ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಕ್ಷ್ಮಿ ಹೆಬ್ಬಾಳ್ಕರ್‌ ಜತೆ ಭಿನ್ನಾಭಿಪ್ರಾಯ ಇಲ್ಲ: ಸತೀಶ್ ಜಾರಕಿಹೊಳಿ

By Manjunatha
|
Google Oneindia Kannada News

ಬೆಳಗಾವಿ, ಏಪ್ರಿಲ್ 12: ನನ್ನ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಇದ್ದರೂ ಅದನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಇನ್ನು 10 ವರ್ಷಕ್ಕೆ ನಾನೇ ಸಿಎಂ : ಜಾರಕಿಹೊಳಿ ಇನ್ನು 10 ವರ್ಷಕ್ಕೆ ನಾನೇ ಸಿಎಂ : ಜಾರಕಿಹೊಳಿ

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಎಂದ ಮೇಲೆ ಭಿನ್ನಾಭಿಪ್ರಾಯಗಳು ಸಾಮಾನ್ಯ ಆದರೆ ಅವುಗಳನ್ನು ಪಕ್ಷದ ಹಂತದಲ್ಲೇ ಸರಿಪಡಿಸಿಕೊಳ್ಳುತ್ತೇವೆ, ಅವು ವೈಯಕ್ತಿಕ ದ್ವೇಷಗಳಲ್ಲ ಎಂದು ಅವರು ಹೇಳಿದರು.

ಒಂದಾದ ಜಾರಕಿಹೊಳಿ ಸಹೋದರರು, ಲಖನ್ ಬಿಜೆಪಿ ಸೇರಲ್ಲ!ಒಂದಾದ ಜಾರಕಿಹೊಳಿ ಸಹೋದರರು, ಲಖನ್ ಬಿಜೆಪಿ ಸೇರಲ್ಲ!

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್‌ ಹಾಗೂ ಜಾರಿಕಿ ಹೊಳಿ ಮಧ್ಯೆ ಅಸಹನೆ ಇದ್ದು, ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಮೇಲೆ ಹಿಡಿತ ಸಾಧಿಸಲು ಇಬ್ಬರ ಮಧ್ಯೆ ತೆರೆಮರೆ ಗುದ್ದಾಟ ನಡೆಯುತ್ತಿದೆ ಎನ್ನಾಗಿತ್ತು, ಆದರೆ ಇದನ್ನು ಈಗ ಜಾರಕಿಹೊಳಿ ತಳ್ಳಿ ಹಾಕಿದ್ದಾರೆ.

Sathish Jarakiholi talks about Lakshmi Hebalkar

ಕಾಂಗ್ರೆಸ್‌ಗಿಂತಲೂ ಬಿಜೆಪಿಯಲ್ಲಿ ಹೆಚ್ಚಿನ ಭಿನ್ನಾಭಿಪ್ರಾಯ ಇದೆ ಎಂದ ಅವರು ಈ ಬಾರಿ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇದ್ದದೂ ಮೇ 24ಕ್ಕೆ ಎಲ್ಲವೂ ಸರಿಯಾಗುತ್ತದೆ. ಪಕ್ಷದ ಗೆಲುವು ಎಲ್ಲವನ್ನೂ ಮರೆಸುತ್ತದೆ ಎಂದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಗೋಕಾಕ್‌ನಲ್ಲಿ ಅಮಿತ್ ಶಾ ಪ್ರವಾಸಕ್ಕೆ ಕಾಂಗ್ರೆಸ್‌ ಅಡ್ಡಿ ಪಡಿಸುವುದಿಲ್ಲ ಎಂದ ಅವರು ರಾಷ್ಟ್ರೀಯ ಮುಖಂಡರು ಬಂದಾಗ ಹಾಗೆ ಮಾಡುವುದು ಉತ್ತಮ ನಡೆಯಲ್ಲ, ಅಮಿತ್ ಶಾ ಬಂದು ಅವರ ಪ್ರಚಾರ ಮಾಡಿ ಹೋಗಲಿ, ನಮ್ಮ ಜನಗಳ ಮೇಲೆ ವಿಶ್ವಾಸವಿದೆ ಎಂದರು.

English summary
congress leader Sathish Jarakiholi said no disagreement between him and KPCC women President Lakshmi Hebbalkar. He also said BJP has more problems than congress right now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X