ಈ ಭಾನುವಾರ, ಬೆಳಗಾವಿ : ಸತೀಶ್ ಆಚಾರ್ಯ ಅವರ ವ್ಯಂಗ್ಯಚಿತ್ರ ಪ್ರದರ್ಶನ

Written By: Ramesh
Subscribe to Oneindia Kannada

ಬೆಳಗಾವಿ, ಫೆಬ್ರವರಿ. 03 : ಕನ್ನಡದ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ವ್ಯಂಗ್ಯಚಿತ್ರ ಪ್ರದರ್ಶನ ಫೆಬ್ರವರಿ 05ರಂದು ಬೆಳಗಾವಿಯಲ್ಲಿ ನಡೆಯಲಿದೆ

ಬೆಳಗಾವಿ ನಗರ ಪೊಲೀಸ್ ಹಾಗೂ ರೋಟರಿ ಫ್ಯಾಮಿಲಿ ಬೆಳಗಾವಿ ಆಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರಿಂದ 'ಕಾರ್ಟೂನಿನಲ್ಲಿ ಖಾಕಿ' ಎಂಬ ಹೆಸರಿನ ಅಡಿಯಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ಇದೇ ಭಾನುವಾರ(ಫೆ.05)ರಂದು ಕುಮಾರ ಗಂಧರ್ವ ಹಾಲ್ ಬೆಳಗಾವಿಯಲ್ಲಿ ಆಯೋಜಿಸಲಾಗಿದೆ.

ಭಾನುವಾರ ಬೆಳಗ್ಗೆ 11ರಿಂದ ಸಂಜೆ 7ರ ವರೆಗೆ ನಿಮ್ಮ ಅಚ್ಚುಮೆಚ್ಚಿನ ವ್ಯಂಗ್ಯಚಿತ್ರ ಪ್ರದರ್ಶನವಿರಲಿದೆ. ಸಂಜೆ ನಂತರ ಹಾಸ್ಯ-ಮಿಮಿಕ್ರಿ ಕಲಾವಿದ ಶರಣು ಯಮನೂರ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ.

Satish Acharya cartoon exhibition in Belagavi on February 5

ಅಷ್ಟೇ ಅಲ್ಲದೇ ಅಪರಾಧ ತಡೆ ವಿಷಯದಲ್ಲಿ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ತಿಗಳಿಗೆ ವ್ಯಂಗ್ಯಚಿತ್ರ ಸ್ಪರ್ದೆಯನ್ನು ಏರ್ಪಡಿಸಲಾಗಿದೆ.

ಈ ಸ್ಪರ್ಧೆಯಲ್ಲಿ ಆಕರ್ಷಕ ವ್ಯಂಗ್ಯಚಿತ್ರಗಳನ್ನು ಬಿಡಿಸಿದ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನಗಳ ಜತೆಗೆ ಕಾರ್ಟೂನ್ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಗುತ್ತದೆ.

ಈ ಸ್ಪರ್ಧೆ ಫೆಬ್ರವರಿ 05 ಬೆಳಗ್ಗೆ 10ರಿಂದ ಮದ್ಯಾಹ್ನ 1ರ ವರೆಗೆ ಶರ್ಖತ್ ಪಾರ್ಕ್, ಕೇಂದ್ರಿಯ ವಿದ್ಯಾಲಯ ಕ್ಯಾಂಪ್ ನಲ್ಲಿ ಏರ್ಪಡಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Belagavi city police and Rotary family Belagavi organizing Satish Acharya cartoon exhibition for crime prevention programme in Belagavi on February 5.
Please Wait while comments are loading...