ನಮ್ಮ ಮೆಟ್ರೋ ರೈಲು 3 ನಿಮಿಷಕ್ಕೊಂದರಂತೆ ಸಂಚಾರ: ಜಾರ್ಜ್

Posted By: ಬೆಳಗಾವಿ ಪ್ರತಿನಿಧಿ
Subscribe to Oneindia Kannada
   Improvements in Bengaluru metro | ಬೆಂಗಳೂರು ಮೆಟ್ರೋ ಸುಧಾರಣೆ | Oneindia Kannada

   ಬೆಂಗಳೂರು, ನವೆಂಬರ್ 23: ನಮ್ಮ ಮೆಟ್ರೋ ರೈಲಿನ ಬಗ್ಗೆ ವಿಧಾನಪರಿಷತ್ ನಲ್ಲಿ ಭಾರಿ ಚರ್ಚೆ ನಡೆಯಿತು. ಮಹಿಳೆಯರು ಮತ್ತು ಮಕ್ಕಳು, ಹಿರಿಯರಿಗೆ ಆಗುತ್ತಿರುವ ತೊಂದರೆ ಬಗ್ಗೆ ವಿಧಾನಪರಿಷತ್ ನಲ್ಲಿ ವೀಣಾ ಅಚ್ಚಯ್ಯ ಅವರು ಕೇಳಿದ ಪ್ರಶ್ನೆಗೆ ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಅವರು ಉತ್ತರಿಸಿದರು.

   ನಮ್ಮ ಮೆಟ್ರೋ: ಡಿಸೆಂಬರ್ ನಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ

   ಜನದಟ್ಟಣೆಯ ವೇಳೆ ಮಹಿಳೆಯರು ಮತ್ತು ಮಕ್ಕಳು, ಹಿರಿಯರಿಗೆ ತೊಂದರೆಯಾಗುತ್ತಿದೆ. ಮೆಟ್ರೋ ರೈಲಿನ ಬೋಗಿಗಳ ಸಂಖ್ಯೆ ಹೆಚ್ಚಿಸಲು ಬೇಡಿಕೆ ಇದ್ದರೂ ಹೆಚ್ಚಿಸಿಲ್ಲ ಏಕೆ? ಮಹಿಳೆಯರಿಗೆ ಒಂದು ಪ್ರತ್ಯೇಕ ಬೋಗಿ ಮೀಸಲಿಡಿ ಎಂದು ವಿಧಾನಪರಿಷತ್ ನಲ್ಲಿ ವೀಣಾ ಅಚ್ಚಯ್ಯ ಅವರು ಜಾರ್ಜ್ ಅವರಿಗೆ ಪ್ರಶ್ನೆ ಎಸೆದರು.

   ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

   ಇದಕ್ಕೆ ಉತ್ತರಿಸಿದ ಜಾರ್ಜ್, ಬೆಳಗ್ಗೆ ಮತ್ತು ಸಂಜೆ 4 ನಿಮಿಷಕ್ಕೊಂದು ಚಲಿಸುತ್ತಿರುವ ನಮ್ಮ ಮೆಟ್ರೋ ರೈಲುಗಳನ್ನು 3 ನಿಮಿಷಕ್ಕೆ ಸಂಚರಿಸಲು ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದರು.

   Namma Metro frequency every 3 mins in peak hours : KJ George

   ಬೆಂಗಳೂರು ನಮ್ಮ ಮೆಟ್ರೋ ಬೋಗಿಗಳ ಸಂಖ್ಯೆಯನ್ನು ಡಿಸೆಂಬರ್‍ನಲ್ಲಿ 6ಕ್ಕೆ ಹೆಚ್ಚಿಸಲಾಗುತ್ತದೆ. ಆ ವೇಳೆ ಮಹಿಳೆಯರಿಗೆ ಮತ್ತು ವಿಕಲಚೇತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

   ಮೆಟ್ರೋ ಹಸಿರು ಲೈನ್ ನ ಬಗ್ಗೆ ಇಲ್ಲಿದೆ ಮಾಹಿತಿ...

   ನಮ್ಮ ಮೆಟ್ರೋದ ಹಂತ 1ರಲ್ಲಿ ಮೂರು ಬೋಗಿಗಳನ್ನು ಅಳವಡಿಸಲಾಗಿದೆ. ಡಿಸೆಂಬರ್ ವೇಳೆಗೆ 6 ಬೋಗಿಗಳಿಗೆ ಹೆಚ್ಚಿಸಲಾಗುವುದು. ಬೆಳಗ್ಗೆ ಮತ್ತು ಸಂಜೆ ಸಂಚಾರ ದಟ್ಟಣೆ ಹೆಚ್ಚಾದ್ದರಿಂದ 6ನಿಮಿಷದ ಬದಲಾಗಿ 4 ನಿಮಿಷಕ್ಕೊಂದು ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.
   ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗಿದೆ. ಪ್ರತೀ ದಿನ 3 ಲಕ್ಷ ಓಡಾಡುತ್ತಿದ್ದಾರೆ ಎಂದು ಹೇಳಿದರು.

   ಜೆಡಿಎಸ್‍ನ ಸದಸ್ಯ ಆರ್.ಚೌಡಾರೆಡ್ಡಿ ಅವರ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ನಮ್ಮ ಮೆಟ್ರೋದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಿಂದ 33 ಮಂದಿ ಅಧಿಕಾರಿಗಳು, 761 ಉದ್ಯೋಗಿಗಳು ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರು ಬಹುತೇಕ ಕನ್ನಡಿಗರಾಗಿದ್ದಾರೆ ಎಂದು ಸಚಿವರು ತಿಳಿಸಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   BMRCL Namma Metro frequency every 3 mins in peak hours, separate bogies for woman and children will be provided soon said Minister KJ George during the question hours today at Legislative council, Belagavi.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ