ಕೈಗಾರಿಕಾ ಪ್ರಗತಿಯಲ್ಲಿ ಕರ್ನಾಟಕವೇ ನಂ.1: ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಳಗಾವಿ, ಡಿಸೆಂಬರ್ 21: ಮುಖ್ಯಮಂತ್ರಿಗಳ ನವಕರ್ನಾಟಕ ನಿರ್ಮಾಣ ಯಾತ್ರೆ ಇಂದು ಬೆಳಗಾವಿ ತಲುಪಿದೆ. ಇಲ್ಲಿನ ಗೋಕಾಕ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಸೇರಿಂದತೆ ವಿವಿಧ ಇಲಾಖೆಗಳ ಒಟ್ಟು 110 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಿದರು.

ಗೋಕಾಕದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಬರಮುಕ್ತ, ಋಣಮುಕ್ತ, ಅಪೌಷ್ಟಿಕತೆ ಮುಕ್ತ, ಹಸಿವು ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಇಂದು ಸಿದ್ದರಾಮಯ್ಯನವರ 'ನವ ಕರ್ನಾಟಕ ನಿರ್ಮಾಣ' ಯಾತ್ರೆ ಬೆಳಗಾವಿನತ್ತ

ನೆಲ-ಜಲ-ಭಾಷೆಗೆ ಸಂಬಂಧಿಸಿದ ವಿಚಾರಗಳಲ್ಲಿ ನಾವೆಂದೂ ರಾಜಕೀಯ ಮಾಡಿಲ್ಲ ಸರ್ವ ಪಕ್ಷಗಳ ಸಭೆ ಕರೆದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯ ಇತ್ಯರ್ಥಕ್ಕೆ ಪ್ರಯತ್ನಿಸಿದ್ದೇವೆ ಎಂದು ಹೇಳಿದ ಮುಖ್ಯಮಂತ್ರಿಗಳು ಇದೇ ಮೇಲ್ಪಂಕ್ತಿಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೂಡ ಅನುಸರಿಸುತ್ತದೆ ಎಂಬ ವಿಶ್ವಾಸವಿಟ್ಟಿದ್ದೇವೆ ಎಂದರು.

ರಾಜ್ಯ ಸರ್ಕಾರದ ಸಹಕಾರ

ರಾಜ್ಯ ಸರ್ಕಾರದ ಸಹಕಾರ

ಮಹದಾಯಿ ಪ್ರಕರಣವನ್ನು ಅಲ್ಲಿನ ರೈತರ ಬೇಡಿಕೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಇತ್ಯರ್ಥ ಮಾಡಿದರೆ ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಹಾಗೂ ಇದಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

20136-14ರಲ್ಲಿ 11ನೇ ಸ್ಥಾನದಲ್ಲಿತ್ತು

ಕೈಗಾರಿಕೆಯಲ್ಲಿ ನಂ.1 ಸ್ಥಾನದಲ್ಲಿ ಕರ್ನಾಟಕ ಇದೆ. ದೇಶದಲ್ಲಿಯೇ ಕೈಗಾರಿಕಾ ಸ್ನೇಹಿ ರಾಜ್ಯವಾಗಿ ಹೊರಹೊಮ್ಮಿದೆ. 2013-14ರಲ್ಲಿ 11ನೇ ಸ್ಥಾನದಲ್ಲಿ ಇದ್ದ ರಾಜ್ಯ ಈಗ ನಂ.೧ ಸ್ಥಾನಕ್ಕೇರಿದೆ. ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಒಟ್ಟಾರೆ ಪ್ರಮಾಣದಲ್ಲಿ ಶೇ. 19 ರಷ್ಟು ಬಂಡವಾಳ ರಾಜ್ಯಕ್ಕೆ ಹರಿದು ಬಂದಿದೆ. ನೆರೆಯ ಗುಜರಾತ್ ರಾಜ್ಯದಲ್ಲಿ ವಿದೇಶಿ ನೇರ ಬಂಡವಾಳ ಪ್ರಮಾಣ ಕೇವಲ ಶೇ. 1.65 ಆಗಿದೆ ಎಂದರು.

15 ಲಕ್ಷ ಉದ್ಯೋಗ ಸೃಷ್ಠಿ

15 ಲಕ್ಷ ಉದ್ಯೋಗ ಸೃಷ್ಠಿ

2014-19ರ ಕೈಗಾರಿಕಾ ನೀತಿ ಜಾರಿಗೆ ತಂದಿರುವ ನಮ್ಮ ಸರ್ಕಾರ ಕಳೆದ 15 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಿತ್ತು. ಇದುವರೆಗೆ 14 ಲಕ್ಷ ಉದ್ಯೋಗ ಸೃಷ್ಟಿಸಲಾಗಿದೆ ಎಂದು ವಿವರಿಸಿದರ ಸಿದ್ದರಾಮಯ್ಯ ಅವರು ಮುಂದಿನ ಜನವರಿ ವೇಳೆಗೆ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಇಂದಿರಾ ಕ್ಯಾಂಟೀನ್ ಗಳು ಸೇವೆ ಆರಂಭಿಸಲಿವೆ ಎಂದರು.

ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ

ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ

ಪರಿಶಿಷ್ಟ ಜಾತಿ, ಪಂಗಡಗಳ ಜನರಿಗೆ ಸಿವಿಲ್ ಕಾಮಗಾರಿಗಳ ಗುತ್ತಿಗೆಯಲ್ಲಿ ಮೀಸಲಾತಿ ಒದಗಿಸಿದ ಮೊದಲ ರಾಜ್ಯ ಕರ್ನಾಟಕ ಎಂದು ಮಾಹಿತಿ ನೀಡಿದ ಮುಖ್ಯಮಂತ್ರಿಗಳು ಕುರುಬರ ಹಟ್ಟಿ, ನಾಯಕರ ಹಟ್ಟಿ, ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಮಾಡಿದೆ ಎಂದರು.

ಸಾಲ ಮನ್ನಾಮಾಡಲು ಕೇಂದ್ರಕ್ಕೆ ಏನು ದಾಡಿ

ಸಾಲ ಮನ್ನಾಮಾಡಲು ಕೇಂದ್ರಕ್ಕೆ ಏನು ದಾಡಿ

ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದರೆ, ಕೇಂದ್ರದಿಂದ ನಾವು ಮಾಡಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದರು ಆದರೆ ಈ ವರೆಗೆ ಮಾಡಿಸಿಲ್ಲ ಅವರಿಗೆ ನಾಲಿಗೆ ಒಂದಾ, ಎರಡಾ ಎಂದು ರೈತರು ಪ್ರಶ್ನಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು. ಮನಮೋಹನ ಸಿಂಗ್ ಸಾಲ ಮನ್ನಾ ಮಾಡಿದ್ದರು. ಮೋದಿಗೇನು ರೋಗ? ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
CM Siddaramaiah said Karnataka is no.1 state in industry growth. Siddaramaiah inaugurates 110 crore worth development programs in Belagavi's Gokak and Raibhag.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ