ಆರೋಗ್ಯ ಎಮರ್ಜೆನ್ಸಿ: ಸತ್ತವರ ಸಂಖ್ಯೆ 15ಕ್ಕೆ ಏರಿಕೆ

Posted By: Nayana
Subscribe to Oneindia Kannada

ಬೆಳಗಾವಿ, ನವೆಂಬರ್ (15) : ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ತಿದ್ದುಪಡಿಯಲ್ಲಿನ ಅಂಶಗಳನ್ನು ಕೈಬಿಡುವಂತೆ ಕಳೆದ 46ಗಂಟೆಗಳಿಂದ ಖಾಸಗಿ ವೈದ್ಯರು ಬೆಳಗಾವಿಯಲ್ಲಿ ಧರಣಿ ನಡೆಸುತ್ತಿದ್ದಾರೆ. ಇದರ ಪರಿಣಾಮ ಬುಧವಾರ ಮೂವರು ಮಂದಿ ಸಾವನ್ನಪ್ಪಿದ್ದಾರೆ.

ನಾಳೆಯಿಂದ ಬೆಂಗಳೂರಿನ ಎಲ್ಲಾ ಖಾಸಗಿ 'ಒಪಿಡಿ'ಗಳು ಬಂದ್

ಭಾರತೀಯ ವೈದ್ಯ ಸಂಘದ ಜತೆಗೆ ಕರ್ನಾಟಕದ ಒಟ್ಟು 22ಸಾವಿರಕ್ಕೂ ಹೆಚ್ಚು ವೈದ್ಯರು ಧರಣಿ ನಡೆಸುತ್ತಿರುವ ಹಿನ್ನಲೆಯಲ್ಲಿ ಸಕಾಲದಲ್ಲಿ ವೈದ್ಯರಿಂದ ಸರಿಯಾದ ಚಿಕಿತ್ಸೆ ದೊರೆಯದೆ ಮೂವರು ಇಂದು ಸಾವನ್ನಪ್ಪಿದ್ದಾರೆ. ಹಾವೇರಿಯಲ್ಲಿ ಜೀವನ ಹಿರೇಮಠ ಎನ್ನುವ ಮಗು ಮಂಗಳವಾರ ರಾತ್ರಿಯಿಂದಲೇ ಜ್ವರದಿಂದ ಬಳಲುತ್ತಿದ್ದು ಸ್ಥಳೀಯವಾಗಿ ಚಿಕಿತ್ಸೆ ಸಿಗದೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದೆ.

Private Hospital shuts: claim 14 lives

ಇನ್ನು ಭಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬನಹಟ್ಟಿಯಲ್ಲಿ ಈರಪ್ಪ ಮಂಟೂರ(42) ಲಿಯಾಕತ್ ಮಾಲ್ದಾರ್ (67) ಸಮರ್ಪಕ ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದಾರೆ. ಈವರೆಗೆ ಬಾಗಲೋಟೆಯಲ್ಲಿ ಒಟ್ಟು8ಜನರು ಮೃತಪಟ್ಟಿದ್ದಾರೆ.ಸಕಾಲಕ್ಕೆ ಚಿಕಿತ್ಸೆ ಲಭಿಸದೇ ಸಾವು
ತುಮಕೂರು: ಖಾಸಗಿ ಅಸ್ಪತ್ರೆಗಳ ವೈದ್ಯರ ಮುಷ್ಕರದ ಪರಿಣಾಮ ಸಕಾಲದಲ್ಲಿ ಚಿಕಿತ್ಸೆ ಸಿಗದೇ ನಗರದ ಪುರಸ್ ಕಾಲೊನಿಯ ಮಹಮ್ಮದ್ ಪ್ಯಾರು(57) ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.
ರಾತ್ರಿ 9.30 ರ ಹೊತ್ತಿಗೆ ಹೃದಯ ನೋವು ಕಾಣಿಸಿಕೊಂಡಿದೆ. ಕುಟುಂಬದವರು ನಗರದ ಕೆಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಹೋಗಿದ್ದರು. ಮುಷ್ಕರದ ಹಿನ್ನೆಲೆಯಲ್ಲಿ ವೈದ್ಯರು ಇಲ್ಲದ್ದರಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗದಲ್ಲಿ ಮೃತಪಟ್ಟಿದ್ದಾರೆ.
ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯರೋಗ ತಜ್ಞರು ಇಲ್ಲ. ಹೀಗಾಗಿ , ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಚಿಕಿತ್ಸೆಗಾಗಿ ಹೊರ ರಾಜ್ಯಗಳಿಗೆ ತೆರಳುತ್ತಿರುವ ರೋಗಿಗಳು

ಮಂಗಳವಾರ ಮೃತಪಟ್ಟವರ ವಿವರ
ಕಣ್ಬಿಡುವ ಮುನ್ನವೇ ಕಣ್ಮುಚ್ಚಿತು: ವೈದ್ಯ ಮುಷ್ಕರದಿಂದಾಗಿ ಮಗುವೊಂದು ಕಣ್ಣು ಬಿಡುವ ಮುನ್ನವೇ ಕಣ್ಮುಚ್ಚಿದ ಹೃದಯ ವಿದ್ರಾವಕ ಘಟನೆ ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ನಡೆದಿದೆ. 7ತಿಂಗಳ ಗರ್ಭಿಣಿಯೊಬ್ಬರನ್ನು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಘಟಪ್ರಭಾ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆ ಆವರಣಕ್ಕೆ ಬರುವ ಸಮಯದಲ್ಲಿ ನೋವು ಕಾಣಿಸಿಕೊಂಡು ಹೆರಿಗೆಯಾಗಿದೆ. ಆಸ್ಪತ್ರೆ ಸಿಬ್ಬಂದಿಗಳು ಪರಿಶೀಲಿಸಿದಾಗ ಮಗು ಭ್ರೂಣದಲ್ಲೇ ಸಾವನ್ನಪ್ಪಿರುವುದು ಖಚಿತವಾಯಿತು.

ಮೂರು ತಿಂಗಳ ಮಗು ಸಾವು : ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ತಿಪಟೂರಿನ ಮೂರು ತಿಂಗಳಿನ ಗಂಡು ಮಗು ಹಾಸನದಲ್ಲಿ ಮೃತಪಟ್ಟಿದೆ. ತಿಪಟೂರಿನಲ್ಲಿ ಚಿಕಿತ್ಸೆ ಸಿಗದೆ ಹಾಸನಕ್ಕೆ ಕರೆತರಲಾಗಿತ್ತು.

ವೈದ್ಯರ ಧರಣಿ: ಆರೋಗ್ಯ ಮಂತ್ರಿಯ ಹಠಮಾರಿತನಕ್ಕೆ ಇನ್ನೆಷ್ಟು ಬಲಿ?

ಪಿಡಿಓ ಚಿಕಿತ್ಸೆ ಸಿಗದೆ ಸಾವು: ಹೃದಯಾಘಾತಕ್ಕೊಳಗಾಗಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿಯ ಪಿಡಿಓ ಒಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ.

ಹಾವೇರಿಯಲ್ಲಿ ಮೂವರ ಸಾವು: ಹಾವೇರಿಯಲ್ಲಿ ಒಂದೂವರ ವರ್ಷದ ಮಗು ನಯನಾ ಮೂರು ದಿನದಿಂದ ತೀವ್ರ ಬೇಧಿಯಿಂದ ನರುಳುತ್ತಿದ್ದು ಚಿಕಿತ್ಸೆ ದೊರೆಯದೆ ಮೃತಪಟ್ಟಿದ್ದಾರೆ. ಕಾಗಿನೆಲೆ ಗುರುಪೀಠದ ವಿದ್ಯಾರ್ಥಿ ಬಸವರಾಜ ಮೂರ್ಛೆ ರೋಗದಿಂದ, ಹಾಗೂ ವ್ಯಕ್ತಿಯೋರ್ವ ಮೃತಪಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Private doctors are no indefinite strike from Monday. State Government and Doctor association talk failed. Today Three more people lost their life because of unavailability of timely treatment beacuse of the strike.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ