ಮುರಿದುಬಿದ್ದ ಮಾತುಕತೆ : ವೈದ್ಯರಿಂದ ಉಪವಾಸ ಸತ್ಯಾಗ್ರಹ

Posted By: Gururaj
Subscribe to Oneindia Kannada

ಬೆಂಗಳೂರು, ನವೆಂಬರ್ 14 : ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಸರ್ಕಾರದ ನಡುವಿನ ಮಾತುಕತೆ ಮುರಿದುಬಿದ್ದಿದೆ. ಮಂಗಳವಾರದಿಂದ ವೈದ್ಯರು ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ.'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ (ತಿದ್ದುಪಡಿ) 2017'ನ್ನು ಸದನದಲ್ಲಿ ಮಂಡಿಸಬಾರದು ಎಂದು ವೈದ್ಯರು ಪಟ್ಟು ಹಿಡಿದಿದ್ದಾರೆ.

ಖಾಸಗಿ ಆಸ್ಪತ್ರೆ ಬಿಲ್ ಮಂಡನೆಗೂ ಮುನ್ನ ಮರು ಪರಿಶೀಲನೆ: ಸಿಎಂ ಭರವಸೆ

ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಜ್ಯ ಪದಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ನಡೆಸಿದ ಮಾತುಕತೆ ವಿಫಲವಾಗಿದೆ. ಸೋಮವಾರ ಬೆಳಗ್ಗೆಯಿಂದ ಬೆಳಗಾವಿಯ ಸುವರ್ಣವಿಧಾನಸೌಧದ ಮುಂದೆ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ವೈದ್ಯರ ಮುಷ್ಕರವೂ ವೈದ್ಯನೇ ಹರಿಃ ಎಂಬ ತಪ್ಪು ಕಲ್ಪನೆಯೂ

Private doctors to go on hunger protest

'ಅಧಿವೇಶನದಲ್ಲಿ ಮಂಡಿಸಲಿರುವ ಮಸೂದೆ ಬಗ್ಗೆ ಭಯ ಬೇಡ ವೈದ್ಯರಿಗೆ ತೊಂದರೆ ಅಥವ ಕಿರುಕುಳ ನೀಡುವ ಮಸೂದೆ ರೂಪಿಸಿಲ್ಲ. ಮಸೂದೆ ಮಂಡನೆ ಮಾಡುವ ಮೊದಲು ಆರೋಗ್ಯ ಸಚಿವರು ಮತ್ತು ಐಎಂಎ ಪದಾಧಿಕಾರಿಗಳ ಜೊತೆ ಮತ್ತೊಮ್ಮೆ ಮಾತುಕತೆ ನಡೆಸುತ್ತೇನೆ' ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಖಾಸಗಿ ಆಸ್ಪತ್ರೆಗಳ ಮುಷ್ಕರ : ಡಾ.ದೇವಿ ಪ್ರಸಾದ್ ಶೆಟ್ಟಿ ಖಡಕ್ ಸಂದೇಶ

ಕಾಂಗ್ರೆಸ್‌ ಪಕ್ಷದಲ್ಲಿಯೇ ಮಸೂದೆ ವಿಚಾರದಲ್ಲಿ ಎರಡು ಬಣಗಳು ಸೃಷ್ಟಿಯಾಗಿವೆ. ಕೆಲವು ಶಾಸಕರು, ಸಚಿವರು ಸಿದ್ದರಾಮಯ್ಯ ಅವರ ಮೇಲೆ ಮಸೂದೆ ಮಂಡನೆ ಮಾಡಬಾರದು ಎಂದು ಒತ್ತಡ ಹಾಕುತ್ತಿದ್ದರೆ. ಕೆಲವು ಸಚಿವರು ಮಸೂದೆ ಪರವಾಗಿದ್ದಾರೆ ಎಂದು ತಿಳಿದುಬಂದಿದೆ.

ವೈದ್ಯರ ಮುಷ್ಕರ : ರೋಗಿಗಳ ಪರದಾಟ, ಸರ್ಕಾರದ ಮೌನ

ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಮಸೂದೆ ಪರವಾಗಿದ್ದಾರೆ. ವೈದ್ಯರ ಒತ್ತಾಯಕ್ಕೆ ಮಣಿದು ಸದನದಲ್ಲಿ ಮಸೂದೆ ಮಂಡನೆ ಮಾಡದಿರುವ ನಿರ್ಧಾರ ಕೈಗೊಳ್ಳಬಾರದು ಎಂದು ಅವರು ಸಿದ್ದರಾಮಯ್ಯ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಮಸೂದೆಯಲ್ಲಿ ಏನಿದೆ?

* ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ದರವನ್ನು ಖಾಸಗಿ ಆಸ್ಪತ್ರೆಗಳು ವಿಧಿಸುವಂತಿಲ್ಲ
* ಹೆಚ್ಚು ಬಿಲ್ ಮಾಡಿದರೆ 25 ರಿಂದ 5 ಲಕ್ಷದ ತನಕ ದಂಡ ವಿಧಿಸಲಾಗುತ್ತದೆ
* ನಿಯಮ ಉಲ್ಲಂಘನೆ ಮಾಡಿದರೆ 6 ತಿಂಗಳಿನಿಂದ 3 ವರ್ಷದ ತನಕ ಜೈಲು ಶಿಕ್ಷೆ ವಿಧಿಸಬಹುದು
* ದೇಹ ಹಸ್ತಾಂತರ ಮಾಡುವ ಮುನ್ನ ಬಾಕಿ ಮೊತ್ತ ಪಾವತಿಸುವಂತೆ ಒತ್ತಾಯ ಮಾಡುವಂತಿಲ್ಲ
* ವೈದ್ಯಕೀಯ ಸಂಸ್ಥೆಗಳು ಸಂಬಂಧಿಸಿದ ಪ್ರಾಧಿಕಾರದಲ್ಲಿ ನೋಂದಣಿ ಮಾಡುವುದು ಕಡ್ಡಾಯ

ಮುಂತಾದ ಅಂಶಗಳನ್ನು ಮಸೂದೆ ಒಳಗೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Private hospital doctors demanding for the Karnataka government not to table Karnataka Private Medical Establishments (KPME) Act will go for hunger protest form November 14, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ