ಮುಂದುವರೆದ ವೈದ್ಯರ ಧರಣಿ: ಮೃತರ ಸಂಖ್ಯೆ ಐದಕ್ಕೆ ಏರಿಕೆ

Posted By: Nayana
Subscribe to Oneindia Kannada

ಬೆಳಗಾವಿ, ನವೆಂಬರ್ ೧೪ : ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ 2017 (ಕೆಪಿಎಂಇ) ಮಾಡಿರುವ ತಿದ್ದುಪಡಿಯಲ್ಲಿನ ಕೆಲವು ಅಂಶಗಳನ್ನು ಕೈಬಿಡುವಂತೆ ಆಗ್ರಹಿಸಿ ಭಾರತೀಯ ವೈದ್ಯ ಸಂಘದ (ಐಎಂಎ) ರಾಜ್ಯ ಘಟಕದ ಸದಸ್ಯರು ಬೆಳಗಾವಿಯಲ್ಲಿ ಧರಣಿ ಮುಂದುವರೆಸಿದ್ದಾರೆ.

ಮುರಿದುಬಿದ್ದ ಮಾತುಕತೆ : ವೈದ್ಯರಿಂದ ಉಪವಾಸ ಸತ್ಯಾಗ್ರಹಧಾರವಾಡದ ಗಣಪತಿ ಗುಡಿ ಓಣಿಯ ನಿವಾಸಿ ವಿಷ್ಣು ಜಾಧವ ಹಾಗೂ ಚೈತ್ರಾ ಜಾಧವ ಅವರ ಪುತ್ರಿ ವೈಷ್ಣವಿ (12) ಮೃತಪಟ್ಟಿದ್ದಾರೆ. ವೈಷ್ಣವಿ ಧಾರವಾಡದ ಪ್ಜೆಂಟೇಶನ್ ಶಾಲೆಯ ೭ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಅವರು ಡೆಂಗ್ಯೂ ಜ್ವರದಿಂದ ಸೋಮವಾರ (ನ13) ರಾತ್ರಿ ಮೃತಪಟ್ಟಿದ್ದಾಳೆ.

ಹಲವು ಖಾಸಗಿ ಆಸ್ಪತ್ರೆಗಳನ್ನು ಸುತ್ತಾಡಿದ ಬಳಿಕ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಖಾಸಗಿ ವೈದ್ಯರ ಪ್ರತಿಭಟನೆ ಹಿನ್ನೆಲೆ ಚಿಕಿತ್ಸೆ ಸಿಗದೆ ಚಿಕ್ಕೋಡಿಯ ಬಾಲಕಿಯೊಬ್ಬಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಕಲ್ಲವ್ವ ಶ್ರೀಶೈಲ್ ಅಂಬಿ(೧೨) ಮೃತ ಬಾಲಕಿ.
ರಕ್ತವಾಂತಿ ರೋಗದಿಂದ ಬಳಲುತ್ತಿದ್ದ ಬಾಲಕಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಅಥಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಬಾಲಕಿ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾಳೆ.
ವೈದ್ಯರ ಮುಷ್ಕರದಿಂದ ಈಗಾಗಲೇನಾಲ್ಕು ಜೀವಗಳು ಬಲಿಯಾಗಿವೆ. ಹಾಸನದಲ್ಲಿ ಇಂದು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಗು ಸಾವನ್ನಪ್ಪಿದೆ . ಸಕಾಲಕ್ಕೆ ಚಿಕಿತ್ಸೆ ದೊರೆಯದ ಹಿನ್ನೆಲೆಯಲ್ಲಿ ಪಿಡಿಒ ಮೃತಪಟ್ಟಿದ್ದಾರೆ. ಗಂಗಾವತಿ ತಾಲೂಕಿನ ಮುಕ್ಕುಂಪಿ ಗ್ರಾಮದಲ್ಲಿ ಪಿಡಿಒ ಗ್ಯಾನಪ್ಪ ಬಡ್ನಾಳ (56) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Private doctors strike claim two life

ಕೊಪ್ಪಳ ತಾಲೂಕಿನ ವನಬಳ್ಳಾರಿ ಗ್ರಾಮಪಂಚಾಯತ್ ನ ಪಿಡಿಒ ಆಗಿದ್ದ ಗ್ಯಾನಪ್ಪ ಅವರಿಗೆ ಬೆಳಗಿನ ವೇಳೆ ಹೃದಯಾಘಾತವಾಗಿದೆ. ಗಂಗಾವತಿಯ ಖಾಸಗಿ ಆಸ್ಪತ್ರೆ ಬಾಗಿಲು ಮುಚ್ಚಿ ವೈದ್ಯರು ಮುಷ್ಕರಕ್ಕೆ ತೆರಳಿದ್ದರು. ಇದರಿಂದಾಗಿ ಪಿಡಿಒಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ. ಸಾರ್ವಜನಿಕರು ಇವರಿಬ್ಬರ ಮುಸುಕಿನ ಆಟದಲ್ಲಿ ನಮ್ಮನ್ನು ಯಾಕೆ ಹೊಣೆ ಮಾಡುತ್ತಿದ್ದೀರ ಎಂದು ಬೇಸರ ವ್ಯಕ್ತಪಡಿಸಿದರು.

ಸೋಮವಾರ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಹೊರ ರೋಗಿಗಳು ಪರದಾಡಿದ್ದರು. ಆದರೆ ಮಂಗಳವಾರ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಂದೊಮ್ಮೆ ಬೆಳಗಾವಿಯಲ್ಲಿ ಧರಣಿಯಲ್ಲಿ ನಿರತರಾಗಿರುವ ವೈದ್ಯರು ಚಿಕಿತ್ಸೆ ನೀಡದಂತೆ ಸೂಚಿಸಿದರೆ ತಕ್ಷಣವೇ ಚಿಕಿತ್ಸೆ ನೀಡುವುದನ್ನು ನಿಲ್ಲಿಸುತ್ತೇವೆ ಎಂದು ವೈದ್ಯರು ತಿಳಿಸಿದರು.

ಸಚಿವ ಸ್ಥಾನ ತೊರೆಯುವ ಬೆದರಿಕೆ ಹಾಕಿದ ರಮೇಶ್ ಕುಮಾರ್?

ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ರಾಜಿನಾಮೆ ನೀಡಬೇಕು ಅಥವಾ ಸಮಸ್ಯೆಗೊಂದು ಪರಿಹಾರ ಸೂಚಿಸಬೇಕು ಇವೆರಡೂ ಮಾಡದಿದ್ದಲ್ಲಿ ಧರಣಿ ಮುಂದುವರೆಯುತ್ತದೆ. ನಿನ್ನೆ ಮುಖ್ಯಮಂತ್ರಿಯವರು ಮನವಿ ಮಾಡಿಕೊಂಡ ಕಾರಣ30 ಸಾವಿರ ವೈದ್ಯರ ಪೈಕಿ 25 ಸಾವಿರ ವೈದ್ಯರನ್ನು ಹಿಂದಕ್ಕೆ ಕಳುಹಿಸಿದ್ದೇವೆ. ಇದು ಬೆದರಿಕೆಯಲ್ಲ ಸಚಿವ ರಮೇಶ್ ಕುಮಾರ್ ಅವರು ಬಿಲ್ ಪಾಸ್ ಮಾಡಿದ್ದೇ ಆದರೆ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳುತ್ತೇವೆ ಎಂದು ಕೆಪಿಎಂಇ ಅಧ್ಯಕ್ಷ ಡಾ. ಎಚ್.ಎನ್. ರಾಘವೇಂದ್ರ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Private doctors are no indefinite strike from yesterday. State Government and Doctor association talk failed. Today two more people lost their life because og unavailability of timely treatment beacuse of the strike.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ