ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಶುರುವಾಯ್ತು ಲಕ್ಷ್ಮಿ ಹೆಬ್ಬಾಳ್ಕರ್ ಆಟ, PLD ಬ್ಯಾಂಕ್ ಮ್ಯಾನೇಜರ್ ಅಮಾನತು!

|
Google Oneindia Kannada News

Recommended Video

ಲಕ್ಷ್ಮಿ ಹೆಬ್ಬಾಳ್ಕರ್ ರಾಜಕೀಯ ಆಟ ಮತ್ತೆ ಶುರುವಾಯ್ತು | Oneindia Kannada

ಬೆಳಗಾವಿ, ಅಕ್ಟೋಬರ್ 10: ರೈತರ ಖಾತೆಗೆ ಜಮಾ ಮಾಡಬೇಕಿದ್ದ ಹಣವನ್ನು ಸ್ವಂತ ಉಪಯೋಗಕ್ಕೆ ಬಳಸಿಕೊಂಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಬೆಳಗಾವಿಯ ಪಿಎಲ್ ಡಿ ಬ್ಯಾಂಕ್ ಮ್ಯಾನೇಜರ್ ಎಸ್ ಟಿ ಕುಲಕರ್ಣಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪ್ರಭಾವವಿದ್ದಿದ್ದರಿಂದಲೇ ಒಂದೇ ದಿನದಲ್ಲಿ ಆದೇಶ ನೀಡಿ ಅವರನ್ನು ಅಮಾನತುಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ಪಿಎಲ್ ಡಿ ಬ್ಯಾಂಕ್ ವಿಚಾರದಲ್ಲಿ ಮತ್ತೊಮ್ಮೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವೆ ಭಿನ್ನಮತ ಸ್ಫೋಟವಾಗುವ ಸಾಧ್ಯತೆ ಇದೆ.

ಖಂಡ್ರೆ ಸಂಧಾನ ಯಶಸ್ವಿ: ಲಕ್ಷ್ಮಿ ಬಳಗಕ್ಕೆ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಅವಿರೋಧ ಗೆಲುವು ಖಂಡ್ರೆ ಸಂಧಾನ ಯಶಸ್ವಿ: ಲಕ್ಷ್ಮಿ ಬಳಗಕ್ಕೆ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಅವಿರೋಧ ಗೆಲುವು

ಅಕ್ಟೋಬರ್ 5 ರಂದೇ ಕುಲಕರ್ಣಿ ಅವರನ್ನು ಅಮಾನತು ಮಾಡಿ, ಆದೇಶ ಹೊರಡಿಸಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?

ಏನಿದು ಪ್ರಕರಣ?

ಪಿಎಲ್ ಡಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಎಸ್ ಟಿ ಕುಲಕರ್ಣಿ ಅವರು ರೈತರ ಹಣವನ್ನು ರೈತರ ಖಾತೆಗೆ ಹಾಕದೆ ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳುತ್ತಿದ್ದರು ಎಂಬುದು ಆರೋಪ. ಇದುವರೆಗೂ 12 ಲಕ್ಷ ರೂಪಾಯಿಗಳನ್ನು ಅವರು ಸ್ವಂತ ಖರ್ಚಿಗೆ ಬಳಸಿಕೊಂಡಿದ್ದಾರೆ. ಅಲ್ಲದೆ ನಕಲಿ ದಾಖಲೆಗಳನ್ನೂ ಸೃಷ್ಟಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬೆಳಗಾವಿ ರಾಜಕೀಯ: ಸಂಧಾನದ ಬಳಿಕವೂ ಆರಿಲ್ಲ ಲಕ್ಷ್ಮಿ ಹೆಬ್ಬಾಳ್ಕರ್‌ ಸಿಟ್ಟು ಬೆಳಗಾವಿ ರಾಜಕೀಯ: ಸಂಧಾನದ ಬಳಿಕವೂ ಆರಿಲ್ಲ ಲಕ್ಷ್ಮಿ ಹೆಬ್ಬಾಳ್ಕರ್‌ ಸಿಟ್ಟು

ದೂರು ನೀಡಿದ್ದು ಯಾರು?

ದೂರು ನೀಡಿದ್ದು ಯಾರು?

ಎಸ್ ಟಿ ಕುಲಕರ್ಣಿ ಅವರ ವಿರುದ್ಧ ದೂರು ನೀಡಿದ್ದು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬೆಂಬಲಿಗರಾದ ಮಹಾಂತೇಶ್ ಎಂಬುವವರು. ಮಹಾಂತೇಶ್, ಹೆಬ್ಬಾಳ್ಕರ್ ಅವರ ಬಣದಲ್ಲಿ ಗುರುತಿಸಿಕೊಂಡಿರುವುದರಿಂದ ಇದು ಕುಲಕರ್ಣಿ ಅವರ ಮೇಲೆ ಬೇಕೆಂದೇ ಮಾಡಿದ ಆರೋಪ ಎನ್ನಲಾಗುತ್ತಿದೆ. ಮಹಾಂತೇಶ್ ದೂರಿನನ್ವಯ ನೀಡಿದ ದೂರಿನನ್ವಯ ಸಾಮಾನ್ಯ ಶ್ರೇಣಿ ಸಮಿತಿ ಕಾರ್ಯದರ್ಶಿ ದಿವಾಕರ್ ಅವರು ಕುಲಕರ್ಣಿಯವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕುಲಕರ್ಣಿಯವರು ಜಾರಕಿಹೊಳಿ ಬಣದವರು

ಕುಲಕರ್ಣಿಯವರು ಜಾರಕಿಹೊಳಿ ಬಣದವರು

ಅಷ್ಟಕ್ಕೂ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಎಸ್ ಟಿ ಕುಲಕರ್ಣಿ ಅವರ ಮೇಲೇಕೆ ಅಸಮಾಧಾನ? ಏಕೆಂದರೆ ಕುಲಕರ್ಣಿ ಅವರು ಜಾರಕಿಹೊಳಿ ಸಹೋದರರ ಬಣದಲ್ಲಿ ಗುರುತಿಸಿಕೊಂಡವರು. ಆ ಕಾರಣಕ್ಕೆ ಕುಲಕರ್ಣಿ ಅವರನ್ನು ಅಮಾನತು ಮಾಡಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಕಿತ್ತಾಟ ಬಟಾಬಯಲಾಗಿತ್ತು!

ಕಿತ್ತಾಟ ಬಟಾಬಯಲಾಗಿತ್ತು!

ಸೆಪ್ಟೆಂಬರ್ 7 ರಂದು ನಡೆದಿದ್ದ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಸಮಯದಲ್ಲಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ನಡುವಿನ ಕಿತ್ತಾಟ ಬಟಾಬಯಲಾಗಿತ್ತು. ಮೈತ್ರಿ ಸರ್ಕಾರಕ್ಕೇ ಕಂಟಕ ತರುವ ಮಟ್ಟಿಗೆ ಈ ಎರಡು ಬಣಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು. ಕೊನೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಬಣದ ಮಹದೇವ್ ಪಟೇಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

English summary
PLD bank issue in Belagavi, Lakshmi Hebbalkar suspends bank manager who was accused of using farmers' money for his own use.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X