ಸೆಲ್ಫಿ ತೆಗೆಯಲು ಬಂದ ವಿದ್ಯಾರ್ಥಿಗೆ 'ಪವರ್' ಸಚಿವರ ಪೆಟ್ಟು!

Posted By:
Subscribe to Oneindia Kannada
   ಸೆಲ್ಫಿ ತೆಗೆಯಲು ಬಂದ ವಿದ್ಯಾರ್ಥಿಗೆ ಕಪಾಳ ಮೋಕ್ಷ ಮಾಡಿದ ಡಿ ಕೆ ಶಿವಕುಮಾರ್ | Oneindia Kannada

   ಬೆಳಗಾವಿ, ನವೆಂಬರ್ 20: ಕರ್ನಾಟಕದ 'ಪವರ್ ಫುಲ್ ' ಸಚಿವ ಡಿಕೆ ಶಿವಕುಮಾರ್ ಅವರು ಒಂದು ಸೆಲ್ಫಿ ತೆಗೆಸಿಕೊಳ್ಳುವ ಆಸೆ ಹೊತ್ತ ವಿದ್ಯಾರ್ಥಿಯೊಬ್ಬರಿಗೆ ಪೆಟ್ಟುಕೊಟ್ಟ ಕಾರಣ ಬಹಿರಂಗವಾಗಿದೆ. ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಿದ್ದ ಡಿಕೆ ಶಿವಕುಮಾರ್ ಅವರು ಸೆಲ್ಫಿ ತೆಗೆಯಲು ಯತ್ನಿಸಿದ ವಿದ್ಯಾರ್ಥಿಗೆ ಪೆಟ್ಟುಕೊಟ್ಟಿರುವ ಘಟನೆ ನಡೆದಿದೆ.

   'ನನ್ನನ್ನು ಕೆಲವರು ಹಿಂಬಾಲಿಸುತ್ತಿದ್ದಾರೆ, ಫೋನ್ ಟ್ಯಾಪ್ ಆಗಿದೆ'

   ಬೆಳಗಾವಿಯ ಕಾಲೇಜೊಂದರಲ್ಲಿ ಮಕ್ಕಳ ಹಕ್ಕುಗಳ ಸಂಬಂಧ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್ ಅವರು ಬಂದಿದ್ದರು. ಕಾರ್ಯಕ್ರಮ ಮುಗಿಸಿ ಹೊರಡುವಾಗ ಎದುರಿಗೆ ಮಾಧ್ಯಮ ಪ್ರತಿನಿಧಿಗಳು ಸಿಕ್ಕಿದ್ದಾರೆ.

   Power Minister DK Shivakumar loses cool, slaps student over a ‘selfie’

   ಡಿ.ಕೆ. ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಧೈರ್ಯ ಮಾಡಿ, ಡಿಕೆಶಿ ಅವರ ಹಿಂಬದಿಯಲ್ಲಿ ಮಂದಹಾಸ ಬೀರುತ್ತಾ ನಿಂತಿದ್ದ ಕೃಪಾ ಆಳ್ವಾ ಅವರ ಜತೆ ಒಂದು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ.

   ಡಿಕೆಶಿ ನನ್ನ ವಿರುದ್ದ ಸ್ಪರ್ಧಿಸಲಿ :ಸಿ.ಪಿ.ಯೋಗೇಶ್ವರ್ ಸವಾಲು

   ಸಚಿವರ ಹಿಂಭಾಗದಲ್ಲಿ ಗದ್ದಲವಾಗುತ್ತಿದ್ದಂತೆ ಹಿಂತಿರುಗಿ ನೋಡಿದ ಡಿಕೆಶಿ, ಕೃಪಾ ಅವರ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಕೈಗೆ ಪೆಟ್ಟುಕೊಟ್ಟಿದ್ದಾರೆ. ಇದನ್ನು ನೋಡುತ್ತಾ ನಿಂತಿದ್ದ ಕೃಪಾ ಆಳ್ವಾ ಅವರು ನಸುನಕ್ಕಿದ್ದಾರೆ. ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವಾ ಅವರು ಈ ಕಾರ್ಯಕ್ರಮದ ಆಯೋಜನೆಯ ಹೊಣೆ ಹೊತ್ತಿದ್ದರು.

   ಡಿಕೆ ಶಿವಕುಮಾರ್ ಅವರು ಪದ್ಮಾವತಿ ಚಿತ್ರ, ದೀಪಿಕಾ ಪಡುಕೋಣೆಗೆ ಬೆಂಬಲದ ಬಗ್ಗೆ ಮಾತನಾಡಿದರು. ಆದರೆ, ಕೃಪಾ ಅವರ ಜತೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ವಿದ್ಯಾರ್ಥಿಯಿಂದ ತಮ್ಮ ಏಕಾಗ್ರತೆ ಭಂಗವಾಗಿದ್ದಕ್ಕೋ ಏನೋ ಗರಂ ಆಗಿ, ವಿದ್ಯಾರ್ಥಿಗೆ ಹೊಡೆದಿದ್ದಾರೆ.

   ವಿಶ್ವ ಮಕ್ಕಳ ದಿನದಂದು ಪಾಲಕರಿಗೆ ಒಂದು ಕಿವಿಮಾತು

   ಕೆಳಗೆ ಬಿದ್ದ ಮೊಬೈಲ್ ಫೋನ್ ಹೆಕ್ಕಿಕೊಂಡು ವಿದ್ಯಾರ್ಥಿ ಅಲ್ಲಿಂದ ಕಾಲಿಗೆ ಬುದ್ಧಿ ಹೇಳಿದ್ದಾನೆ. ಆದರೆ, ಈ ಘಟನೆ ವಿಡಿಯೋ ರೂಪದಲ್ಲಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Karnataka minister DK Shivakumar lost his cool and allegedly slapped a student who was only trying to take a ‘selfie’ with him.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ