ಮಾನಸಿಕ ಅಸ್ವಸ್ಥೆ ಲಕ್ಷ್ಮಿಗೆ ಮರುವಸತಿ ಸೌಕರ್ಯ: ಸಿದ್ದರಾಮಯ್ಯ

Posted By: Nayana
Subscribe to Oneindia Kannada

ಬೆಳಗಾವಿ, ನವೆಂಬರ್ 23 : ಮಾನಸಿಕ ಅಸ್ವಸ್ಥೆಯಾಗಿರುವ ಲಕ್ಷ್ಮಿ ಅವರಿಗೆ ಸೂಕ್ತ ಮರುಸೌಕರ್ಯ ಕಲ್ಪಿಸಲಾಗವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬುಧವಾರ (ನ. 22)ರಂದು ಭರವಸೆ ನೀಡಿದರು.

ಲಕ್ಷ್ಮೀ ಹಾಗೂ ಸಚಿವೆ ಉಮಾಶ್ರೀ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಭರವಸೆ ನೀಡಿದರು. ಉತ್ತರ ಪ್ರದೇಶದ ಪೊಲೀಸರು ರಕ್ಷಿಸಿ ಸ್ವಾಧಾರ ಗೃಹದಲ್ಲಿ ಇರಿಸಿದ್ದ ಕನ್ನಡದ ಮಹಿಳೆಯನ್ನು ಅಧಿಕಾರಿಗಳು ರಾಜ್ಯಕ್ಕೆ ವಾಪಸ್ ಕರೆತಂದು ಮರು ವಸತಿ ಸೌಕರ್ಯ ಕಲ್ಪಿಸಿದ್ದಾರೆ.

Rescuid women from UP brought to karnataka

ಮಹಿಳೆಯ ಭಾಷೆ ಕನ್ನಡ ಎಂದು ತಿಳಿದ ಬಳಿಕ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರಾದ ಎಸ್.ಪಿ.ಸಿಂಗ್ ಅವರು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ರಾಜ್ಯಕ್ಕೆ ಕರೆದುಕೊಂಡು ಹೋಗುವಂತೆ ಮನವಿ ಮಾಡಿದ್ದರು.

ರತ್ನಪ್ರಭಾ ಅವರ ಸೂಚನೆಯ ಮೇರೆಗೆ ಅಲ್ಲಿಗೆ ತೆರಳಿದ್ದ ಅಧಿಕಾರಿಗಳ ತಂಡ ಲಕ್ಷ್ಮಿ ಅವರನ್ನು ರಾಜ್ಯಕ್ಕೆ ಕರೆತಂದಿದೆ. ವಾಸ ಸ್ಥಳದ ವಿವರ ಲಭ್ಯವಾಗದ ಕಾರಣ ಲಕ್ಷ್ಮಿ ಅವರನ್ನು ಬಾಗಲಕೋಟೆಯ ನವನಗರದ ಸೃಷ್ಟಿ ಮಹಿಳಾ ಮರು ವಸತಿ ಕೇಂದ್ರದಲ್ಲಿ ಇರಿಸಲಾಗಿದೆ.

ಲಕ್ಷ್ಮೀ ಅವರಿಗೆ ಸೀರೆ, ಹೊದಿಕೆ,ಹಣ್ಣು ಹಂಪಲು ನೀಡಿಸೂಕ್ತ ಮರುವಸತಿ ಸೌಕರ್ಯ ಕಲ್ಪಿಸುವುದರ ಜತೆಗೆ ಚಿಕಿತ್ಸೆಗೂ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lakshmi a mentally retired women, who found in UP brought back to belgaum, later Women and Child Development Minister umashree met chief minister along with the women.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ