ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಸಚಿವರ ಹೆಸರಿಲ್ಲ!

|
Google Oneindia Kannada News

ಬೆಳಗಾವಿ, ನವೆಂಬರ್ 9 : ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸಂಸದರಾದ ಸುರೇಶ್ ಅಂಗಡಿ, ಸಚಿವ ಅನಂತ ಕುಮಾರ್ ಹೆಗಡೆ ಅವರ ಹೆಸರನ್ನು ಕೈ ಬಿಡಲಾಗಿದೆ. ಹೆಸರನ್ನು ಸೇರಿಸಬೇಡಿ ಎಂದು ಇಬ್ಬರೂ ಬಿಜೆಪಿ ನಾಯಕರು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು.

ಉ. ಕನ್ನಡದಲ್ಲಿ ನ. 9 -10ರವರೆಗೆ ಮೆರವಣಿಗೆ, ಪ್ರತಿಭಟನೆಗೆ ನಿರ್ಬಂಧಉ. ಕನ್ನಡದಲ್ಲಿ ನ. 9 -10ರವರೆಗೆ ಮೆರವಣಿಗೆ, ಪ್ರತಿಭಟನೆಗೆ ನಿರ್ಬಂಧ

ಮೊದಲು ಕೇಂದ್ರ ಕೌಶಾಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತ ಕುಮಾರ್ ಹೆಗಡೆ, ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರ ಹೆಸರನ್ನು ವಿಶೇಷ ಆಮಂತ್ರಿತರ ಪಟ್ಟಿಯಲ್ಲಿ ಸೇರಿಸಿ ಜಿಲ್ಲಾಡಳಿತ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿತ್ತು.

In Pics : ಟಿಪ್ಪು ಸುಲ್ತಾನ್ ಯಾರಂತ ಗೊತ್ತಾ ಪುಟ್ಟಾ?

No invitation for minister to Tipu Jayanti programme

ನವೆಂಬರ್ 10ರ ಶುಕ್ರವಾರ ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಸಚಿವರು, ಬೆಳಗಾವಿ ಸಂಸದರನ್ನು ಆಹ್ವಾನಿಸಲಾಗಿತ್ತು.

'ಟಿಪ್ಪು ಜಯಂತಿ ಆಚರಣೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಸೇರಿಸಬೇಡಿ''ಟಿಪ್ಪು ಜಯಂತಿ ಆಚರಣೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಸೇರಿಸಬೇಡಿ'

ಮೊದಲು ಮುದ್ರಿಸಿದ ಪತ್ರಿಕೆಯಲ್ಲಿ ಸಚಿವರು ಮತ್ತು ಸಂಸದರ ಹೆಸರು ಸೇರಿಸಲಾಗಿತ್ತು. ತಮ್ಮ ಹೆಸರನ್ನು ಸೇರಿಸಿಬೇಡಿ ಎಂದು ಇಬ್ಬರು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿ ಹೆಸರು ಮುದ್ರಿಸಬೇಡಿ ಎಂದು ಹೇಳಿತ್ತು.

ಟಿಪ್ಪು ಜಯಂತಿಯಂದು ಕೊಡಗು ಬಂದ್ ಗೆ ಕರೆಟಿಪ್ಪು ಜಯಂತಿಯಂದು ಕೊಡಗು ಬಂದ್ ಗೆ ಕರೆ

ಆದ್ದರಿಂದ, ಜಿಲ್ಲಾಡಳಿತ ಅನಂತ ಕುಮಾರ್ ಹೆಗಡೆ ಮತ್ತು ಸುರೇಶ್ ಅಂಗಡಿ ಅವರ ಹೆಸರನ್ನು ಕೈ ಬಿಟ್ಟು ಆಮಂತ್ರಣ ಪತ್ರಿಕೆಯನ್ನು ಪುನಃ ಮುದ್ರಿಸಿದೆ.

English summary
Belagavi district administration not invited Union Minister of State for Skill Development Ananth Kumar Hegde and Belagavi MP (BJP) Suresh Angadi to Tipu Jayanti programme on November 10, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X