ಬೆಳಗಾವಿ : ಮಗನ ಸಾವಿನಿಂದ ನೊಂದ ತಾಯಿ, ಮಗಳು ಆತ್ಮಹತ್ಯೆ

Posted By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ಡಿಸೆಂಬರ್ 25 : ಮಗನ ಸಾವಿನಿಂದ ಮನನೊಂದು ತಾಯಿ ಮತ್ತು ಮಗಳು ಇಬ್ಬರೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ತಾಯಿ ರುಕ್ಮಿಣಿ ಶ್ಯಾಮ ಸುಂದರ ನಾವಗಾಂವಕರ (60), ಮಗಳು ಸರಿತಾ ಗಣೇಶ ಬುಲಬುಲೆ (30) ಎಂದು ಗುರುತಿಸಲಾಗಿದೆ.

ಹೈದರಾಬಾದ್: ಒಂದೇ ಕುಟುಂಬದ 7 ಜನ ಅನುಮಾನಾಸ್ಪದ ಸಾವು

Suicide

ಬೆಳಗಾವಿಯ ರೈಲ್ವೆ ಕಿಲ್ಲಾಗೇಟ್ ಬಳಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಬ್ಬರು ಬೆಳಗಾವಿ ನಗರದ ಗಣೇಶಪುರ ನಿವಾಸಿಗಳಾಗಿದ್ದಾರೆ. ಭಾನುವಾರ ಸಂತೋಷ ಶ್ಯಾಮಸುಂದರ ನಾಗಗಾಂವಕರ್ (35) ರೈಲ್ವೆ ಗೇಟ್ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಹುಬ್ಬಳ್ಳಿ : ಮಗನನ್ನು ಕೊಂದು ತಂದೆ ಆತ್ಮಹತ್ಯೆ

ಮಗನ ಸಾವಿನ ಸುದ್ದಿ ಕೇಳಿ ತಾಯಿ ಮತ್ತು ಮಗಳು ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A mother Rukmini Shyam Sundera (60) killed herself following the death of her 32 year-old son. Case registered in Belagavi railway police station.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ