ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತ್ ಬಂದ್: ಕುಡಚಿ ಬಳಿ ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಾತಾಯಿ

By Nayana
|
Google Oneindia Kannada News

ಬೆಳಗಾವಿ, ಸೆಪ್ಟೆಂಬರ್ 10: ಭಾರತ ಬಂದ್‌ನಿಂದಾಗಿ ಬಸ್‌ಗಳು ಸಿಗದೆ ಪರದಾಡಿ ಬಳಿಕ ರೈಲಿನಲ್ಲಿ ಸಂಚರಿಸುತ್ತಿರುವಾಗಲೇ ಮಗುವಿಗೆ ಜನ್ಮ ನೀಡಿದ ಘಟನೆ ಬೆಳಗಾವಿಯ ಕುಡಚಿಯಲ್ಲಿ ನಡೆದಿದೆ.

ಭಾರತ್ ಬಂದ್ LIVE: ಬಿಹಾರದಲ್ಲಿ ಮಗು ಸಾವು: ರಾಹುಲ್ ಹೊಣೆ ಎಂದ ಬಿಜೆಪಿ ಭಾರತ್ ಬಂದ್ LIVE: ಬಿಹಾರದಲ್ಲಿ ಮಗು ಸಾವು: ರಾಹುಲ್ ಹೊಣೆ ಎಂದ ಬಿಜೆಪಿ

ಭಾರತ್ ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ ಬಸ್‌ಗಳ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ, ಬಸ್‌ ಹಾಗೂ ಆಂಬುಲೆನ್ಸ್ ಎರಡೂ ಸಿಗದ ಕಾರಣ ಬೇರೆ ದಾರಿ ಸಿಗದೆ ರೈಲಿನಲ್ಲಿ ಮಹಿಳೆ ಪ್ರಯಾಣಿಸುವಂತಾಯಿತು. ರಾಯಭಾಗ ನಿಲ್ದಾಣ ನಿಲ್ದಾಣಕ್ಕೆ ಬರುತ್ತಿದ್ದಂತೆ ಯಲ್ಲವ್ವ ಪತ್ರೋಟ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣಾ 108 ಸಿಬ್ಬಂದಿಗೆ ಕರೆ ಮಾಡಲಾಗಿದೆ.

ಯಾಕ್ ಸಾರ್, ಭಾರತ ಬಂದ್ ಇಲ್ವಾ? ನನ್ನದು ಒಂದೇ ಉತ್ತರ 'ಗೊತ್ತಿಲ್ಲ'!ಯಾಕ್ ಸಾರ್, ಭಾರತ ಬಂದ್ ಇಲ್ವಾ? ನನ್ನದು ಒಂದೇ ಉತ್ತರ 'ಗೊತ್ತಿಲ್ಲ'!

Mother gives birth to her baby in the train near Belagavi

ರೈಲು ಕೊಲ್ಲಾಪುರದಿಂದ ಹೈದರಾಬಾದ್‌ಗೆ ತೆರಳುತ್ತಿತ್ತು. ರಾಯಭಾಗ ರೈಲ್ವೆ ನಿಲ್ದಾಣದಲ್ಲಿಯೇ ಆಕೆಗೆ ಹೆರಿಗೆ ಮಾಡಿಸಲಾಗಿದೆ, ಹೆರಿಗೆಗಾಗಿ ಅರ್ಧ ಗಂಟೆಗಳ ಕಾಲ ರೈಲನ್ನು ನಿಲ್ಲಿಸಿ ರೈಲ್ವೆ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ. 108 ಸಿಬ್ಬಂದಿಗಳು ರಾಯಭಾಗ ನಿಲ್ದಾಣಕ್ಕೆ ಬಂದು ರೈಲಿನಲ್ಲಿಯೇ ಹೆರಿಗೆ ಮಾಡಿಸಿದ್ದಾರೆ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ.

English summary
Pregnant woman who was traveling in a train near Kudachi of Belagavi district has delivered and gave birth to a baby. Train staff were stopped the train to help her for smooth and safety process of delivery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X