ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯುತ್ ಖರೀದಿ ಹಗರಣದ ವರದಿ ಮಂಡನೆ, ಶಿಫಾರಸುಗಳು

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ನವೆಂಬರ್ 21 : ವಿದ್ಯುತ್ ಖರೀದಿ ಹಗರಣದ ಜಂಟಿ ಸದನ ಸಮಿತಿ ವರದಿಯನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಲಾಗಿದೆ. ಶೋಭಾ ಕರಂದ್ಲಾಜೆ ಅವರು ಹೆಚ್ಚಿನ ದರಕ್ಕೆ ವಿದ್ಯುತ್ ಖರೀದಿ ಮಾಡಿದ್ದಾರೆ ಎಂದು ವರದಿ ಹೇಳಿದೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಸಂಜೆ ವರದಿ ಮಂಡನೆ ಮಾಡಿದ್ದಾರೆ. ಮೊದಲು ಪ್ರತಿ ಯೂನಿಟ್‌ಗೆ ದರ ಹೆಚ್ಚು ಎಂದು ಟೆಂಡರ್ ರದ್ದು ಮಾಡಲಾಗಿತ್ತು. ನಂತರ ಅದೇ ಕಂಪನಿಯಿಂದ ಹೆಚ್ಚು ದರ ಕೊಟ್ಟು ವಿದ್ಯುತ್ ಖರೀದಿ ಮಾಡಲಾಗಿದೆ ಎಂದು ವರದಿ ಹೇಳಿದೆ.

dk shivakumar

ಸದನ ಸಮಿತಿ ವರದಿಯ ಪ್ರಕಾರ 2011ರಲ್ಲಿ ಸಚಿವ ಸಂಪುಟ ಸಭೆಯಲ್ಲಿ ಟೆಂಡರ್ ರದ್ದುಗೊಳಿಸಲಾಗಿತ್ತು. ಬಳಿಕ ಅದೇ ಕಂಪನಿಯ ಮೂಲಕ ಹೆಚ್ಚು ದರ ನೀಡಿ ವಿದ್ಯುತ್ ಖರೀದಿ ಮಾಡಲಾಗಿದೆ. ಜೆಎಸ್‌ಡಬ್ಯ್ಲೂ ಎನರ್ಜಿ ಲಿಮಿಟೆಡ್‌ ಗೆ ಟೆಂಡರ್ ನೀಡಿ 12,038 ಯೂನಿಟ್ ವಿದ್ಯುತ್ ಖರೀದಿ ಮಾಡಲಾಗಿದೆ.

1046 ಕೋಟಿ ಹೆಚ್ಚಿನ ದರವನ್ನು ನೀಡಿ ವಿದ್ಯುತ್ ಖರೀದಿ ಮಾಡಲಾಗಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ.

ಶಿಫಾರಸುಗಳು

* ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿ ವಿದ್ಯುತ್ ಖರೀದಿ ಮಾಡಿರುವುದು ಸಂಶಯಕ್ಕೆ ಕಾರಣವಾಗಿದೆ

* ವಿದ್ಯುತ್ ಖರೀದಿ ಬಗ್ಗೆ ಸೂಕ್ತ ಸಂಸ್ಥೆಯಿಂದ ತನಿಖೆ ನಡೆಯಬೇಕು

* ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದವರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕು

English summary
In a Belagavi winter session Legislative Committee report on power purchase scam tabled on November 21, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X