ಖಾಸಗಿ ವೈದ್ಯರ ಮುಷ್ಕರಕ್ಕೆ ಎಂಇಎಸ್ ಸಂಘಟನೆ ಬೆಂಬಲ

Posted By: Nayana
Subscribe to Oneindia Kannada

ಬೆಳಗಾವಿ, ನವೆಂಬರ್ 16: ಕಳೆದ ಮೂರು ದಿನಗಳಿಂದ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ತಿದ್ದುಪಡಿಯಲ್ಲಿನ ಅಂಶಗಳನ್ನು ಕೈಬಿಡುವಂತೆ ಬೆಳಗಾವಿಯ ಸುವರ್ಣಸೌಧದ ಸಮೀಪ ತಾರಿಹಾಳದಲ್ಲಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ವೈದ್ಯರ ಮುಷ್ಕರಕ್ಕೆ ಎಂಇಎಸ್ ಸಂಘಟನೆ ಬೆಂಬಲ ಸೂಚಿಸಿದೆ.

ತಕ್ಷಣ ಮುಷ್ಕರ ನಿಲ್ಲಿಸಿ ವೈದ್ಯರಿಗೆ ಹೈಕೋರ್ಟ್ ಸೂಚನೆ

ಮಾಜಿ ಶಾಸಕ ಎಂಇಎಸ್ ಮುಖಂಡ ಮನೋಹರ್ ಕಿಣೇಕರ್ ಮಾತನಾಡಿ, ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಸರಿಯಾಗಿದೆ. ನಿಮ್ಮ ಬೇಡಿಕೆಗಳು ನ್ಯಾಯಬದ್ಧವಾಗಿದೆ. ವೈದ್ಯಕೀಯ ಶಿಕ್ಷಣದ ಬಗ್ಗೆ ಜ್ಞಾನ ಇಲ್ಲದವರು ಮುಷ್ಕರವನ್ನು ವಿರೋಧಿಸುತ್ತಿದ್ದಾರೆ. ಈ ವಿಧೇಯ ಜಾರಿಗೆ ಬಂದರೆ ವೈದ್ಯರನ್ನು ವಿಚಾರಣೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

Now MES extends support to private doctors

ಸರ್ಕಾರ ಮೂರ್ಖತನದಿಂದ ಮೂರ್ಖ ಕಾಯ್ದೆಯನ್ನ ಜಾರಿಗೆ ತರಲು ಹೊರಟಿದೆ ಎಂದು ಕರ್ನಾಟಕ ಸರ್ಕಾರದ ಬಗ್ಗೆ ವಾಗ್ದಾಳಿ ನಡೆಸಿದ ಕಿಣೇಕರ್.. ನಿಮ್ಮ ಹೋರಾಟಕ್ಕೆ ನಮ್ಮ ಎಂ.ಇ.ಎಸ್ ನಿಂದ ಬೆಂಬಲ ಇದೆ ಎಂದು ಉರಿಯುವ ಬೆಂಕಿಯಲ್ಲಿ ತುಪ್ಪ ಸುರಿದಂತೆ ಮಾತನಾಡಿದರು.

ಮುಷ್ಕರದಿಂದಾಗಿ ಜಿಲ್ಲೆಜಿಲ್ಲೆಗಳಲ್ಲಿ ರೋಗಿಗಳ ನರಳಾಟ

ಮೊದಲು ಭಾಷಣವನ್ನು ಮರಾಠಿ ಭಾಷೆಯಲ್ಲಿ ಪ್ರಾರಂಭಿಸಿದರು. ಕನ್ನಡದಲ್ಲಿ ಮಾಡುವಂತೆ ಕೆಲವು ವೈದ್ಯರು ಒತ್ತಾಯಿಸಿದರು. ಕೆಲ ಸಮಯದ ನಂತರ ಮತ್ತೆ ಮರಾಠಿಯಲ್ಲಿಯೇ ಭಾಷಣವನ್ನು ಮುಂದುವರೆಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Anti state political party MES extends its support to private doctors. Ex MLA of MES participated in doctors protest on thursday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ