ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಅತಿಕ್ರಮಣ ಒಕ್ಕಲೆಬ್ಬಿಸುವಿಕೆ ಇಲ್ಲ: ಕೋಳಿವಾಡ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ನವೆಂಬರ್ 22 : ಸರ್ಕಾರಿ ಅತಿಕ್ರಮಣ ಒಕ್ಕಲೆಬ್ಬಿಸುವಿಕೆ ಇಲ್ಲ. ಸರ್ಕಾರ ಮಾಡಿರುವ ಒತ್ತುವರಿಗಳು ಸಾರ್ವಜನಿಕರ ಅನುಕೂಲಕ್ಕಾಗಿ ಎಂದು ವಿಧಾನಸಭಾ ಅಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಬೆಳಗಾವಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟ ಪಡಿಸಿದರು.

ಬೆಂಗಳೂರು : 4533 ಎಕರೆ ಕರೆ ಭೂಪ್ರದೇಶ ಒತ್ತುವರಿಬೆಂಗಳೂರು : 4533 ಎಕರೆ ಕರೆ ಭೂಪ್ರದೇಶ ಒತ್ತುವರಿ

ಸರ್ಕಾರ ಮಾಡಿರುವ ಒತ್ತುವರಿಗಳು ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಮಾಡಲಾಗಿದೆ. ಆದ್ದರಿಂದ ಸರ್ಕಾರಿ ಅತಿಕ್ರಮಣವನ್ನು ತೆರವು ಮಾಡುವುದಿಲ್ಲ. ಬಿಡಿಎ, ಬಿಬಿಎಂಪಿ ವಿತರಿಸಿದ ಕೆರೆ ಭೂಮಿಯಿಂದ ಕೂಡ ಒಕ್ಕಲೆಬ್ಬಿಸುವುದಿಲ್ಲ. ಕೆರೆ ಪ್ರದೇಶದಲ್ಲಿರುವ ಸ್ಲಂ ಸ್ಥಳಾಂತರಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದರು.

Plots alloted by Government authorities cannot be asked to vacate: Panel report

ಖಾಸಗಿ ಬಿಲ್ಡರ್ಸ್, ಫ್ಲ್ಯಾಟ್ ಹಂಚಿಕೆ ಕರೆಯಲಾಗಿದೆ, ಪುನಶ್ಚೇತನ ಮಾಡಲು ಅವಕಾಶವಿದ್ದರೆ ಮಾತ್ರ ತೆರವು ಮಾಡಲಾಗುತ್ತದೆ. ಕೆರೆ ಪುನಶ್ಚೇತನ ಸಾಧ್ಯವಿಲ್ಲದ ಬಿಲ್ಡರ್ ಒತ್ತುವರಿಯನ್ನು ಸಕ್ರಮಗೊಳಿಸುವುದು ಮತ್ತು ಕೆರೆಯನ್ನು ನಿರ್ಜೀವ ಎಂದು ಘೋಷಿಸಲಾಗುತ್ತದೆ.

ಖಾಸಗಿ, ವಾಣಿಜ್ಯ ಕಟ್ಟಡಗಳು ನಿರ್ಮಾಣಗೊಂಡಿದ್ದರೆ ತೆರವುಗೊಳಿಸಲಾಗುತ್ತದೆ. ಪುನಶ್ಚೇತನ ಸಾಧ್ಯವಿರುವ ಕೆರೆಯನ್ನು ಪುನಶ್ಚೇತನಗೊಳಿಸಬೇಕು. ಪುನಶ್ಚೇತನ ಸಾಧ್ಯವಿಲ್ಲದ ಕೆರೆಯ ಮೇಲೆ ನಿರ್ಮಿಸಿರೋ ವಾಣಿಜ್ಯ ಕಟ್ಟಡಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಬೇಕು ಇದು ಕೆರೆಯ ಅಧ್ಯಯನ ಸಮಿತಿಯ ಶಿಫಾರಸ್ಸಾಗಿದೆ ಎಂದು ಹೇಳಿದರು.

ರಾಜಕಾಲುವೆ ಒತ್ತುವರಿ ಮಾಡಿರುವ ಸಂಸ್ಥೆಗಳ ಪಟ್ಟಿ ಬಹಿರಂಗರಾಜಕಾಲುವೆ ಒತ್ತುವರಿ ಮಾಡಿರುವ ಸಂಸ್ಥೆಗಳ ಪಟ್ಟಿ ಬಹಿರಂಗ

ಕೆರೆಯಲ್ಲಿ ಕಟ್ಟಿರುವ ದೇವಸ್ಥಾನವು ಮುಜರಾಯಿ ಇಲಾಖೆಗೆ ಒಳಪಡುತ್ತದೆ. ಕೆರೆ ಪುನಶ್ಚೇತನ ಸಾಧ್ಯವಿದ್ದರೆ ದೇವಸ್ಥಾನವನ್ನು ಕೂಡ ತೆರವುಗೊಳಿಸಲಾಗುತ್ತದೆ. ನಿರ್ಜೀವ ಕೆರೆ ಎಂದು ಘೋಷಿಸುವ ಅಧಿಕಾರ ರಾಜ್ಯದ ವಿಧಾನಮಂಡಲ ನಿರ್ಧಾರ ತೆಗೆದುಕೊಳ್ಳಬೇಕು.

ಈವರೆಗೂ ನಿರ್ಜೀವ ಕೆರೆ ಎನ್ನುವುದನ್ನು ಸಚಿವ ಸಂಪುಟ ನಿರ್ಧರಿಸುತ್ತಿತ್ತು. ರಾಜಕಾಲುವೆಯನ್ನು 2083 ಜನ ಒತ್ತುವರಿ ಮಾಡಿದ್ದಾರೆ. ರಾಜಕಾಲುವೆ ಒತ್ತುವರಿ ತೆರವಿಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಬಫರ್ ಝೋನ್ ಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಎನ್ನುವುದು ಕೆರೆ ಅಧ್ಯಯನ ಸಮಿತಿಯ ಶಿಪಾರಸ್ಸು ಎಂದರು.

ಕೆರೆ ಒತ್ತುವರಿಗೆ ಅಧಿಕಾರಿಗಳು, ಬಿಲ್ಡರ್ಸ್ ಗಳು ಕಾರಣ, ಇದರ ಬಗ್ಗೆ ತನಿಖೆಗೆ ನ್ಯಾಯಾಂಗ ವಿಚಾರಣಾ ಸಮಿತಿ ನೇಮಿಸಬೇಕು, ಅಧಿಕಾರಿಗಳು, ಬಿಲ್ಡರ್ಸ್ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳನ್ನು ಪತ್ತೆ ಹಚ್ಚಿ ಜೈಲಿಗೆ ಕಳುಹಿಸಬೇಕು.

ಅಧಿಕಾರಿಗಳು ಮತ್ತು ಬಿಲ್ಡರ್ಸ್ ಗಳ ಸ್ಥಿರ ಮತ್ತು ಚರಾಸ್ಥಿಯನ್ನು ಮುಟ್ಟುಗೋಲು ಹಾಕಬೇಕು, ಕೆರೆ ಅಧ್ಯಯನ ಸದನ ಸಮಿತಿ ಸರ್ಕಾರಕ್ಕೆ ಶಿಪಾರಸ್ಸು ಮಾಡಿದೆ ಎಂದು ಸಮಿತಿ ಕೆ.ಬಿ. ಕೋಳಿವಾಡ ಹೇಳಿದ್ದಾರೆ.

English summary
Karnataka assembly speaker KB Koliwad said that the panel constituted by the house has recommend that plots alloted by Government authorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X