ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸವದತ್ತಿ ಚರಂಡಿಯಲ್ಲಿ ಐದು ಲಕ್ಷ ರೂ. ಮೌಲ್ಯದ ಹಳೆ ನೋಟುಗಳು ಪತ್ತೆ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜುಲೈ.03: ಜಿಲ್ಲೆಯ ಸವದತ್ತಿ ಪಟ್ಟಣದ ಚರಂಡಿಯಲ್ಲಿ ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿವೆ. ಸವದತ್ತಿಯ ಬೆಣ್ಣಿಕಟ್ಟಿ ಓಣಿಯ ಚರಂಡಿಯಲ್ಲಿ ಅಮಾನ್ಯಗೊಂಡ ನೋಟುಗಳು ಕಾಣಿಸಿಕೊಂಡಿವೆ. ಅರ್ಧ ಸುಟ್ಟ ಸ್ಥಿತಿಯಲ್ಲಿ ನೋಟುಗಳು ಜನರ ಕಣ್ಣಿಗೆ ಬಿದ್ದಿವೆ.

ಸ್ಥಳೀಯರ ಅಂದಾಜಿನ ಪ್ರಕಾರ ನಾಲ್ಕರಿಂದ ಐದು ಲಕ್ಷ ಮೌಲ್ಯದವರೆಗಿನ ಹಳೆಯ ನೋಟುಗಳು ಚರಂಡಿ ನೀರಿನಲ್ಲಿ ಹರಿದು ಹೋಗಿವೆ. ಆದರೆ ಅವುಗಳಲ್ಲಿ ಕೆಲವು ನೋಟುಗಳು ಮಾತ್ರ ಸುಟ್ಟ ಸ್ಥಿತಿಯಲ್ಲಿ ಕಾಣಿಸಿಕೊಂಡಿವೆ ಎನ್ನಲಾಗುತ್ತಿದೆ. ಇದನ್ನು ಯಾರು ಬಿಸಾಡಿ ಹೋಗಿದ್ದಾರೆ ಎಂಬುದರ ಬಗ್ಗೆ ಮಾಹಿತಿಯಿಲ್ಲ.

1ರೂ. ನೋಟಿಗೆ ನೂರರ ಸಂಭ್ರಮ! ಶತಮಾನದ ಇತಿಹಾಸದತ್ತ ಒಂದು ನೋಟ1ರೂ. ನೋಟಿಗೆ ನೂರರ ಸಂಭ್ರಮ! ಶತಮಾನದ ಇತಿಹಾಸದತ್ತ ಒಂದು ನೋಟ

ಆದರೆ ಚರಂಡಿಯಲ್ಲಿ ಬಿದ್ದಿರುವ ನೋಟು‌ ನೋಡಲು ಮಾತ್ರ ಸಾರ್ವಜನಿಕರು ಮುಗಿಬಿದ್ದಿದ್ದರು. ಸವದತ್ತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Old 500 and Rs. 1000 notes were found in the drainage at Belgaum

ಕೇಂದ್ರ ಸರ್ಕಾರ ನೋಟ್ ಅಮಾನ್ಯಗೊಳಿಸಿ ವರುಷಗಳೇ ಕಳೆಯುತ್ತ ಬರುತ್ತಿವೆ. ಆದರೆ ಈಗಲೂ ಹಳೆಯ 500 ಮತ್ತು 1000 ಮುಖಬೆಲೆಯ ನೋಟುಗಳು ಅಲ್ಲಲ್ಲಿ ಕಾಣಿಸಿಕೊಂಡು ಸುದ್ದಿ ಮಾಡುತ್ತಿವೆ.

English summary
Old 500 and Rs. 1000 notes were found in the drainage at Belgaum district.Notes were found in half burned conditions. The case was registered at Savadatti police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X