ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸವದತ್ತಿ ತಹಶೀಲ್ದಾರ್ ಸರ್ಕಾರಿ ಕಾರನ್ನು ಕದ್ದ ಕಳ್ಳರು !

|
Google Oneindia Kannada News

ಬೆಳಗಾವಿ, ಡಿಸೆಂಬರ್ 20 : ತಹಶೀಲ್ದಾರರ ಸರ್ಕಾರಿ ವಾಹನವನ್ನು ಕದ್ದು ಪರಾರಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಸವದತ್ತಿ ತಹಶೀಲ್ದಾರ್ ಬಸನಗೌಡ ಕೋಟೂರ್ ಅವರ ಕಾರನ್ನು ಡಿ.19ರ ಮಧ್ಯರಾತ್ರಿ ಕಳವು ಮಾಡಲಾಗಿದೆ. ತಹಶಿಲ್ದಾರ್ ಕಚೇರಿ ಮುಂದೆ ನಿಲ್ಲಿಸಿದ್ದ ಸರ್ಕಾರಿ ಕಾರು, ಒಂದು ಬೈಕ್ ಕಳವು ಮಾಡಲಾಗಿದೆ.

ವಿಡಿಯೋ: ಟ್ರಾಫಿಕ್ ಪೊಲೀಸನನ್ನೇ ಕಾರಿನ ಮೇಲೆ ಎಳೆದೊಯ್ದ ಭೂಪವಿಡಿಯೋ: ಟ್ರಾಫಿಕ್ ಪೊಲೀಸನನ್ನೇ ಕಾರಿನ ಮೇಲೆ ಎಳೆದೊಯ್ದ ಭೂಪ

ಕೆಎ 24, ಜಿ0069 ಸಂಖ್ಯೆಯ ಕಾರನ್ನು ತಹಶೀಲ್ದಾರ್ ಬಸನಗೌಡ ಕೋಟೂರ್ ಅವರು ಉಪಯೋಗಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ ಅವರು ಕಚೇರಿಗೆ ಬಂದಾಗ ಕಾರು ಕಳುವಾಗಿರುವುದು ಬೆಳಕಿಗೆ ಬಂದಿದೆ.

ಜನವರಿ 01ರಿಂದ ಮಾರುತಿ ಸುಜುಕಿ ವಾಹನಗಳ ಬೆಲೆ ಏರಿಕೆಜನವರಿ 01ರಿಂದ ಮಾರುತಿ ಸುಜುಕಿ ವಾಹನಗಳ ಬೆಲೆ ಏರಿಕೆ

Savadatti tahsildar car and bike stolen

ತಹಶೀಲ್ದಾರ್ ಕಾರನ್ನು ಕದ್ದಿರುವ ಬಗ್ಗೆ ಸವದತ್ತಿಯಲ್ಲಿ ಬಿಸಿ-ಬಿಸಿ ಚರ್ಚೆ ನಡೆಯುತ್ತಿದೆ. ಸರ್ಕಾರಿ ವಾಹನವನ್ನು ಕದ್ದು ಎಲ್ಲಿಯ ತನಕ ಹೋಗುವರು? ಕಳ್ಳರು ಸಿಕ್ಕಿಬೀಳುತ್ತಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

34 ವರ್ಷಗಳ ಬಳಿಕ ಮಾರುತಿ ಸುಜುಕಿ ಓಮ್ನಿ ಉತ್ಪಾದನೆ ಬಂದ್!34 ವರ್ಷಗಳ ಬಳಿಕ ಮಾರುತಿ ಸುಜುಕಿ ಓಮ್ನಿ ಉತ್ಪಾದನೆ ಬಂದ್!

ಸವದತ್ತಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.

English summary
Belagavi district Savadatti tahsildar Basana Gowda car stolen on December 19, 2018 late night. Government car parked in tahsildar office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X