ಸಚಿವ ಅನಂತ್ ಕುಮಾರ್, ಪಿಎಗೆ ಸಂಬಳ ಆಗಿಲ್ವಂತೆ

Posted By:
Subscribe to Oneindia Kannada

ಬೆಳಗಾವಿ, ನವೆಂಬರ್ 16: ರೈತರು, ಮೀಸಲಾತಿ ಹೋರಾಟಗಾರರ ಪ್ರತಿಭಟನೆ, ವೈದ್ಯರ ಮುಷ್ಕರ, ಜಾರ್ಜ್ ರಾಜೀನಾಮೆಗೆ ಆಗ್ರಹದ ನಡುವೆ ಸಚಿವರು, ಶಾಸಕರ ಆಪ್ತ ಸಹಾಯಕರ ಸಂಬಳದ ಬಗ್ಗೆ ಕೂಡಾ ವಿಧಾನ ಪರಿಷತ್ ನಲ್ಲಿ ಚರ್ಚೆ ನಡೆಯಿತು.

ಪರಿಷತ್ ನಿಯಮ 330 ಅಡಿಯಲ್ಲಿ ಚರ್ಚೆ ಆರಂಭಿಸಿದ ಸದಸ್ಯ ಬಿಜೆ ಪುಟ್ಟಸ್ವಾಮಿ ಅವರು, ಸಂಸದರು, ವಿಧಾನಸಭೆ, ವಿಧಾನ ಪರಿಷತ್ ಸದಸ್ಯರಿಗೆ ಗುತ್ತಿಗೆ ಆಧಾರದ ಆಪ್ತ ಸಹಾಯಕರಿಗೆ 8-9 ತಿಂಗಳ ಸಂಬಳ ನೀಡಿಲ್ಲ ಎಂದರು.

No salaries for PAs of Legislative Council members, Union Ministers

ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದಗೌಡ, ನಿರ್ಮಲ ಸೀತಾರಾಮನ್, ಸೇರಿದಂತೆ ಸಂಸದರು, ರಾಜ್ಯದ ಶಾಸಕರ ಆಪ್ತ ಸಹಾಯಕರಿಗೆ ಸಂಬಳ ನೀಡಿಲ್ಲ, ಕೂಡಲೇ ಸಂಬಳ ಬಿಡುಗಡೆ ನೀಡಬೇಕು, ಗುತ್ತಿಗೆ ಆಧಾರದ ಆಪ್ತ ಸಹಾಯಕರಿಗೆ ಸಂಬಳ ಜಾಸ್ತಿ ಮಾಡಬೇಕು, ಅಧಿವೇಶನ ಅವಧಿಯಲ್ಲಿ ಅವರಿಗೂ ಭತ್ಯೆ ನೀಡಬೇಕು ಎಂದು ಸರ್ಕಾರಕ್ಕೆ ಪುಟ್ಟಸ್ವಾಮಿ ಆಗ್ರಹಿಸಿದರು.

ಸಚಿವ ಕಾಗೋಡು ತಿಮ್ಮಪ್ಪ ಅವರು ಉತ್ತರಿಸಿ, ಆಪ್ತ ಸಹಾಯಕರಿಗೆ ಸಂಬಳವನ್ನ‌ ಬಿಡುಗಡೆ ಮಾಡಿಸುತ್ತೇನೆ, ಬಾಕಿ ಸಂಬಳ ತಕ್ಷಣ ಬಿಡುಗಡೆ ಮಾಡಲು ಅಧಿಕಾರಿ ಸೂಚನೆ ನೀಡುತ್ತೇನೆ ಎಂದರು.

ಕಾಗೋಡು ಉತ್ತರಕ್ಕೆ ಬಹುತೇಕ ಸದಸ್ಯರ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿ ತಿಂಗಳು ಸಂಬಳ ಕೊಡಿಸುವಂತೆ ಸದಸ್ಯರಿಂದ ಒತ್ತಾಯ ಕೇಳಿದ. ಸರ್ಕಾರ ಪಾಪರ್ ಆಗಿದೆಯಾ ಎಂದು ಪುಟ್ಟಸ್ವಾಮಿ ಪ್ರಶ್ನಿಸಿದರು. ಪುಟ್ಟಸ್ವಾಮಿ ಮಾತಿಗೆ ಗರಂ ಆದ ಕಾಗೋಡು, 'ಹಂಗೆಲ್ಲ ಮಾತಾಡಬೇಡ್ರಿ. ನೀವೇನು ಕೊಟ್ಟು ಇಟ್ಟಿಲ್ ಅಂತ ಗದರಿದರು.

ಸದನದಲ್ಲಿ ಮಾತಿನ ಚಕಮಕಿ ಮುಂದುವರೆಯಿತು, ಪಕ್ಷ ಬೇಧ ಮರೆತು ಸಂಬಳ ಬಿಡುಗಡೆ ಒತ್ತಾಯಿಸಿದ ಸದಸ್ಯರು. ಬಳಿಕ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Personal Assistants (PAs) of several members of the Legislative Council, even Union Ministers have not been paid salary for the last eight months because of the non-allocation of budgetary funds.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ