ಬೆಳಗಾವಿ ಯುವತಿ ಮೇಲೆ ಎರಡು ತಿಂಗಳು ಅತ್ಯಾಚಾರ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ಸೆಪ್ಟೆಂಬರ್ 7: ಇಂಥ ಹೀನಕೃತ್ಯಕ್ಕೆ ಈ ಮೂವರು ಪಾಪಿಗಳಿಗೆ ಎಂಥ ಶಿಕ್ಷೆಯಾಗಬೇಕು? ಬೆಳಗಾವಿ ಪೊಲೀಸರು ಮೊನ್ನೆ ಈ ಮೂವರನ್ನು ಬಂಧಿಸುವವರೆಗೆ 17 ವರ್ಷದ ಯುವತಿ ಮೇಲೆ ನಿರಂತರ ಎರಡು ತಿಂಗಳು ಅತ್ಯಾಚಾರ ಎಸಗಿದ್ದಾರೆ.

rape

ಗೋಪಾಲ್ ಪುನಪ್ಪ ಪರವಾಡ್ಕರ್, ಅಶೋಕ್ ಬಲ್ ರಾಮ್ ನಾಯ್ಕ್, ರಮೇಶ್ ಮಲ್ಲಿಕಾರ್ಜುನ ಚೌಗಲ ಅತ್ಯಾಚಾರ ಪ್ರಕರಣದಲ್ಲಿ ಬಂಧಿತ ಆರೋಪಿಗಳು.

ಬೆಳಗಾವಿಯ ಅಝಂ ನಗರದಲ್ಲಿ 17 ವರ್ಷದ ಯುವತಿಯನ್ನು ರಕ್ಷಿಸಲಾಗಿದೆ. ಆಕೆ ಮೂಲತಃ ನರಗುಂದ ಗ್ರಾಮದವಳು. ಜೂನ್ 20ರಿಂದ ನಾಪತ್ತೆಯಾಗಿದ್ದಳು.[ಬೆಂಗಳೂರು: ಪಿಜಿಗೆ ನುಗ್ಗಿ ಐಟಿ ಉದ್ಯೋಗಿ ಮೇಲೆ ರೇಪ್]

ಆಕೆಯ ತಂದೆ ಬಳಿಗೆ ಕರೆದುಕೊಂಡು ಹೋಗ್ತೀವಿ ಎಂದು ಹೇಳಿ, ಆರೋಪಿಗಳು ಆಕೆಯನ್ನು ಅಪಹರಿಸಿದ್ದಾರೆ. ಗೋಪಾಲ್ ಹಾಗೂ ಅಶೋಕ್ ಅಪಹರಿಸಿ, ಕಾಡಿನಲ್ಲಿರಿಸಿ ಎರಡು ದಿನ ಅತ್ಯಾಚಾರ ನಡೆಸಿದ್ದಾರೆ.

ಆ ನಂತರ ಬೆಳಗಾವಿಗೆ ಕರೆತಂದು, ರಮೇಶ್ ಎಂಬಾತನಿಗೆ ಆಕೆಯನ್ನು ಮಾರಿದ್ದು, ಆತ ಕೂಡ ತನ್ನ ಮನೆಯಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ.[ಬೆಂಗಳೂರಿನಲ್ಲಿ ಹೆಣವನ್ನು ಸಂಭೋಗಿಸಿದ ದುರುಳರ ಬಂಧನ]

ಗೋಪಾಲ್ ಹಾಗೂ ಅಶೋಕ್ ಕಾಲ್ ರೆಕಾರ್ಡ್ಸ್ ಆಧಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Belagavi police rescued a 17-year-old girl from Azam Nagar in Belagavi, who was kidnapped and allegedly raped for two months by three persons. Gopal Punappa Parawadkar, Ashok Balram Naik and Ramesh Mallikarjun Chougala have been arrested and booked under POCSO.
Please Wait while comments are loading...