ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಮಶಾನದಲ್ಲಿ ಅಂಬೇಡ್ಕರ್‌ ಭಾವಚಿತ್ರ ಇಡಲು ವಿರೋಧ

By Manjunatha
|
Google Oneindia Kannada News

ಬೆಳಗಾವಿ, ಡಿಸೆಂಬರ್ 04 : ಸ್ಮಶಾನದಲ್ಲಿ ಮೌಢ್ಯವಿರೋಧಿ ದಿನ ಆಚರಿಸಲು ಮುಂದಾಗಿರುವ ಸತೀಶ್ ಜಾರಕಿಹೊಳಿ ಅವರಿಗೆ ಕೆಂಪು ಬಾವುಟ ಎದುರಾಗಿದೆ.

ಮೌಢ್ಯ ವಿರೋಧಿ ಸಂಕಲ್ಪ ದಿನ: ಪೂರ್ವ ಸಿದ್ಧತೆ ಪರಿಶೀಲನೆಮೌಢ್ಯ ವಿರೋಧಿ ಸಂಕಲ್ಪ ದಿನ: ಪೂರ್ವ ಸಿದ್ಧತೆ ಪರಿಶೀಲನೆ

ಅಶುಭ ಎಂದೇ ಪರಿಗಣಿತವಾಗಿರುವ ಸ್ಮಶಾನದಲ್ಲಿ ಮೌಢ್ಯವನ್ನು ವಿರೋಧಿಸುವ ದಿನವನ್ನು ಆಚರಿಸಿ ಉತ್ತಮ ಸಂದೇಶ ನೀಡಬೇಕೆಂದು ಹೊರಟಿರುವ ಸತೀಶ ಜಾರಕಿಹೊಳಿಗೆ ಅಡೆತಡೆ ಎದುರಾಗಿದೆ.

Oppose to put Ambedkar Photo in cemetery

ಕೆಪಿಸಿಸಿ ಮಾಜಿ ಅಧ್ಯಕ್ಷ ಶಂಕರ ಮನವಳ್ಳಿ, ಸತೀಶ ಜಾರಕಿಹೊಳಿ ಅವರ ಈ ನಡೆಯನ್ನು ತೀರ್ವವಾಗಿ ಖಂಡಿಸಿದ್ದು, ಡಾ.ಅಂಬೇಡ್ಕರ್ ಅವರ ಚಿತ್ರವನ್ನು ಸ್ಮಶಾನದಲ್ಲಿ ಇಡಲು ಬಿಡುವುದಿಲ್ಲ, ಅಂಬೇಡ್ಕರ್ ಅವರ ಚಿತ್ರವನ್ನು ಸ್ಮಶಾನದಲ್ಲಿ ಇಡುವ ಮೂಲಕ ಅವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಂಬೇಡ್ಕರ್ ಸಮ್ಮೇಳನ ದಲಿತರ ಜಾಗೃತಿಗೋ, ಚುನಾವಣೆ ತಂತ್ರವೋ?ಅಂಬೇಡ್ಕರ್ ಸಮ್ಮೇಳನ ದಲಿತರ ಜಾಗೃತಿಗೋ, ಚುನಾವಣೆ ತಂತ್ರವೋ?

ಅಂಬೇಡ್ಕರ್ ಪುಣ್ಯತಿ ದಿನವನ್ನ ಸ್ಮಶಾನದಲ್ಲಿ ಊಟ ಮಾಡಿ ಆಚರಿಸುವುದು ಸರಿಯಲ್ಲ. ಕಾಂಗ್ರೆಸ್ ನಾಯಕರು ಅಂಬೇಡ್ಕರ್ ಅವಮಾನ ಮಾಡದಂತೆ ಜಾರಕಿಹೊಳಿಗೆ ತಿಳಿ ಹೇಳಬೇಕು ಎಂದು ಮನವಿ ಮಾಡಿದರು.

ಜಾರಕಿಹೊಳಿ ಅವರನ್ನು ವೈಯಕ್ತಿಕವಾಗಿಯೂ ಟೀಕಿಸಿದ ಅವರು, ಜಾರಕಿಹೊಳಿ ಬೆಂಬಲಿಗರಿಂದ ತಮಗೆ ಅವಮಾನ ಆಗಿದೆ ಎಂದರು. ಅಷ್ಟೆ ಅಲ್ಲದೆ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದರು.

English summary
Shankar Manavalli a KPCC former president oppose to Sathish Jarakiholi's upcoming program anti superstition day celebration in cementry. Shankar said it is dishonor to Ambedkar that keeping his photo in cementry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X