ಅರೆನಗ್ನ ಚಿತ್ರ ವೀಕ್ಷಣೆ: ಸಚಿವ ತನ್ವೀರ್ ಸೇಠ್ ಗೆ ಕ್ಲೀನ್ ಚಿಟ್

Posted By:
Subscribe to Oneindia Kannada

ಸುವರ್ಣ ವಿಧಾನಸೌಧ(ಬೆಳಗಾವಿ), ನವೆಂಬರ್ 25: ರಾಯಚೂರಿನಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಸಂದರ್ಭದಲ್ಲಿ ಅರೆನಗ್ನ ಚಿತ್ರ ವೀಕ್ಷಿಸಿದ ಆರೋಪ ಹೊತ್ತಿದ್ದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಸಿಐಡಿ ಸೈಬರ್ ವಿಭಾಗದ ತಂಡ ಕ್ಲೀನ್ ಚಿಟ್ ನೀಡಿದೆ.

ಸಿಐಡಿ ಸೈಬರ್ ದಳದಿಂದ ವಿಚಾರಣಾ ವರದಿಯನ್ನು ಸುವರ್ಣ ವಿಧಾನಸೌಧದಲ್ಲಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಈ ವರದಿ ಪ್ರಕಾರ ತನ್ವೀರ್ ಸೇಠ್ ಗೆ ಫೋಟೋ ನೋಡೋ ಉದ್ದೇಶ ಇರಲಿಲ್ಲ, ವಾಟ್ಸಾಪ್ ನಲ್ಲಿ ಬಂದ ಚಿತ್ರಗಳನ್ನು ಸ್ಕ್ರೋಲ್ ಮಾಡಿ ನೋಡುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ.

Porngate: Minister Tanveer Sait gets clean chit from CID

ಸಚಿವ ತನ್ವೀರ್ ಸೇಠ್ ಅವರಿಗೆ ಅರೆನಗ್ನ ಫೋಟೋ ಕಳಿಸಿದವರನ್ನು ಸಿಐಡಿ ವಿಚಾರಣೆಗೆ ಒಳಪಡಿಸಿತ್ತು. ಆ ಗ್ರೂಪಿನಲ್ಲಿ ಇಂಥ ಆಶ್ಲೀಲ ಸಂದೇಶಗಳು ಹಲವು ಬಾರಿ ಕಳಿಸಿದ್ದೆ ಎಂದು ಆ ವ್ಯಕ್ತಿ ಒಪ್ಪಿಕೊಂಡಿದ್ದಾನೆ.

ಜೊತೆಗೆ ತನ್ವಿರ್ ಸೇಠ್ ಅಶ್ಲಿಲ ಚಿತ್ರಗಳು ಬಂದಾಗ ಮಾತ್ರ ಮೊಬೈಲ್ ಬಳಸಿಲ್ಲ, ಫೋಟೊಸ್ ಬರೋಕು ಮೊದಲು ಮೊಬೈಲ್‍ನಲ್ಲಿ ಆಕ್ಟೀವ್ ಆಗಿದ್ರು. ಅಲ್ಲದೇ, ಫೋಟೋಗಳನ್ನ ಸ್ಕ್ರಾಲ್ ಮಾಡಿ ಮುಂದೆ ಹೋಗಿರೋದ್ರಿಂದ ತನ್ವೀರ್ ಸೇಠ್‍ಗೆ ಫೋಟೋ ನೋಡೋ ಉದ್ದೇಶ ಇರ್ಲಿಲ್ಲ ಎಂಬುವುದಾಗಿ ಸಿಐಡಿ ನಿರ್ಧರಿಸಿದೆ.

ನವೆಂಬರ್ 10 ರಂದು ರಾಯಚೂರಿನಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಸಚಿವ ತನ್ವೀರ್ ಸೇಠ್ ಅಶ್ಲೀಲ ಚಿತ್ರ ವೀಕ್ಷಿಸಿದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಬಳಿಕ ತಾನು ಉದ್ದೇಶಪೂರ್ವಕವಾಗಿ ನೋಡಿಲ್ಲ. ಟಿಪ್ಪು ಜಯಂತಿ ವಿರೋಧಿಸಿ ಗಲಾಟೆ, ಬೆಳವಣಿಗೆಗಳ ಬಗ್ಗೆ ವಾಟ್ಸಾಪ್ ಬಂದ ಸಂದೇಶಗಳನ್ನು ನೋಡುತ್ತಿದ್ದೆ ಎಂದು ಸೇಠ್ ಸ್ಪಷ್ಟನೆ ನೀಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Criminal investigation department (CID) , to which the controversy relating to minister, Tanveer Sait viewing indecent photograph on cell phone during Tipu Jayanti celebrations was referred to, has officially submitted the report to the government.
Please Wait while comments are loading...