ಮುಗಳಖೋಡ ಮಠದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ವಿಶ್ವದಾಖಲೆಯತ್ತ

Posted By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ರಾಯಬಾಗ (ಬೆಳಗಾವಿ ಜಿಲ್ಲೆ), ಜನವರಿ 12 : ರಾಜ್ಯ ಸರಕಾರವು ವಿವೇಕಾನಂದರ ಜಯಂತಿ ಆಚರಣೆಗೆ ನಿರ್ಲಕ್ಷ್ಯ ತೋರಿದೆ ಎಂಬ ಆರೋಪ ಒಂದು ಕಡೆ ಕೇಳಿಬರುತ್ತಿದ್ದರೆ, ಇಲ್ಲಿನ ರಾಯಬಾಗದ ಮುಗಳಖೋಡ ಮಠದಲ್ಲಿ ಶುಕ್ರವಾರ ನ ಭೂತೋ ನ ಭವಿಷ್ಯತ್ ಎಂಬಂತೆ ವಿವೇಕಾನಂದ ಜಯಂತಿ ಆಚರಿಸಲಾಗುತ್ತಿದೆ.

ವಿವೇಕಾನಂದರ ನೆನೆದು 'ಯುವದಿನ'ಕ್ಕೆ ಶುಭನುಡಿದ ಗಣ್ಯರು

ಸಿದ್ದರಾಮೇಶ್ವರ ಜಯಂತಿಯ ಸಂಕಲ್ಪ ಯಾತ್ರೆಯ ನಿಮಿತ್ತ ನಡೆದಿರುವ ವಿವೇಕಾನಂದ ಜಯಂತಿಯಲ್ಲಿ ಒಂದು ಲಕ್ಷ ಮೀಟರ್ ಕೇಸರಿ ಬಟ್ಟೆ ಬಳಸಿ, ಹತ್ತು ಸಾವಿರ ಯುವಕರಿಂದ ವಿವೇಕ ಆವಾಹನ ಆಗಿದೆ. ಅಂದಹಾಗೆ ಇಲ್ಲಿ ನಡೆದಿರುವ ವಿವೇಕಾನಂದ ಜಯಂತಿ ಕಾರ್ಯಕ್ರಮವು ವಿಶ್ವ ದಾಖಲೆ ಆಗುವತ್ತ ಸಾಗಿದೆ.

Mugalakhoda mata Swami Vivekananda jayanti towards world record

ಲಿಮ್ಕಾ ಬುಕ್ಸ್ ಆಫ್ ರೆಕಾರ್ಡ್ ನವರಿಂದ ಸ್ವಾಮಿ ವಿವೇಕಾನಂದರ ವೇಷ ಧರಿಸಿದವರ ಎಣಿಕೆ ಶುರುವಾಗಿದೆ. ಲೆಕ್ಕಾಚಾರ ಮುಗಿದ ನಂತರ ಈ ಕಾರ್ಯಕ್ರಮವು ದಾಖಲೆ ನಿರ್ಮಿಸಿತೆ ಅಥವಾ ಇಲ್ಲವೆ ಎಂಬುದು ತಿಳಿಯಲಿದೆ. ಅಂದಹಾಗೆ ಈ ಕಾರ್ಯಕ್ರಮವು ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ನಡೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Swami Vivekananda jayanti in Mugalakhoda mata in Belagavi on Friday leading towards world record. Here is the details of program.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ