ಕಾಂಗ್ರೆಸ್ ಏನೇ ಭಾಗ್ಯ ನೀಡಿದರೂ ಗೆಲ್ಲೋದು ಬಿಜೆಪಿಯೇ: ಸಂಜಯ್ ಪಾಟೀಲ್

Posted By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ನವೆಂಬರ್ 20: ಬೆಳಗಾವಿಯ ಹಿರೆಬಾಗೇವಾಡಿಯಲ್ಲಿ ನಡೆಯುತ್ತಿರುವ ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಪರೋಕ್ಷವಾಗಿ ಶಾಸಕ ಸಂಜಯ್ ಪಾಟೀಲ್ ವಾಗ್ದಾಳಿ ನಡೆಸಿದರು.

ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ನಾಯಕರ ಎಡವಟ್ಟುಗಳು

"ಕಳೆದ ನಾಲ್ಕೂವರೆ ವರ್ಷದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗದಂತೆ ವ್ಯವಸ್ಥಿತವಾಗಿ ಕಾಂಗ್ರೆಸ್ ಸರ್ಕಾರ ನೋಡಿಕೊಂಡಿದೆ. ನನ್ನ ಕ್ಷೇತ್ರದ ಜನರಿಗೆ ನಿನ್ನೆ ಪ್ರವಾಸದ ಆಮೀಷವನ್ನ ಒಡ್ಡಿದ್ದಾರೆ. ಇಂಥ ಆಮಿಷ ಒಡ್ಡುವವರು, ವೋಟಿಗಾಗಿ ಸೀರೆ ಕೊಡುವವರು ಕಳ್ಳರು. ಕಾಂಗ್ರೆಸ್ ಏನೇ ಭಾಗ್ಯಗಳನ್ನು ನೀಡಿದರೂ, ಬಿಜೆಪಿ ಕಾರ್ಯಕರ್ತರು ನನ್ನನ್ನು ಗೆಲ್ಲಿಸುತ್ತಾರೆ" ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ

People will always support BJP: Sanjay Patil in Belagavi

"ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಚಾರ ವಿಚಾರ ಸಂಸ್ಕೃತ ಗೊತ್ತಿಲ್ಲ, ಮೀನು ತಿಂದು ಧರ್ಮಸ್ಥಳಕ್ಕೆ ಹೊಗುತ್ತಾರೆ! ಹಣ ನೀಡಿ ಸಮಾವೇಶಕ್ಕೆ ಕರೆದು ತರುವ ಪ್ರವೃತ್ತಿ ಕಾಂಗ್ರೆಸ್ ದ. ಆದರೆ ಬಿಜೆಪಿ, ಜನರನ್ನು ಹಣ ನೀಡಿ ಸಮಾವೇಶಕ್ಕೆ ಕರೆತಂದಿಲ್ಲ" ಎಂದರು.

People will always support BJP: Sanjay Patil in Belagavi

ನವೆಂಬರ್ 2 ರಿಂದ ಆರಂಭವಾಗಿರುವ ಬಿಜೆಪಿಯ ಪರಿವರ್ತನಾ ಯಾತ್ರೆ 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೂ ತೆರಳಲಿದ್ದು, ಇಂದು (ನ.20) ಬೆಳಗಾವಿಯಲ್ಲಿ ಪ್ರಚಾರ ಸಭೆ ನಡೆಸಲಿದೆ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಗಣ್ಯರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Eventhough Congress government of Karnataka releases many schemes to attract people in elections eve, people will support BJP only" Belagavi MLA Sanjay Patil said. He was talking about Karnataka assembly elections 2018, in BJP parivartana rally in belagavi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ