ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ:ಜಾರ್ಜ್ ಹೇಳಿದ್ದೇನು?

Posted By:
Subscribe to Oneindia Kannada

ಬೆಳಗಾವಿ, ನವೆಂಬರ್ 15: ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತಿದ್ದ ಬೆಂಗಳೂರಿಗರಿಗೆ ಅತ್ಯುತ್ತಮ ಸಾರಿಗೆ ಸೇವೆಯಾಗಿ ಕಂಡಿದ್ದು 'ನಮ್ಮ ಮೆಟ್ರೋ'. ಆದರೆ ಇತ್ತೀಚೆಗೆ ಮೆಟ್ರೋದಲ್ಲಿ ಹೆಚ್ಚಿರುವ ಜನಜಂಗುಳಿ ಮಾತ್ರ ಮೆಟ್ರೋವನ್ನೂ ಶಪಿಸುವಂಥ ಪರಿಸ್ಥಿತಿಯನ್ನು ತಂದಿಟ್ಟಿದೆ.

ನಮ್ಮ ಮೆಟ್ರೋದಲ್ಲಿ 80ಕ್ಕೂ ಅಧಿಕ ಹುದ್ದೆಗಳಿವೆ, ಅರ್ಜಿ ಹಾಕಿ

ಅದರಲ್ಲೂ ಮಹಿಳಾ ಪ್ರಯಾಣಿಕರಿಗಂತೂ ಆ ಜನಜಂಗುಳಿಯಲ್ಲಿ ನಿಂತುಕೊಳ್ಳುವುದಂದ್ರೆ ಸಂಕೋಚವೇ. ಅದಕ್ಕೆಂದೇ ಇನ್ನು ಕೆಲವೇ ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಬೋಗಿ ಗಳನ್ನು ಆರಂಭಿಸುವುದಾಗ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ನಮ್ಮ ಮೆಟ್ರೋ : ಶೀಘ್ರದಲ್ಲೇ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ, ಜೆಡಿಎಸ್ ಶಾಸಕ ಗೋಪಾಲಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯದಲ್ಲೇ ಮಹಿಳಾ ಬೋಗಿಗಳನ್ನು ಆರಂಭಿಸುವುದಾಗಿ ಹೇಳಿದರು.

ಇವು 'ನಮ್ಮ ಮೆಟ್ರೋ'ದ ಸುಂದರ, ವಿರೂಪ, ಕುರೂಪ ಚಿತ್ರಗಳು!

ಮಹಿಳೆಯರಿಗೆ ಪ್ರತ್ಯೇಕ ಬೋಗಿ ಯಾವಾಗ?

ಮಹಿಳೆಯರಿಗೆ ಪ್ರತ್ಯೇಕ ಬೋಗಿ ಯಾವಾಗ?

ಈಗಾಗಲೇ ಮೆಟ್ರೋದಲ್ಲಿರುವುದು ಕೇವಲ ಮೂರು ಬೋಗಿ ಮಾತ್ರ. ಒಂದು ಬಾರಿ ಮೆಟ್ರೋದಲ್ಲಿ 250 ಜನ ಓಡಾಡಬಹುದು. ಹೆಚ್ಚುವರಿ ಮೂರು ಬೋಗಿಗಳನ್ನು ಅಳವಡಿಸಿ, ನಂತರ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ ಆರಂಭಿಸಲಾಗುತ್ತದೆ ಎಂದು ಜಾರ್ಜ್ ಹೇಳಿದ್ದಾರೆ.

ಕಳೆದ ಜೂನ್ ನಲ್ಲೇ ಭರವಸೆ ನೀಡಿದ್ದ ಜಾರ್ಜ್!

ಕಳೆದ ಜೂನ್ ನಲ್ಲೇ ಭರವಸೆ ನೀಡಿದ್ದ ಜಾರ್ಜ್!

ಹೆಚ್ಚುವರಿ ಬೋಗಿಗಳ ಖರೀದಿಗೆ ಬಿಇಎಂಎಲ್ ಗೆ ಆರ್ಡರ್ ನೀಡಲಾಗಿದ್ದು, ಬೋಗಿಗಳು ಬಂದ ತಕ್ಷಣ ಅಂದರೆ, ಡಿಸೆಂಬರ್ ಹೊತ್ತಿಗೆ ಮಹಿಳೆಯರಿಗೆ ಪ್ರತ್ಯೇಕ ಬೋಗಿ ನೀಡುವುದಾಗ ಜಾರ್ಜ್ ಕಳೆದ ಜೂನ್ ನಲ್ಲೇ ಹೇಳಿದ್ದದರು. ಡಿಸೆಂಬರ್ ಗೆ ಇನ್ನೊಂದೇ ತಿಂಗಳು ಬಾಕಿ ಇದ್ದು, ನಿಜಕ್ಕೂ ಸದ್ಯದಲ್ಲೇ ಮಹಿಳೆಯರಿಗೆ ಪ್ರತ್ಯೇಕ ಬೋಗಿ ನೀಡುವ ಭರವಸೆಯನ್ನು ಉಳಿಸಿಕೊಳ್ಳುತ್ತಾರಾ ನೋಡಬೇಕು.

4 ಲಕ್ಷದಷ್ಟು ಪ್ರಯಾಣಿಕರು!

4 ಲಕ್ಷದಷ್ಟು ಪ್ರಯಾಣಿಕರು!

ನಾಗಸಂದ್ರದಿಂದ - ಯಲಚೇನಹಳ್ಳಿ ವರೆಗಿನ ಗ್ರೀನ್ ಲೈನ್ ಮತ್ತು ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ ಪರ್ಪಲ್ ಲೈನ್ ಮೆಟ್ರೋದ ಒಟ್ಟು 42 ಕಿ.ಮೀ. ಹಾದಿಯನ್ನು ಅತ್ಯಂತ ಸುಲಭವಾಗಿ ತಲುಪುವ ಸಾಧ್ಯತೆಯನ್ನು ಪರಿಚಯಿಸಿದ್ದು ನಮ್ಮ ಮೆಟ್ರೋ. ದಿನವೊಂದಕ್ಕೆ ಸುಮಾರು 4 ಲಕ್ಷದಷ್ಟು ಜನರನ್ನು ಹೊತ್ತೊಯ್ಯುವ ನಮ್ಮ ಮೆಟ್ರೋ ಸದ್ಯಕ್ಕೆ ಬೆಂಗಳೂರಿಗರ ಅನಿವಾರ್ಯ ಸಾರಿಗೆ ವ್ಯವಸ್ಥೆ!

ಆಗಲೇ ಆರಂಭವಾಗಿದೆ ಕಿರುಕುಳ!

ಆಗಲೇ ಆರಂಭವಾಗಿದೆ ಕಿರುಕುಳ!

ಎಂಜಿ ರೋಡ್ ಮೆಟ್ರೋಸ್ಟೇಶನ್ ಮತ್ತು ಆ ಮಾರ್ಗವಾಗಿ ಓಡಾಡುವ ಮೆಟ್ರೋದಲ್ಲಿ ಈಗಾಗಲೇ ಎರಡು ಬಾರಿ ಅಹಿತಕರ ಘಟನೆ ನಡೆದಿದೆ ಎಂಬ ಪ್ರಕರಣ ಕೇಳಿಬಂದಿತ್ತು. ಕಳೆದ ಅಕ್ಟೋಬರ್ ನಲ್ಲಿ, ತನಗೆ ಮೆಟ್ರೋದಲ್ಲಿ ಕೆಲ ಯುವಕರು ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆಯೊಬ್ಬರು ಮೆಟ್ರೋ ಸಿಬ್ಬಂದಿಯೊಬ್ಬರಿಗೆ ದೂರು ನೀಡಿದ್ದರು. ಇಂಥ ಘಟನೆಗಳು ಈಗಾಗಲೇ ಶುರುವಾಗಿರುವ ಹಿನ್ನೆಲೆಯೆಲ್ಲಿ ಆದಷ್ಟು ಶೀಘ್ರವಾಗಿ ನಮ್ಮ ಮೆಟ್ರೋದಲ್ಲಿ ಮಹಿಳಾ ಬೋಗಿಗಳು ಆರಂಭವಾಗುವ ಅಗತ್ಯವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
When will be the Namma Metro service get separate coachs for women passangers? Bengaluru development minister K J George says, 'the demand will be fulfilled soon.' The minister told this while answering a question in ongoing winter session in Belagavi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ