ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ: ವಿಕೃತ ವೈದ್ಯನ ಬಂಧನ

|
Google Oneindia Kannada News

ಬೆಳಗಾವಿ, ಜನವರಿ 18 : ತಡ ರಾತ್ರಿ ಮನೆಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿ ಭಯ ಹುಟ್ಟಿಸಿದ್ದ ವಿಕೃತ ವೈದ್ಯನನ್ನು ಬೆಳಗಾವಿ ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿಯ ಜಾಧವ ನಗರದಲ್ಲಿ ಮಂಗಳವಾರ ಜ.16ರ ರಾತ್ರಿ ಮನೆಮುಂದೆ ನಿಲ್ಲಿಸಿದ್ದ7 ಕಾರುಗಳು ಸುಟ್ಟು ಭಸ್ಮವಾಗಿದ್ದವು. ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಹೆಲ್ಮೇಟ್ ಧರಿಸಿ ಬಂದ ದುಷ್ಕರ್ಮಿಗಳು, ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿತ್ತು. ದುಷ್ಕರ್ಮಿಗಳ ಹುಡುಕಾಟಕ್ಕಾಗಿ ಪೊಲೀಸರು ವಿಶೇಷ ತಂಡವೊಂದನ್ನು ನೇಮಿಸಿದ್ದರು.

ಬೆಳಗಾವಿ: 7 ಕಾರುಗಳಿಗೆ ಬೆಂಕಿ ಇಟ್ಟು ಪರಾರಿಯಾದ ದುಷ್ಕರ್ಮಿಗಳು ಬೆಳಗಾವಿ: 7 ಕಾರುಗಳಿಗೆ ಬೆಂಕಿ ಇಟ್ಟು ಪರಾರಿಯಾದ ದುಷ್ಕರ್ಮಿಗಳು

ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ವಿಕೃತ ವೈದ್ಯನೊಬ್ಬ ಬೆಂಕಿ ಹಚ್ಚಿರುವುದು ಇದೀಗ ಬೆಳಕಿಗೆ ಬಂದಿದೆ. ವೈದ್ಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಕಾರ್ ಗಳಿಗೆ ಬೆಂಕಿ ಹಚ್ಚಿ ಪರಾರಿಯಾಗುತ್ತಿದ್ದ ವೈದ್ಯ ಅಮೀತ್ ಗಾಯಕವಾಡ್ ಬಂಧಿಸಲಾಗಿದೆ.

Psycho doctor arrest who set fire cars

ಜಾಧವ ನಗರದಲ್ಲಿ ಮಾತ್ರವಲ್ಲ ಕಲಬುರಗಿ ನಗರದಲ್ಲೂ ಕೂಡ 15 ಕಾರುಗಳಿಗೆ ಬೆಂಕಿ ಇಟ್ಟಿದ್ದ ಆರೋಪದ ಮೇಲೆ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ. ಕಲಬುರಗಿಯಲ್ಲಿ ಮೂರು ದಿನಗಳ ಹಿಂದೆ ಇಂತಹದ್ದೇ ಘಟನೆಯೊಂದು ನಡೆದಿದ್ದು ವಿವಿಧೆಡೆ ದುಷ್ಕರ್ಮಿಗಳು ಮನೆಯ ಎದುರು ನಿಲ್ಲಿಸಿದ್ದ ಮೂರು ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು.

Psycho doctor arrest who set fire cars

ಅದಾದ ನಂತರ ಮರುದಿನವೇ ಕಲಬುರಗಿಯಲ್ಲಿ ನಿಲ್ಲಿಸಿದ್ದ ಮತ್ತೊಂದು ಕಾರಿಗೆ ಬೆಂಕಿ ಹಚ್ಚಲಾಗಿತ್ತು. ಕಲಬುರಗಿ ಪೊಲೀಸರು ಕೂಡ ದುಷ್ಕರ್ಮಿಗಳ ಹುಡುಕಾಟದಲ್ಲಿದ್ದರು. ಅಮಿತ್ ಗಾಯಕ್ ವಾಡ ಬಂಧನದ ಬಳಿಕ ಕಲಬುರಗಿಯಲ್ಲಿ ಕಾರುಗಳಿಗೆ ಬೆಂಕಿ ಇಟ್ಟಿದ್ದು ಈತನೇ ಎಂದು ತಿಳಿದುಬಂದಿದೆ. ಬಂಧಿತ ವೈದ್ಯನಿಂದ ಕಾರ್, ಐದು ಮೊಬೈಲ್, ಹ್ಯಾಮರ್, ಚಾಕು, ಕಾರಿಗೆ ಬೆಂಕಿ ಹಚ್ಚಲು ಉಪಯೋಗಿಸುತ್ತಿದ್ದ ಡೀಸೆಲ್ ವಶಕ್ಕೆ ಪಡೆಯಲಾಗಿದೆ.

English summary
A doctor of BIMS who set fire ten cars including BMW and Honda verna in Jadhav Galli of Belgaum arrested last night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X