ಮೂಡಲಗಿ ತಾಲೂಕಿಗೆ ಆಗ್ರಹಿಸಿ 6ನೇ ದಿನಕ್ಕೆ ಕಾಲಿಟ್ಟ ಉಗ್ರ ಪ್ರತಿಭಟನೆ

Subscribe to Oneindia Kannada

ಬೆಳಗಾವಿ, ಸೆಪ್ಟೆಂಬರ್ 13: ಕೊನೆಯ ಘಳಿಗೆಯಲ್ಲಿ ನೂತನ ತಾಲೂಕುಗಳ ಪಟ್ಟಿಯಿಂದ ಮೂಡಲಗಿ ಕೈಬಿಟ್ಟಿರುವುದನ್ನು ವಿರೋಧಿಸಿ ಪಟ್ಟಣದಲ್ಲಿ ನಡೆಯುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಪಟ್ಟಣ ಮೂಡಲಗಿ ನೂತನ ತಾಲೂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಆದರೆ, ಅಧಿಕೃತ ತಾಲೂಕುಗಳ ಪಟ್ಟಿ ಬಿಡುಗಡೆ ಮಾಡುವಾಗ ಮಾತ್ರ ಮೂಡಲಗಿ ಹೆಸರು ನಾಪತ್ತೆಯಾಗಿತ್ತು.

Protest steps into the sixth day demanding for Moodalagi taluk in Belagavi

ಇದರಿಂದ ಆಕ್ರೋಶಗೊಂಡಿರುವ ಸ್ಥಳೀಯರು ಇಲ್ಲಿನ ಕಲ್ಮೇಶ್ವರ ವೃತ್ತದಲ್ಲಿ ಕಳೆದ ಐದು ದಿನಗಳಿಂದ 'ಮೂಡಲಗಿ ತಾಲೂಕು ಹೋರಾಟ ಸಮಿತಿ' ಹೆಸರಿನಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ಇಂದಿಗೆ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದ್ದು, "ಜನತೆಯ ಸಹನೆಯನ್ನು ಕೆದಕಬೇಡಿ. ಈ ಭಾಗದ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಹೋರಾಟದಲ್ಲಿ ಭಾಗಿಯಾಗಬೇಕು. ಜನತೆಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು," ಎಂದು ಹೋರಾಟಗಾರರು ಹೇಳಿದ್ದಾರೆ.

Protest steps into the sixth day demanding for Moodalagi taluk in Belagavi

ಈ ಹಿಂದೆ ಕಳೆದ ಶುಕ್ರವಾರ ಮೂಡಲಗಿಯಲ್ಲಿ ಬಂದ್ ನಡೆದಿತ್ತು, ಇದೀಗ ಮತ್ತೆ ಇಂದು ಪಟ್ಟದಲ್ಲಿ ಅಘೋಷಿತ ಬಂದ್ ನಡೆಯುತ್ತಿದೆ. ಇದಲ್ಲದೆ ಶುಕ್ರವಾರ ಅಂದರೆ ಸೆ. 15 ರಂದು ತಾಲೂಕು ಹೋರಾಟ ಸಮಿತಿ ಗುರ್ಲಾಪೂರದಿಂದ ಗೋಕಾಕ್ ತಹಶೀಲ್ದಾರ್ ಕಚೇರಿವರೆಗೆ ಬೃಹತ್ ಬೈಕ್ ರ್ಯಾಲಿ ಆಯೋಜಿಸಲಾಗಿದೆ.

ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ ಸೇರಿ ಹಲವು ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿದ್ದು, ಸುಮಾರು 500 ಬೈಕ್‍ಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Protest went on the sixth day against the abandonment of the Mudalagi from new Taluk's list, here in Mudalagi city of Belagavi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ