವೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ನರೇಂದ್ರ ಮೋದಿ ವಿರುದ್ಧ ಕತ್ತಿ ಝಳಪಿಸುವ ಮೂಡ್ ನಲ್ಲಿದ್ದರು. ಹಾಗೇ ಮುಂದುವರಿದು, ಅಚ್ಛೇ ದಿನ ಆಯೇಗಾ! ಎಂದವರೇ, ಕಬ್ ಆಯೇಗಾ? ಕಿಸ್ಕೋ ಆಯೇಗಾ? (ಯಾವಾಗ ಬರುತ್ತದೆ, ಯಾರಿಗೆ ಬರುತ್ತದೆ?) ನಿಮಗೆ ಅಚ್ಛೇ ದಿನ್ ಬಂದವಾ ಎಂದು ಪ್ರಶ್ನಿಸಿದರು.

Siddaramaiah’s hilarious imitation of Modi

ಈ ಮಾತು ಹಾಗೂ ಧಾಟಿ ನೋಡಿ ಅಲ್ಲಿ ಸೇರಿದ್ದ ಜನ ಜೋರು ಚಪ್ಪಾಳೆ ತಟ್ಟಿದರು ಹಾಗೂ ಜೋರಾಗಿ ನಕ್ಕರು. ವ್ಯಂಗ್ಯದ ಉತ್ತುಂಗ ಎನ್ನುವಂತೆ, ನೂರು ದಿನದಲ್ಲಿ ಕಪ್ಪು ಹಣವನ್ನು ವಿದೇಶಗಳಿಂದ ತಂದು ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ರುಪಾಯಿ ಹಾಕುವ ಭರವಸೆ ನೀಡಿದ್ದರು. ಹದಿನೈದು ಲಕ್ಷ ಇರಲಿ, ಅಕೌಂಟಿಗೆ ಹದಿನೈದು ಪೈಸೆನಾದರೂ ಹಾಕಿದರಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

ಚುನಾವಣೆ ಬರ್ತಿದ್ದಂಗೆ ಮಹದಾಯಿ ನೆನಪಾಗ್ತಿದೆ, ಬಿಎಸ್ ವೈಗೆ ಸಿದ್ದರಾಮಯ್ಯ ಟಾಂಗ್

ಸಬ್ ಕಾ ವಿಕಾಸ್ ಇಲ್ಲ, ಅಚ್ಛೇ ದಿನ್ ಇಲ್ಲ, ಹದಿನೈದು ಲಕ್ಷವೂ ಇಲ್ಲ ಎಂದರು. ಇದೇ ವೇಳೆ ಸೀರೆ ಹಾಗೂ ಸೈಕಲ್ ವಿತರಣೆ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನೂ ಛೇಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Inaugurating the new office of the Government Tool and Training Centre in Chikkodi in Belagavi district on Wednesday, Siddaramaiah took the chance to take a strong dig at the PM and his promises of development.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ