ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏಳು ದಿನದ ನಂತರ ಕಲಾಪದಲ್ಲಿ ಸಿದ್ದರಾಮಯ್ಯ ಭಾಗಿ

|
Google Oneindia Kannada News

ಬೆಳಗಾವಿ, ಡಿಸೆಂಬರ್ 18: ಬೆಳಗಾವಿ ಅಧಿವೇಶನ ಪ್ರಾರಂಭವಾಗಿ ಏಳು ದಿನಗಳ ನಂತರ ಇಂದು ಸಿದ್ದರಾಮಯ್ಯ ಅವರು ಸದನಕ್ಕೆ ಹಾಜರಾಗಿ ಕಲಾಪದಲ್ಲಿ ಭಾಗವಹಿಸಿದರು.

ಶಾಸಕಾಂಗ ಪಕ್ಷದ ಸಭೆ : ಸಿದ್ದರಾಮಯ್ಯ ಮುಂದಿದೆ ದೊಡ್ಡ ಸವಾಲು! ಶಾಸಕಾಂಗ ಪಕ್ಷದ ಸಭೆ : ಸಿದ್ದರಾಮಯ್ಯ ಮುಂದಿದೆ ದೊಡ್ಡ ಸವಾಲು!

ಅಧಿವೇಶನ ಆರಂಭವಾಗುವ ದಿನ ಅವರು ಮಲೇಷ್ಯಾ ಪ್ರವಾಸಕ್ಕೆ ತೆರಳಿದರು. ಆದರೆ ಐದು ದಿನಗಳ ಪ್ರವಾಸವನ್ನು ಮೂರು ದಿನಕ್ಕೆ ಮೊಟಕುಗೊಳಿಸಿ ವಾಪಸ್ ಬಂದರು.

ಭೂ ಹಗರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ 'ಬಿಗ್ ರಿಲೀಫ್'ಭೂ ಹಗರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ 'ಬಿಗ್ ರಿಲೀಫ್'

ಆ ನಂತರ ಎರಡು ದಿನಗಳ ಕಾಲ ಅಧಿವೇಶನಕ್ಕೆ ಬರದೇ ಬೆಂಗಳೂರು ಹಾಗೂ ಮೈಸೂರಿನಲ್ಲಿ ಇದ್ದ ಸಿದ್ದರಾಮಯ್ಯ ಇಂದು ಬೆಳಿಗ್ಗೆ ಬೆಳಗಾವಿಗೆ ಬಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿ ಆ ನಂತರ ಅಧಿವೇಶನಕ್ಕೆ ಹಾಜರಾದರು.

Siddaramaiah attended session today after 7 days

ಸಿದ್ದರಾಮಯ್ಯ ಸದನಕ್ಕೆ ಬಂದ ಸಿದ್ದರಾಮಯ್ಯ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಶಾಸಕರು ಬಂದು ಕೈ-ಕುಲುಕಿ ಗೌರವ ಸಲ್ಲಿಸಿದರು. ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು ಸಿದ್ದರಾಮಯ್ಯ ಅವರ ಕುರ್ಚಿ ಬಳಿ ಬಂದು ಕೂತು ಬಹು ಸಮಯ ಚರ್ಚೆ ನಡೆಸಿದ್ದು ವಿಶೇಷವಾಗಿತ್ತು.

ಮಲೇಷ್ಯಾದಿಂದ ಮೂರೇ ದಿನಕ್ಕೆ ಸಿದ್ದರಾಮಯ್ಯ ದಿಢೀರ್ ವಾಪಸ್ ಮಲೇಷ್ಯಾದಿಂದ ಮೂರೇ ದಿನಕ್ಕೆ ಸಿದ್ದರಾಮಯ್ಯ ದಿಢೀರ್ ವಾಪಸ್

ಟಗರು ಕಾಳಗ ಸ್ಪರ್ಧೆಗೆ ಮುಖ್ಯ ಅತಿಥಿಯಾಗಿದ್ದ ಸಿದ್ದರಾಮಯ್ಯ ಅವರು ಕಲಾಪ ಮುಗಿಯುವ ಮುನ್ನವೇ ಕಾರ್ಯಕ್ರಮ ನಿಮಿತ್ತ ಹೊರಟರು. ಆ ನಂತರ ಅವರು ತಮ್ಮ ಕ್ಷೇತ್ರ ಬಾದಾಮಿಗೆ ತೆರಳಿ ಅಲ್ಲಿಂದ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

English summary
Former CM Siddaramaiah attended belgaum session today after 7 days of its start. All party MLAs greets Siddaramaiah as he enters the session hall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X