ಪತ್ರಕರ್ತ ಡಾ. ವೀರೇಶ್ ಹಿರೇಮಠ ಅಪಘಾತದಲ್ಲಿ ದುರ್ಮರಣ

Posted By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ಜನವರಿ 14: ಹಿರಿಯ ಪತ್ರಕರ್ತ ಡಾ. ವೀರೇಶ ಹಿರೇಮಠ ಅವರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಸಂಸಾರ ಸಮೇತ ಗೋವಾ ಪ್ರವಾಸಕ್ಕೆ ತೆರಳಿದ್ದ ವೀರೇಶ್ ಅವರು, ಬಾಗಲಕೋಟೆಗೆ ಹಿಂತಿರುಗುವಾಗ ಅವರಿದ್ದ ಕಾರು ಅಪಘಾತಕ್ಕೀಡಾಗಿದೆ. ಮೃತರು ಪತ್ನಿ ಗೌರಿ, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಶಿಷ್ಯವರ್ಗವನ್ನು ಅಗಲಿದ್ದಾರೆ.

ವೀರೇಶ್ ಅವರಿದ್ದ ಕಾರು, ಖಾನಪುರ ತಾಲೂಕಿನ ನಂದಗಡ ಬಳಿ ಭಾನುವಾರ ಮುಂಜಾನೆ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ವೀರೇಶ್ ಅವರು ಮೃತಪಟ್ಟಿದ್ದಾರೆ.

ರಸ್ತೆ ಅಪಘಾತದಲ್ಲಿ ವರದಿಗಾರ ಮೌನೇಶ್ ಪೋತರಾಜ್ ನಿಧನ

Noted Journalist Veeresh Hiremath dies in an accident
ವೀರೇಶ್ ಅವರ ಪತ್ನಿ ಗೌರಿ ಕಾರು ಚಾಲಕ ಸುನೀಲ್ ಗೆ ಗಂಭೀರ ಗಾಯಗಳಾಗಿವೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.ಗಾಯಗೊಂಡವರನ್ನು ಧಾರವಾಡದ ಸಿವಿಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Noted Journalist Veeresh Hiremath dies in an accident

ಬಾಗಲಕೋಟೆ ಬಿವಿವಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಅಧ್ಯಾಪಕರಾಗಿ ಡಾ ವಿರೇಶ ಹಿರೇಮಠ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಎಂ.ಎ(ಎಂಸಿ ಜೆ), ಪಿಜಿ ಡಿಪ್ಲೋಮಾ, ಪಿಎಚ್ ಡಿ ಪದವಿ ಪಡೆದಿದ್ದ ವೀರೇಶ್ ಅವರು ವಿದ್ಯಾರ್ಥಿಗಳ ನೆಚ್ಚಿನ ಗುರುವಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Journalist Veeresh Hiremath dies in an accident when a car he was traveling rams in to a tree. Veeresh and family were returning back to Bagalkote from Goa trip. Veeresh was faculty at BVV Journalism College.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ