ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಗೂಬೆಗೂ ಬಂತು ಕೇಡುಗಾಲ!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವನ್ನೂರು ಗ್ರಾಮದ ಚಂದ್ರಪ್ಪ ಮಲ್ಲಪ್ಪ ಮಿರ್ಜಿ ಎಂಬುವವರ ಮನೆಯ ಮೇಲೆ ನಿನ್ನೆ (ಮೇ 8) ದಾಳಿ ನಡೆಸಿದ ಜಿಲ್ಲಾ ಅರಣ್ಯ ಪೊಲೀಸ್ ಮೊಬೈಲ್ ಸ್ಕ್ವಾಡ್, ಪಂಜರದಲ್ಲಿದ್ದ ಮೂರು ಮರಿಗೂಬೆಗಳನ್ನು ಪತ್ತೆ ಹಚ್ಚಿ, ವಶ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಮೇ 9: ಗೂಬೆ ಅಂದ್ರೆ ಅಶುಭ ಸೂಚನೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಈ ಗೂಬೆಗೇ ಕೇಡುಗಾಲ ಬಂದರೆ? ಅಂಥ ಘಟನೆ ಬೆಳಗಾವಿಯಲ್ಲಿ ನಡೆಯುತ್ತಿದೆ.

ಬೆಳಗಾವಿಯಲ್ಲಿ ನಡೆಯುತ್ತಿದ್ದ ಗೂಬೆ ಅಕ್ರಮ ಮಾರಾಟಜಾಲವನ್ನು ಭೇದಿಸುವರಲ್ಲಿ ಇಲ್ಲಿನ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವನ್ನೂರು ಗ್ರಾಮದ ಚಂದ್ರಪ್ಪ ಮಲ್ಲಪ್ಪ ಮಿರ್ಜಿ ಎಂಬುವವರ ಮನೆಯ ಮೇಲೆ ನಿನ್ನೆ (ಮೇ 8) ದಾಳಿ ನಡೆಸಿದ ಜಿಲ್ಲಾ ಅರಣ್ಯ ಪೊಲೀಸ್ ಮೊಬೈಲ್ ಸ್ಕ್ವಾಡ್, ಪಂಜರದಲ್ಲಿದ್ದ ಮೂರು ಮರಿಗೂಬೆಗಳನ್ನು ಪತ್ತೆ ಹಚ್ಚಿ, ವಶಪಡಿಸಿಕೊಂದಿದ್ದಾರೆ.[ಬಿಳಿ ಗೂಬೆ ಸಾಕಿದ್ರೆ ನಿಮ್ಮ ಬದುಕು ಬಂಗಾರವಾಗುತ್ತಂತೆ!]

ಚಂದ್ರಪ್ಪ ಮಲ್ಲಪ್ಪ ಮಿರ್ಜಿ ಕಳೆದ ಎರಡು ವರ್ಷಗಳಿಂದ ಗೂಬೆಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ. ಮಾಟ-ಮಂತ್ರ ಮಾಡುವುದಕ್ಕಾಗಿ ಈ ಗೂಬೆಗಳನ್ನು ಬಳಸಲಾಗುತ್ತಿರುವುದರಿಂದ ಇವಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಗೂಬೆಯ ಗಾತ್ರದ ಮೇರೆಗೆ ಅವುಗಳ ಬೆಲೆಯೂ ನಿರ್ಧಾರವಾಗುತ್ತದೆ. ದೊಡ್ಡ ಗೂಬೆಯಾದರೆ ಒಂದು ಗೂಬೆಗೆ 50 ಲಕ್ಷ ರೂ. ವರೆಗೂ ಬೆಲೆಯಿದೆ! [ಅಪಾಯದಲ್ಲಿದ್ದ ಉಲೂಕ ಕಾಪಾಡಿದ ಒನ್ಇಂಡಿಯಾ ಪತ್ರಕರ್ತ]

ಮರಿಗೂಬೆಗಳನ್ನು ಕಾಡಿನಿಂದ ಹಿಡಿದು ತಂದು ಸಾಕುತ್ತಿದ್ದ ಚಂದ್ರಪ್ಪ ಅವು ದೊಡ್ಡದಾದ ಮೇಲೆ ಮಾರಾಟ ಮಾಡುತ್ತಿದ್ದ! ಈತನಿಗೆ ಗೋವಾ ಸೇರಿದಂತೆ ಬೇರೆ ರಾಜ್ಯಗಳೊಂದಿಗೂ ಸಂಪರ್ಕವಿದೆ. ಈ ಗೂಬೆಗಳನ್ನು 3-4 ಲಕ್ಷಕ್ಕೆ ಕೊಂಡುಕೊಳ್ಳುತ್ತಿದ್ದ ಕೆಲ ಸ್ಥಳೀಯರು ನಂತರ ಇದನ್ನು 30-40 ಲಕ್ಷ ರೂ. ಗೆ ಮಾರಾಟ ಮಾಡುತ್ತಿದ್ದರು ಎಂಬ ಆಘಾತಕಾರಿ ವಿಷಯವೂ ಬೆಳಕಿಗೆ ಬಂದಿದೆ.

ಈಗಾಗಲೇ ಅಳಿವಿನಂಚಿನಲ್ಲಿರುವ ಈ ಗೂಬೆಗಳನ್ನು ಹಣದಾಸೆಗೆ ಹಿಡಿದು ಮಾರಾಟ ಮಾಡುತ್ತಿರುವ ಜಾಲವನ್ನು ಭೇದಿಸುವ ಸಲುವಾಗಿ ಚಂದ್ರಪ್ಪ ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

2 ಲಕ್ಷ ರುಪಾಯಿ ಮೌಲ್ಯದ ಒಂದು ಗೂಬೆ ಸಾಗಿಸುತ್ತಿದ್ದ ಮೂವರು ಅಂದರ್ 2 ಲಕ್ಷ ರುಪಾಯಿ ಮೌಲ್ಯದ ಒಂದು ಗೂಬೆ ಸಾಗಿಸುತ್ತಿದ್ದ ಮೂವರು ಅಂದರ್

English summary
The forest department of Belagavi has exposed an owl trafficking racket on May 9th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X