ಮಹದಾಯಿ ಕುರಿತು ಮಧ್ಯಸ್ಥಿಕೆಗೆ ಮೋದಿ ಒಪ್ಪಿರಲಿಲ್ಲ: ಸಿಎಂ

Posted By:
Subscribe to Oneindia Kannada

ಬೆಳಗಾವಿ, ಡಿಸೆಂಬರ್ 22: ಮಹದಾಯಿ ವಿವಾದ ಇತ್ಯರ್ಥ ಪಡಿಸಲು ಗೋವಾ ರಾಜ್ಯದ ಜೊತೆ ಮಾತುಕತೆಗೆ ಮುಂದಾಳತ್ವ ವಹಿಸಲು ಕೇಳಿದಾಗ ಪ್ರಧಾನಿ ಮೋದಿ ಅದಕ್ಕೆ ಸ್ಪಂದಿಸಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಗೆಲುವು ರಾಹುಲ್ ಗಾಂಧಿಗೆ ಮೊದಲ ಗಿಫ್ಟ್: ಸಿದ್ದರಾಮಯ್ಯ

ಬೆಳಗಾವಿಯ ರಾಮದುರ್ಗದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ ನಂತರ ನವಕರ್ನಾಟಕ ನಿರ್ಮಾಣ ಯಾತ್ರೆಯ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಮಹದಾಯಿ ವಿವಾದದಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿಯವರನ್ನು ಕರೆಸಿ, ಮಧ್ಯಸ್ಥಿಕೆ ವಹಿಸುವಂತೆ ಮೋದಿಯವರನ್ನು ಕೋರಿದ್ದೆ ಆದರೆ ಅದಕ್ಕೆ ಮೋದಿಯವರು ಒಪ್ಪಲಿಲ್ಲ ಎಂದು ಮುಖ್ಯಮಂತ್ರಿ ಅವರು ಹೇಳಿದರು.

ಯೋಗಿಯ ಬಿಟ್ಟಿ ಉಪದೇಶ ಬೇಕಾಗಿಲ್ಲ : ಸಿದ್ದು ಕೆಂಡಾಮಂಡಲ

ಕುಡಿಯುವ ಉದ್ದೇಶಕ್ಕಾಗಿ 7.56 ಟಿ.ಎಂ.ಸಿ ನೀರು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವು ಗೋವಾ ಸರ್ಕಾರಕ್ಕೆ ಸೂಚಿಸಿತ್ತು. ಯಡಿಯೂರಪ್ಪನವರಿಗೆ ಅವರು ಈಗ ಪತ್ರ ಬರೆದಿದ್ದಾರೆ. ನಿಯಮದ ಪ್ರಕಾರ ನಮಗೆ ಬರೆಯಬೇಕಾಗಿತ್ತು, ಬರೆದಿಲ್ಲ ಆದರೂ ನಾವೇ ನಮ್ಮನ್ನು ಸಭೆಗೆ ಕರೆಯುವಂತೆ ಕೋರಿದ್ದೇನೆ ಮತ್ತು ಮಾತುಕತೆಗೆ ಹೋಗಲಿದ್ದೇನೆ ಎಂದು ಹೇಳಿದರು.

ಅಂಬಿಗರ ಚೌಡಯ್ಯ ಏತನೀರಾವರಿ

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು ನಮ್ಮ ಸರ್ಕಾರ, ಮೀನುಗಾರರ ಸಾಲ ಮನ್ನಾ ಮಾಡಿದ್ದು ನಮ್ಮ ಸರ್ಕಾರ ಎಂದ ಸಿದ್ದರಾಮಯ್ಯ ಅವರು ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರಧಾರೆ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟೀನ್, ಋಣಮುಕ್ತ, ಸಾಲಮನ್ನಾ, ಮನಸ್ವಿನಿ, ಮೈತ್ರಿ, ಶಾದಿಭಾಗ್ಯ ಇವೆಲ್ಲ ನಮ್ಮ ಯೋಜನೆಗಳು ಎಂದರು.

ನೀರಾವರಿ ಅವಶ್ಯಕತೆ ಅರಿತ ಸರ್ಕಾರ

ನೀರಾವರಿ ಅವಶ್ಯಕತೆ ಅರಿತ ಸರ್ಕಾರ

ಸಾಲಾಪುರ, ವೀರಭದ್ರೇಶ್ವರ ಏತ ನೀರಾವರಿ ರಾಮದುರ್ಗದಲ್ಲಿ ಜಾರಿಯಾಗಿದ್ದರೆ ಅದು ಅಶೋಕ್ ಪಟ್ಟಣ್ ಅವರ ಶ್ರಮದ ಪ್ರತಿಫಲ ಎಂದು ಹೆಮ್ಮೆಯಿಂದ ಹೇಳುತ್ತೇನೆ. ರೈತರಿಗೆ ನೀರಾವರಿ ಬೆನ್ನೆಲುಬು ಎಂಬುದನ್ನು ಅರಿತು ನಮ್ಮ ಸರ್ಕಾರ ನೀರಾವರಿಗೆ ಪ್ರಥಮ ಪ್ರಾಶಸ್ತ್ಯ ನೀಡಿದ್ದೇವೆ ಎಂದರು.

ಬೆಳಗಾವಿ ಅಭಿವೃದ್ಧಿಯಲ್ಲಿ ಮುಂದಿದೆ

ಬೆಳಗಾವಿ ಅಭಿವೃದ್ಧಿಯಲ್ಲಿ ಮುಂದಿದೆ

ರೂ.2,500 ಕೋಟಿ ಹಣವನ್ನು 1 ಕ್ಷೇತ್ರಕ್ಕೆ ನಾಲ್ಕೂವರೆ ವರ್ಷಗಳಲ್ಲಿ ಅನುದಾನ ಬಂದಿರುವ ಇತಿಹಾಸವಿದ್ದರೆ ಅದು ಬೆಳಗಾವಿಗೆ ಮೊದಲು ಎಂಬುದು ಹೆಮ್ಮೆಯ ಸಂಗತಿ, ಅಶೋಕ್ ಪಟ್ಟಣ್ ಅವರು ಮುಖ್ಯ ಸಚೇತಕರಾಗಿ ಆಯ್ಕೆಯಾಗಿದ್ದರೂ, ಅವರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಹಿಂದೆ ಉಳಿಯಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

99,742 ಎಕರೆಗೆ ಹನಿ ನೀರಾವರಿ

99,742 ಎಕರೆಗೆ ಹನಿ ನೀರಾವರಿ

ಬೆಳಗಾವಿ ಜಿಲ್ಲೆಯ ರೈತ ಸಮುದಾಯಕ್ಕೆ ನೆರವಾಗುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದೆ. 1,60,945.07 ಎಕರೆಗೆ ನೀರಾವರಿ ಕಲ್ಪಿಸಲಾಗಿದೆ. ಸಣ್ಣ ನೀರಾವರಿ ಇಲಖೆಯಿಂದ 472 ಕಾಮಗಾರಿಗಳನ್ನು ಮಾಡಲಾಗಿದೆ, 99,742 ಎಕರೆ ಭುಮಿಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಬೆಳಗಾವಿ ಜಿಲ್ಲೆಯಲ್ಲಿ ಕೃಷಿಗೆ ನೀಡಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
CM Siddaramaiah said In Mahadevi controversy, we asked PM Modi to call chief minister of Goa and intervene in solving water issue, but Modi did not agree. The tribunal also advised the court to solve the problem.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ