ಬೆಳಗಾವಿಯಲ್ಲಿ ರಾಹುಲ್ ಗಾಂಧಿಗೆ ಮೋದಿ ಟಾಂಗ್

Posted By:
Subscribe to Oneindia Kannada

ಬೆಳಗಾವಿ, ನವೆಂಬರ್, 13: ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕೆಎಲ್ ಇ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಪ್ರಧಾನಿ ನರೇಂದ್ರ ಪರೋಕ್ಷವಾಗಿ ಟಾಂಗ್ ನೀಡಿದರು.

500ರೂ. ಹಾಗೂ 1000ರೂ. ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿರುವುದಕ್ಕೆ ಕಾಂಗ್ರೆಸ್ ನಿಂದ ವಿರೋಧ ವ್ಯಕ್ತವಾಗಿರುವುದಕ್ಕೆ, ಪರೋಕ್ಷವಾಗಿ ಪ್ರಸ್ತಾಪಿಸಿದ ಪ್ರಧಾನಿ ಮೋದಿಯವರು "ನಾನು ದೇಶದ ಜನರ ವಿಶ್ವಾಸ ತೆಗೆದುಕೊಂಡು ಈ ನಿರ್ಧಾರ ಕೈಗೊಂಡಿದ್ದೇನೆ" ಎಂದು ಹೇಳಿದರು.

ಸರ್ಕಾರದ ನಿರ್ಧಾರದಿಂದ ಹಲವು ಮಂದಿಗೆ ನಿದ್ದೆ ಬಂದಿಲ್ಲ. ನ.8ರಂದು ನಿದ್ದೇ ಮಾಡಿದವನೇ ನಿಜವಾದ ಶ್ರೀಮಂತ.ಗಂಗಾನದಿಯಲ್ಲಿ 25ಪೈಸೆ ಕೂಡ ಹಾಕದವರು ಇಂದು ನೋಟಿನ ಕಂತೆಗಳನ್ನೇ ಸುರಿಯುತ್ತಿದ್ದಾರೆ. ಎಂದು ವ್ಯಂಗ್ಯವಾಡಿದರು.

Modi reiterates call for support till 30 December in Belgaum

ಹಿಂದಿನ ಸರ್ಕಾರಗಳು ಕೋಟಿ ಕೋಟಿ ಹಣ ಲೂಟಿ ಮಾಡಿವೆ. ನನಗೆ 70 ತಿಂಗಳು ಸಮಯ ಕೊಡಿ ನುಂಗಿರುವ ಕಾಳಧನವನ್ನು ವಾಪಸ್ ತರುತ್ತೇನೆ ಎಂದು ಅವರು ಹೇಳಿದರು.ಕೋಟಿ ಕೋಟಿ ಲೂಟಿ ಮಾಡಿದವರು ಕೇವಲ 4 ಸಾವಿರಕ್ಕಾಗಿ ಕ್ಯೂನಲ್ಲಿ ನಿಂತಿದ್ದಾರೆ. ಎಂದು ಮೋದಿ ವ್ಯಂಗ್ಯವಾಡಿದರು.

ಧನಿಕರ ನಿದ್ದೆ ಕೆಡಿಸಿದ್ದಕ್ಕೆ ನನಗೆ ಸಂತೋಷವಿದೆ. ದೇಶದಲ್ಲಿ ಪ್ರಮಾಣಿಕರ ರಕ್ಷಣೆ ಆಗಬೇಕಿದೆ.ಬ್ಯಾಂಕ್ ಹಾಗೂ ಎಟಿಎಂ ಕೇಂದ್ರಗಳಿಗೆ ಮುಗಿಬೀಳುವ ಅಗತ್ಯವಿಲ್ಲ. ಸಮಾಧಾನದಿಂದ ಹಣ ವಿನಿಮಯ ಮಾಡಿಕೊಳ್ಳಿ ಎಂದು ಅವರು ಕರೆ ನೀಡಿದರು.

ಒಂದು ವರ್ಷದಲ್ಲಿ ಮಾಡಬೇಕಾದ ಕೆಲಸವನ್ನು ಬ್ಯಾಂಕ್ ಸಿಬ್ಬಂದಿ ಕೇವಲ 10ದಿನದಲ್ಲಿ ಮಾಡಿ ತೋರಿಸಿದ್ದಾರೆ ಅವರಿಗೆ ಧನ್ಯವಾದ ಎಂದು ಅವರು ಹೇಳಿದರು.

ಡಿಸೆಂಬರ್ 30ರ ವರೆಗೂ ಸಹನೆಯಿಂದ ಕಾದು ನೋಡಿ ಕಪ್ಪು ಹಣ ಹೊರತೆಗೆಯಲು 50 ದಿನ ಕಾಯಲೇಬೇಕು ಎಂದು ಅವರು ಹೇಳಿದರು.

ಕಪ್ಪು ಹಣ ಪತ್ತೆ ಹಾಗೂ ಬೇನಾಮಿ ಆಸ್ತಿ ಹೊಂದಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ. ಅದಕ್ಕಾಗಿ ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಳ್ಳಲಾಗುವುದು ಎಂದು ಮೋದಿ ಹೇಳಿದರು.

ಪ್ರಮಾಣಿಕರು ನಾಗರಿಕರು ನನ್ನ ಮೇಲೆ ಭರವಸೆಯಿಟ್ಟು ಮತಹಾಕಿದ್ದಾರೆ. ಅವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಮುಂದಡಿ ಇಟ್ಟಿದ್ದೇವೆ ಎಂದು ಅವರು ಹೇಳಿದರು.

ದೇಶದಲ್ಲಿ ಮಾಡಿರುವ ಲೂಟಿಯನ್ನು ಸ್ವಚ್ಛಗೊಳಿಸಲು ನನಗೆ 70 ತಿಂಗಳು ಕೊಡಿ ಸ್ವಚ್ಛ ಮಾಡಿ ತೋರಿಸುತ್ತೇನೆ. ನನ್ನ ಪ್ರಾಮಾಣಿಕತೆಯ ಮೇಲೆ ನಿಮಗೆ ನಂಬಿಕೆಯಿದ್ದರೆ ಎದ್ದು ನಿಂತು ನಿಮ್ಮ ಕರತಾಡನದ ಮೂಲಕ ನನಗೆ ಆಶೀರ್ವಾದ ಮಾಡಬೇಕು ಎಂದು ವಿನಂತಿಸಿದರು.

ಈ ವೇಳೆ ಸ್ಥಳದಲ್ಲಿ ನೆರೆದಿದ್ದ ಆಪಾರ ಸಂಖ್ಯೆಯ ಜನರು, ವಿದ್ಯಾರ್ಥಿಗಳು ಎದ್ದು ನಿಂತು ಧೀರ್ಘ ಕರತಾಡನ ಮಾಡಿದರು. ಇದೇ ವೇಳೆ ಮೋದಿಯವರ ಎದುರಿನ ಸಾಲಿನಲ್ಲಿ ಕುಳಿತಿದ್ದ ಪತ್ರಕರ್ತರೂ ಕೂಡ ಎದ್ದು ನಿಂತು ಚಪ್ಪಾಳೆ ತಟ್ಟಿದರು.ಇನ್ನು ಕೆಎಲ್ ಇ ಸಂಸ್ಥೆ ಬಗ್ಗೆ ಮತನಾಡಿದ ಮೋದಿ ಅವರು "ಉತ್ತಮ ಶಿಕ್ಷಕರು ಹಲವರು ಇರುತ್ತಾರೆ ಆದರೆ, ಅಮರ ಶಿಕ್ಷಕರು ಕೆಲವರು ಮಾತ್ರ ಇರುತ್ತಾರೆ.

ಸಪ್ತ ಋಷಿಗಳು ಇಂತಹ ಅಮರ ಶಿಕ್ಷಕರಾಗಿರುತ್ತಾರೆ, ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಹಾಗೂ ಕ್ರಾಂತಿಯೋಗಿ ಬಸವಣ್ಣ ಅವರ ಸ್ಪೂರ್ಥಿಯಿಂದ ಕೆಎಲ್ ಇ ಸಂಸ್ಥೆ ಆರಂಭವಾಗಿದೆ" ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಎಲ್ ಇ ಶಿಕ್ಷಣ ಸಂಸ್ಥೆಗಳ ಚೇರ್ಮನ್ ಪ್ರಭಾಕರ್ ಕೋರೆ, ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್, ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra modi call for supportt till 30 Dec, in valedictory of the year-long centenary celebrations of the Karnataka Lingayat Education (KLE) Society. in Belagavi on Sunday (Nov 13)
Please Wait while comments are loading...